ಬೆಂಗಳೂರು ಕಂಬಳ ಆಯೋಜಕರಿಗೆ ಬಿಗ್ ಶಾಕ್‌ ಕೊಟ್ಟ ಬಿಬಿಎಂಪಿ

By Sathish Kumar KH  |  First Published Nov 25, 2023, 3:53 PM IST

ರಾಜ್ಯದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಆಯೋಜನೆ ಮಾಡುತ್ತಿರುವ ಆಯೋಜಕರಿಗೆ ಬಿಬಿಎಂಪಿ 50,000 ರೂ. ದಂಡವನ್ನು ವಿಧಿಸಿದೆ.


ಬೆಂಗಳೂರು (ನ.25): ಬೆಂಗಳೂರಿನ ಇತಿಹಾಸದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಕರಾವಳಿ ಜಿಲ್ಲೆಯ ಉತ್ಸವವಾದ ಕಂಬಳವನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗುತ್ತಿದೆ. ಆದರೆ, ಈ ವೇಳೆ ಕಂಬಳ ಆಯೋಜನೆ ಮಾಡುವ ಆಯೋಜಕರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಿಗ್‌ ಶಾಕ್‌ ನೀಡಿದೆ.

ರಾಜ್ಯ ಇತಿಹಾಸದಲ್ಲಿ ಮೊದಲ ಬಾರಿಗೆ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕಂಬಳವನ್ನು ಆಯೋಜನೆ ಮಾಡಲಾಗುತ್ತಿದೆ. ಕಳೆದೊಂದು ವಾರದಿಂದ ಭರ್ಜರಿ ಸಿದ್ಧತೆ ಮಾಡಲಾಗಿದ್ದು, ಇಂದು ಕಂಬಳವನ್ನು ಆರಂಭಿಸಲಾಗಿದೆ. ಆದರೆ, ಇಂದು ಕಂಬಳ ಆಯೋಜನೆ ಮಾಡಿದವರು ಬಿಬಿಎಂಪಿಯ ಜಾಹೀರಾತು ನಿಯಮವನ್ನು ಉಲ್ಲಂಘನೆ ಮಾಡಿ ಅರಮನೆ ಮೈದಾನ ಹಾಗೂ ಮೈದಾನದ ಸುತ್ತಲಿನ ಪ್ರದೇಶದಲ್ಲಿ ಬ್ಯಾನರ್, ಬಂಟಿಂಗ್ಸ್ ಹಾಗೂ ಇತರೆ ಪ್ರದರ್ಶನಾ ಫಲಕಗಳನ್ನು ಅಳವಡಿಕೆ ಮಾಡಿ ಜಾಹೀರಾತು ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಕಂಬಳ ಆಯೋಜಕರಿಗೆ ಬರೋಬ್ಬರಿ 50 ಸಾವಿರ ರೂ. ದಂಡವನ್ನು ವಿಧಿಸಿದ್ದಾರೆ.

Tap to resize

Latest Videos

ದಾಂಪತ್ಯ ಸರಿ ಹೋಗ್ತಿಲ್ಲಾಂತ ಎರಡನೇ ಹೆಂಡ್ತಿಯನ್ನು ಕೊಲೆಗೈದ ಮೂರನೇ ಗಂಡ

ಬೆಂಗಳೂರು ಕಂಬಳ ಸಮಿತಿ ವತಿಯಿಂದ ಒಟ್ಟು 200ಕ್ಕೂ ಹೆಚ್ಚು ಕೋಣಗಳ ಸ್ಪರ್ಧೆಯನ್ನು ಒಳಗೊಂಡಂತೆ ಕಂಬಳ ಉತ್ಸವವನ್ನು ಆಯೋಜನೆ ಮಾಡಿದ್ದರು. ಇನ್ನು ಜನರನ್ನು ಆಕರ್ಷಣೆ ಮಾಡಲು ಅರಮನೆ ಮೈದಾನದ ಮುಂದೆ ಫ್ಲೈಕ್ಸ್ ಬ್ಯಾನರ್ ಹಾಕಲಾಗಿತ್ತು. ಆದರೆ, ಬೆಂಗಳೂರಿನಲ್ಲಿ ಫ್ಲೈಕ್ಸ್, ಬ್ಯಾನರ್ ಅಳವಡಿಕೆಗೆ ನಿಷೇಧವಿದ್ದರೂ, ಇವುಗಳನ್ನು ಅಳವಡಿಕೆ ಮಾಡಿ ಜಾಹೀರಾತು ಪ್ರದರ್ಶನ ಮಾಡಿದ್ದಕ್ಕೆ ಸದಾಶಿವನಗರ ಠಾಣೆಗೆ ಬಿಬಿಎಂಪಿ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲು ಆರಮನೆ ಮೈದಾನದ ಸುತ್ತಮುತ್ತ ಕಂಬಳ ಉತ್ಸವ ಸಮಿತಿಯಿಂದ ಅಳವಡಿಕೆ ಮಾಡಲಾಗಿದ್ದ ಬ್ಯಾನರ್ ತೆರವು ಮಾಡಲಾಗಿದೆ.

ಇನ್ನು ಕಂಬಳ ಆಯೋಜನೆ ಮಾಡಿರುವುದಕ್ಕೆ ಶುಭಾಶಯ ಕೋರಿ ವಿವಿಧ ನಾಯಕರು ಬ್ಯಾನರ್ ಹಾಗೂ ಬಂಟಿಂಗ್ಸ್‌ಗಳನ್ನು ಅಳವಡಿಕೆ ಮಾಡಿದ್ದರು. ಹೀಗಾಗಿ, ಬಿಬಿಎಂಪಿ ಅಧಿಕಾರಿಗಳು ಕಂಬಳ ಆಯೋಜಕರಿಗೆ 50 ಸಾವಿರ ದಂಡ ವಿಧಿಸಿದ್ದಾರೆ. ಬಳ್ಳಾರಿ ರಸ್ತೆಯ ಪಕ್ಕದಲ್ಲಿ  ಫ್ಲೈಕ್ಸ್ ಬ್ಯಾನರ್ ಹಾಕಲಾಗಿದೆ. ಈ ಕುರಿತು ಕಂಬಳ ಆಯೋಜಕರ ವಿರುದ್ಧ ಸದಾಶಿವ ನಗರ ಠಾಣೆಗೆ ದೂರು ದಾಖಲು ಮಾಡಲಾಗಿದೆ.

ತುಳುಕೂಟ, ಕಂಬಳ ಹಿನ್ನೆಲೆ ಬೃಹತ್‌ ಜಾಮ್, 3 ದಿನ ಬೆಂಗಳೂರಿನ ಈ ರಸ್ತೆಗಳಲ್ಲಿ ಓಡಾಡೋದೇ ಬೇಡ!

ಕಂಬಳಕ್ಕೆ ಚಾಲನೆ ನೀಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಂಬಳಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar), ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa), ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಸೇರಿದಂತೆ ಹಲವು ಗಣ್ಯರು ಶನಿವಾರ ಚಾಲನೆ ನೀಡಿದ್ದಾರೆ. ಸಂಸದರಾದ ಸದಾನಂದಗೌಡ, ಪಿ.ಸಿ ಮೋಹನ್, ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವನಾಥ್, ಗಾಯಕ ಗುರುಕಿರಣ್‌, ಕಂಬಳ ಸಮಿತಿ ಅಧ್ಯಕ್ಷ ಶಾಸಕ ಅಶೋಕ್ ರೈ ಹಾಗೂ ಬೆಂಗಳೂರು ಕಂಬಳ ಸಮಿತಿ ಸಂಘಟನಾ ಅಧ್ಯಕ್ಷ ಉಮೇಶ್ ಶೆಟ್ಟಿ ಸೇರಿ ಹಲವರು ಭಾಗಿಯಾಗಿದ್ದರು. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಗಂಗಾರತಿ ಮಾಡುವ ಮೂಲಕ 155 ಮೀಟರ್ ಅತೀ ಉದ್ದದ ಕಂಬಳ ಕೆರೆ (ಟ್ರ್ಯಾಕ್‌ಗೆ) ಚಾಲನೆ ನೀಡಿದ್ದಾರೆ.

click me!