ಗಾರ್ಡನ್‌ಸಿಟಿಯಲ್ಲಿ ತಲೆ ಎತ್ತಲಿದೆ ದೇಶದ ಅತಿ ಎತ್ತರದ ಸ್ಕೈಡೆಕ್‌! ವಿಕ್ಷಣಾ ಗೋಪುರದ ಜೊತೆಗೆ ಏನೆಲ್ಲ ಇರಲಿದೆ ಗೊತ್ತಾ?

Published : Jan 02, 2024, 05:48 AM IST
ಗಾರ್ಡನ್‌ಸಿಟಿಯಲ್ಲಿ ತಲೆ ಎತ್ತಲಿದೆ ದೇಶದ ಅತಿ ಎತ್ತರದ ಸ್ಕೈಡೆಕ್‌! ವಿಕ್ಷಣಾ ಗೋಪುರದ ಜೊತೆಗೆ ಏನೆಲ್ಲ ಇರಲಿದೆ ಗೊತ್ತಾ?

ಸಾರಾಂಶ

ದೇಶದಲ್ಲೇ ಅತಿ ಎತ್ತರದ ಸ್ಕೈಡೆಕ್‌ (ವೀಕ್ಷಣಾ ಗೋಪುರ) ನಿರ್ಮಾಣಕ್ಕೆ ಬಿಬಿಎಂಪಿ ಸಿದ್ಧತೆ ನಡೆಸಿದ್ದು, ಯಶವಂತಪುರ ಅಥವಾ ಬೈಯಪನಹಳ್ಳಿಯ ಎನ್‌ಜಿಇಎಫ್‌ ಕಾರ್ಖಾನೆಯ ಜಾಗದಲ್ಲಿ ಸ್ಕೈಡೆಕ್‌ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.

ಗಿರೀಶ್‌ ಗರಗ

ಬೆಂಗಳೂರು (ಡಿ.2) : ದೇಶದಲ್ಲೇ ಅತಿ ಎತ್ತರದ ಸ್ಕೈಡೆಕ್‌ (ವೀಕ್ಷಣಾ ಗೋಪುರ) ನಿರ್ಮಾಣಕ್ಕೆ ಬಿಬಿಎಂಪಿ ಸಿದ್ಧತೆ ನಡೆಸಿದ್ದು, ಯಶವಂತಪುರ ಅಥವಾ ಬೈಯಪನಹಳ್ಳಿಯ ಎನ್‌ಜಿಇಎಫ್‌ ಕಾರ್ಖಾನೆಯ ಜಾಗದಲ್ಲಿ ಸ್ಕೈಡೆಕ್‌ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.

ಗಾರ್ಡನ್‌ ಸಿಟಿ ಬೆಂಗಳೂರಿನ ಸೌಂದರ್ಯವನ್ನು ಆಗಸದೆತ್ತರದ ವೀಕ್ಷಣಾ ಗೋಪುರದಿಂದ ಜನರಿಗೆ ತೋರಿಸಲು ಹಾಗೂ ನಗರಕ್ಕೆ ಒಂದು ಹೆಗ್ಗುರುತನ್ನು ನಿರ್ಮಿಸಲು ರಾಜ್ಯ ಸರ್ಕಾರ 250 ಮೀ. ಎತ್ತರದ ಸ್ಕೈಡೆಕ್‌ ನಿರ್ಮಾಣಕ್ಕೆ ನಿರ್ಧರಿಸಿದೆ. ಕಳೆದ ಅಕ್ಟೋಬರ್‌ನಿಂದ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಅಧಿಕಾರಿಗಳ ಹಾಗೂ ಖಾಸಗಿ ಸಂಸ್ಥೆಗಳೊಂದಿಗೆ ಹಲವು ಸುತ್ತಿನ ಸಭೆ ನಡೆಸಲಾಗಿದೆ. ಇದೀಗ ಯೋಜನೆ ಅನುಷ್ಠಾನದ ಹೊಣೆಯನ್ನು ಬಿಬಿಎಂಪಿಗೆ ನೀಡಲಾಗಿದ್ದು, ಯಶವಂತಪುರ ಅಥವಾ ಬೈಯಪನಹಳ್ಳಿಯ ಎನ್‌ಜಿಇಎಫ್‌ ಪ್ರದೇಶದಲ್ಲಿ ದೇಶದ ಅತಿ ಎತ್ತರದ ವೀಕ್ಷಣಾ ಗೋಪುರ ನಿರ್ಮಿಸಲು ನಿರ್ಧರಿಸಲಾಗಿದೆ. 

ರಾಜ್ಯಾದ್ಯಂತ ಎರಡೇ ದಿನದಲ್ಲಿ ₹417 ಕೋಟಿ ಮದ್ಯ ಬಿಕರಿ!

ಡಿಪಿಆರ್‌ ಸಿದ್ಧಪಡಿಸಲು ಮುಂದಾದ ಬಿಬಿಎಂಪಿ

ಈ ವೀಕ್ಷಣಾ ಗೋಪುರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಚರ್ಚೆಗಳಾಗಿದ್ದು, ಯಾವುದೇ ರೀತಿಯ ರಚನಾತ್ಮಕ ಪ್ರಕ್ರಿಯೆಗಳು ನಡೆದಿಲ್ಲ. ಇದೀಗ ಬಿಬಿಎಂಪಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಡಿಪಿಆರ್‌ ಸಿದ್ಧಪಡಿಸಲು ಮುಂದಾಗಿದೆ. ಅದಕ್ಕಾಗಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿದ್ದು, ಅದರಲ್ಲಿ ಯಶವಂತಪುರ ಅಥವಾ ಬೈಯಪನಹಳ್ಳಿಯ ಎನ್‌ಜಿಇಎಫ್‌ನಲ್ಲಿ ಸ್ಕೈಡೆಕ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಿಪಿಆರ್‌ ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಅದರಲ್ಲೂ ಬಿಬಿಎಂಪಿ ಗುರುತಿಸಿರುವ ಎರಡು ಜಾಗಗಳ ಪೈಕಿ ಎಲ್ಲಿ ಸ್ಕೈಡೆಕ್‌ ನಿರ್ಮಿಸಿದರೆ ಒಳಿತು ಎಂಬುದರ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಅದರ ವರದಿ ಯನ್ನು ಡಿಪಿಆರ್‌ ಜತೆಗೆ ನೀಡಬೇಕಿದೆ. ಹಾಗೆಯೇ, ಯೋಜನಾ ವೆಚ್ಚ ಎಷ್ಟಾಗಲಿದೆ, ಸ್ಕೈಡೆಕ್‌ ನಿರ್ಮಾಣಕ್ಕೆ ಎಷ್ಟು ಅವಧಿ ಬೇಕಾಗಲಿದೆ ಎಂಬಂತಹ ಮಾಹಿತಿಗಳೂ ಡಿಪಿಆರ್‌ನಲ್ಲಿ ಇರಬೇಕು ಎಂದು ಟೆಂಡರ್‌ ದಾಖಲೆಯಲ್ಲಿ ತಿಳಿಸಲಾಗಿದೆ.

ವಾಣಿಜ್ಯ ಚಟುವಟಿಕೆಯ ಕೇಂದ್ರವಾಗಲಿರುವ

250 ಮೀ ಎತ್ತರದ ಸ್ಕೈಡೆಕ್‌ ಕೇವಲ ವೀಕ್ಷಣಾ ಗೋಪುರವಾಗಿ ಮೀಸಲಿರದೆ ವಾಣಿಜ್ಯ ಚಟುವಟಿಕೆಯ ಕೇಂದ್ರವಾಗಿರಲಿದೆ. ಡಿಪಿಆರ್‌ನಲ್ಲಿ ಸ್ಕೈಡೆಕ್‌ ನಿರ್ಮಾಣದ ಜತೆಗೆ ಅದನ್ನು ವಾಣಿಜ್ಯವಾಗಿ ಹೇಗೆ ಬಳಕೆ ಮಾಡಬಹುದು, ಯಾವೆಲ್ಲ ವಾಣಿಜ್ಯ ಚಟುವಟಿಕೆ ಮಾಡಬಹುದು ಎಂಬುದನ್ನು ತಿಳಿಸಬೇಕು ಎಂಬ ಕುರಿತು ಗುತ್ತಿಗೆ ಸಂಸ್ಥೆಗೆ ಷರತ್ತು ವಿಧಿಸಲು ನಿರ್ಧರಿಸಲಾಗಿದೆ. ಪ್ರಮುಖವಾಗಿ ಸ್ಕೈಡೆಕ್‌ನಲ್ಲಿ ವಾಹನ ನಿಲುಗಡೆಗೆ ಅವಕಾಶ, ಮ್ಯೂಸಿಯಂ, ರೆಸ್ಟೋರೆಂಟ್‌ಗಳು, ಸಿನಿಮಾ ಮಂದಿರ, ಶಾಪಿಂಗ್‌ ಮಳಿಗೆಗಳು ಹೀಗೆ ಹಲವು ವಾಣಿಜ್ಯ ಚಟುವಟಿಕೆಗಳಿಗೆ ಸ್ಕೈಡೆಕ್‌ನಲ್ಲಿ ಅವಕಾಶ ನೀಡಲಾಗುತ್ತದೆ ಎಂದು ಅಧಿಕಾರಿ ಗಳು ತಿಳಿಸಿದ್ದಾರೆ.

ಡಿಪಿಆರ್‌ ಮೇಲುಸ್ತುವಾರಿಗಾಗಿಯೇ ಅಧಿಕಾರಿಗಳ ಸಮಿತಿ

ಡಿಪಿಆರ್‌ ಸಿದ್ಧಪಡಿಸುವ ಗುತ್ತಿಗೆ ಪಡೆಯುವ ಸಂಸ್ಥೆಯ ಕಾರ್ಯದ ಮೇಲೆ ನಿಗಾವಹಿಸುವುದು, ಡಿಪಿಆರ್‌ನಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ಐವರು ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತರು ಸಮಿತಿಯ ಅಧ್ಯಕ್ಷರಾಗಿರಲಿದ್ದು, ಬಿಬಿಎಂಪಿ ಹಣಕಾಸು ಹಾಗೂ ಯೋಜನಾ ವಿಭಾಗದ ವಿಶೇಷ ಆಯುಕ್ತರುಗಳು, ಪ್ರಧಾನ ಎಂಜಿನಿಯರ್‌ಗಳು ಸಮಿತಿಯ ಸದಸ್ಯರಾಗಿ ರಲಿದ್ದಾರೆ. ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಸದಸ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಲಿದ್ದಾರೆ. 

ನ್ನನ್ನು ಒಳಗೆ ಕಳಿಸಲು ಬಿಜೆಪಿ ನಾಯಕರಿಂದ ಷಡ್ಯಂತ್ರ, ನಾನು ಜೈಲಿಗೆ ಹೋಗಲು ಸಿದ್ಧ ಎಂದ ಡಿಕೆಶಿ

ರಾಮೇಶ್ವರ ಟಿವಿ ಟವರ್‌ ಎತ್ತರದ ನಿರ್ಮಾಣ

ಸದ್ಯ ದೇಶದಲ್ಲಿ ಅತಿ ಎತ್ತರದ ನಿರ್ಮಾಣವೆಂದರೆ ತಮಿಳುನಾಡಿದ ರಾಮೇಶ್ವರದ ಟಿವಿ ಟವರ್‌ ಆಗಿದ್ದು, 323 ಮೀ. ಎತ್ತರವಿದೆ. ಅದಾದ ನಂತರ ಗುಜರಾತ್‌ನ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರ ಏಕತಾ ಪ್ರತಿಮೆ 182 ಮೀ. ಎತ್ತರವಿದೆ. ಆದರೆ, ಇವೆರಡೂ ನಿರ್ಮಾಣಗಳ ತುದಿಗೆ ಸಾರ್ವಜನಿಕರು ತೆರಳಲು ಅವಕಾಶವಿಲ್ಲ. ಅಲ್ಲದೆ, ಇವೆರಡೂ ವೀಕ್ಷಣಾ ಗೋಪುರವಲ್ಲ. ಇದೀಗ ಬೆಂಗಳೂರಿನಲ್ಲಿ 250 ಮೀ. ಎತ್ತರದ ವೀಕ್ಷಣಾ ಗೋಪುರ ನಿರ್ಮಾಣದಿಂದ ದೇಶದಲ್ಲಿಯೇ ಅತಿ ಎತ್ತರದ ವೀಕ್ಷಣಾ ಗೋಪುರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್