ಶೇ.25ರಷ್ಟುಸೋಂಕಿತರಿಗಷ್ಟೇ ಜ್ವರ: ಕೊರೋನಾ ಲಕ್ಷಣಕ್ಕೆ ಹೊಸ ಸೇರ್ಪಡೆ!

By Kannadaprabha NewsFirst Published Jul 31, 2020, 7:11 AM IST
Highlights

ಶೇ.25ರಷ್ಟುಸೋಂಕಿತರಿಗೆ ಮಾತ್ರ ಜ್ವರದ ಲಕ್ಷಣ| ಶೇ.75 ಕೇಸಲ್ಲಿ ಕೆಮ್ಮು, ನೆಗಡಿ, ತಲೆನೋವು|  ಜಯದೇವ ಹೃದ್ರೋಗ ಸಂಸ್ಥೆ ಅಧ್ಯಯನ

ಬೆಂಗಳೂರು(ಜು.31): ರಾಜ್ಯದಲ್ಲಿ ಕೊರೋನಾ ಲಕ್ಷಣಗಳ ಮೂಲಕ ಸೋಂಕು ದೃಢಪಟ್ಟವರಲ್ಲಿ ಪೈಕಿ ಶೇ.25ರಷ್ಟುಪ್ರಕರಣಗಳಲ್ಲಿ ಜ್ವರದ ಲಕ್ಷಣ ಕಾಣಿಸಿಕೊಂಡರೆ ಉಳಿದ ಶೇ.75ರಷ್ಟುಪ್ರಕರಣಗಳಲ್ಲಿ ಕೆಮ್ಮು, ನೆಗಡಿ, ತಲೆನೋವು ಹೀಗೆ ಬೇರೆ ಬೇರೆ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ಅವಲೋಕನದಲ್ಲಿ ಬೆಳಕಿಗೆ ಬಂದಿದೆ.

ವೆಂಟಿಲೇಟರ್‌, ಆಕ್ಸಿಜನ್‌ ಬೆಡ್‌ಗಳಿಲ್ಲದೆ ಖಾಲಿ ಬೆಡ್‌ ನೀಡಿದರೇನು ಪ್ರಯೋಜನ..? ಖಾದರ್ ಕಿಡಿ

ಜ್ವರ, ಕೆಮ್ಮು, ನೆಗಡಿ, ಉಸಿರಾಟ ತೊಂದರೆ ಸೇರಿದಂತೆ ಇದುವರೆಗೂ ಕೊರೋನಾಗೆ ಅನೇಕ ಲಕ್ಷಣಗಳನ್ನು ಗುರುತಿಸಲಾಗಿದೆ. ಈ ಪೈಕಿ ಯಾವ್ಯಾವ ಲಕ್ಷಣದಿಂದ ಎಷ್ಟುಪ್ರಮಾಣದ ಸೋಂಕು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಜಯದೇವ ಸಂಸ್ಥೆ ಒಂದು ಅವಲೋಕನ ನಡೆಸಿದೆ. ಶೇ.25ರಷ್ಟುಪ್ರಕರಣಗಳಲ್ಲಿ ಜ್ವರದ ಲಕ್ಷಣಗಳು ವರದಿಯಾಗಿವೆ. ಉಳಿದ ಶೇ.75 ರಷ್ಟುಪ್ರಕರಣಗಳಲ್ಲಿ ಇತರೆ ಲಕ್ಷಣಗಳು ವರದಿಯಾಗಿವೆ ಎಂದು ಆಸ್ಪತ್ರೆಯ ವೈದ್ಯರು ಹೇಳುತ್ತಾರೆ.

ದೇಶದಲ್ಲಿ ದಾಖಲೆಯ 54000+ ಕೇಸ್‌, 16 ಲಕ್ಷ ದಾಟಿದ ಸೋಂಕಿರ ಸಂಖ್ಯೆ!

ಬಿಕ್ಕಳಿಕೆ ಕೂಡ ಲಕ್ಷಣ:

ಆರಂಭದಲ್ಲಿ ಕೊವಿಡ್‌ 19 ರೋಗಕ್ಕೆ ಜ್ವರವೇ ಪ್ರಧಾನ ಲಕ್ಷಣವೆಂದು ಹೇಳಲಾಗುತ್ತಿತ್ತು. ನಂತರ ಅಧ್ಯಯನಗಳು ನಡೆದಂತೆ ನಿರಂತರ ಬಿಕ್ಕಳಿಕೆ ಇರುವ ವ್ಯಕ್ತಿಗಳಿಗೂ ಸೋಂಕು ದೃಢಪಟ್ಟಾಗ ಬಿಕ್ಕಳಿಕೆ ಕೂಡ ಕೋವಿಡ್‌ ಲಕ್ಷಣ ಎಂದು ನಿರ್ಧರಿಸಲಾಗಿದೆ. ಆದರೆ, ಈಗ ಗುರುತಿಸಿರುವ ಲಕ್ಷಣಗಳು ಕಾಣಿಸಿಕೊಂಡವರೆಲ್ಲರಿಗೂ ಸೋಂಕು ತಗುಲಿರುತ್ತದೆ ಎಂದೇನೂ ಅಲ್ಲ. ಅದು ಪರೀಕ್ಷೆಗೆ ಒಳಪಟ್ಟಾಗಲೇ ತಿಳಿಯುವುದು. ಆದರೆ, ಒಂದು ಬಹುಮುಖ್ಯ ಅಂಶವೆಂದರೆ ಯಾವುದೇ ಮೂಲದಿಂದ ಸೋಂಕು ದೃಢಪಟ್ಟವರಿಗೆ ರುಚಿ ಮತ್ತು ವಾಸನೆ ಸಿಗುವುದಿಲ್ಲ ಎಂಬುದು ಹೆಚ್ಚಿನ ಪ್ರಮಾಣದಲ್ಲಿ ಖಚಿತವಾಗಿದೆ ಎಂದು ಹೆಸರೇಳಲಿಚ್ಛಿಸದ ತಜ್ಞರೊಬ್ಬರು ಹೇಳಿದರು.

click me!