ಸಾಲು ಸಾಲು ಹಬ್ಬಗಳು: ಕಸ ವಿಲೇವಾರಿ ಸಿದ್ಧತೆಗೆ ಬಿಬಿಎಂಪಿ ಸೂಚನೆ

Kannadaprabha News   | Asianet News
Published : Jul 31, 2020, 07:51 AM ISTUpdated : Jul 31, 2020, 07:52 AM IST
ಸಾಲು ಸಾಲು ಹಬ್ಬಗಳು: ಕಸ ವಿಲೇವಾರಿ ಸಿದ್ಧತೆಗೆ ಬಿಬಿಎಂಪಿ ಸೂಚನೆ

ಸಾರಾಂಶ

ಸೋಂಕಿನ ಭೀತಿ ಇರುವ ಹಿನ್ನೆಲೆಯಲ್ಲಿ ಕಸ ಉತ್ಪತ್ತಿ ಈ ಹಿಂದಿಗಿಂತ ಶೇ.50 ರಷ್ಟು ಕಡಿಮೆ ಉತ್ಪತ್ತಿಯಾಗುವ ಸಾಧ್ಯತೆ| ಕಸ ವಿಲೇವಾರಿಗೆ ಹೆಚ್ಚು ವಾಹನಗಳು ಅವಶ್ಯವಿದ್ದಲ್ಲಿ ನಿಯೋಜನೆ ಮಾಡಿಕೊಳ್ಳುವಂತೆ ತಿಳಿಸಿದ ಬಿಬಿಎಂಪಿ|  

ಬೆಂಗಳೂರು(ಜು.31): ವರಮಹಾಲಕ್ಷ್ಮಿ, ಬಕ್ರೀದ್‌, ಸ್ವರ್ಣಗೌರಿ ವ್ರತ, ಗಣೇಶ ಚತುರ್ಥಿ, ಆಯುಧ ಪೂಜೆ, ಈದ್‌ಮಿಲಾದ್‌, ವಿಜಯದಶಮಿ, ಬಲಿಪಾಡ್ಯಮಿ ಹೀಗೆ ಸರಣಿ ಹಬ್ಬಗಳು ಇರುವುದರಿಂದ ನಗರದಲ್ಲಿ ಕಸ ವಿಲೇವಾರಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸೋಂಕಿನ ಭೀತಿ ಇರುವ ಹಿನ್ನೆಲೆಯಲ್ಲಿ ಕಸ ಉತ್ಪತ್ತಿ ಈ ಹಿಂದಿಗಿಂತ ಶೇ.50 ರಷ್ಟು ಕಡಿಮೆ ಉತ್ಪತ್ತಿಯಾಗುವ ಸಾಧ್ಯತೆ ಇದೆ. ಆದರೂ ಕಸ ವಿಲೇವಾರಿಗೆ ಹೆಚ್ಚು ವಾಹನಗಳು ಅವಶ್ಯವಿದ್ದಲ್ಲಿ ನಿಯೋಜನೆ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.

ಬೆಂಗಳೂರು: ಕೊರೋನಾ ನಡುವೆ ವರಮಹಾಲಕ್ಷ್ಮಿ ಹಬ್ಬ ಸಡಗರ

ಬಕ್ರೀದ್‌ ಹಬ್ಬದ ಪ್ರಯುಕ್ತ ಉತ್ಪತ್ತಿಯಾಗುವ ಪ್ರಾಣಿ ತ್ಯಾಜ್ಯವನ್ನು ಸಾಗಿಸಲು ಹೆಚ್ಚಿನ ವಾಹನಗಳ ಅಗತ್ಯತೆ ಇದ್ದರೆ, ಹಬ್ಬಕ್ಕೆ ಮುಂಚಿತವಾಗಿ ಅನುಮೋದನೆ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ. ಪ್ರಾಣಿ ತ್ಯಾಜ್ಯವನ್ನು ಸಂಗ್ರಹಣೆ ಮಾಡಿ ಕೋಗಿಲು ಬಂಡೆಯಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಹಾಗೂ ವಿಲೇವಾರಿಗೊಳಿಸುವ ಪ್ರತಿ ವಾಹನದ ಜಿಯೋ ಮ್ಯಾಪಿಂಗ್‌ ಆಧಾರದ ಮೇಲೆ ಹಣ ಪಾವತಿ ಮಾಡುವಂತೆ ನಿರ್ದೇಶಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ
ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 10 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!