ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಇಂದಿರಾ ಕ್ಯಾಂಟೀನ್ ಆಹಾರದ ಮೆನುವನ್ನು ಬದಲಾವಣೆ ಮಾಡುತ್ತಿದ್ದು, ಹೋಟೆಲ್ ಊಟವನ್ನೂ ಮೀರಿಸುವಂತಿದೆ.
ಬೆಂಗಳೂರು (ಜೂ.20): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಇಂದಿರಾ ಕ್ಯಾಂಟೀನ್‌ಗಳನ್ನು ಮೇಲ್ದರ್ಜೆಗೇರಿಸುವ ಭರವಸೆಯನ್ನು ನೀಡಿತ್ತು. ಈಗ ಇಂದಿರಾ ಕ್ಯಾಂಟೀನ್‌ನ ತಿಂಡಿ ಹಾಗೂ ಊಟದ ಮೆನುವನ್ನು ಬದಲಾವಣೆ ಮಾಡಿದ್ದು, ಹೋಟೆಲ್ ಮೆನುವನ್ನೂ ಮೀರಿಸುವಂತಿದೆ. ಕಡಿಮೆ ಹಣಕ್ಕೆ ಗುಣಮಟ್ಟದ ಸ್ವಾದಿಷ್ಟ ಆಹಾರ ಲಭ್ಯವಾಗಲಿದೆ.
ರಾಜ್ಯದಲ್ಲಿ ಕೇವಲ ಅನ್ನ, ಸಾಂಬಾರ್ ಮತ್ತು ರುಚಿಕರವಲ್ಲದ ಊಟಕ್ಕೆ ಮಾತ್ರ ಸೀಮಿತವಾಗಿದ್ದ ಇಂದಿರಾ ಕ್ಯಾಂಟೀನ್‌ನ ಆಹಾರ ಪೂರೈಕೆಯಲ್ಲಿ ಈಗ ಭಾರಿ ಪಬದಲಾವಣೆ ಆಗಲಿದೆ. ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಆಹಾರ ಮೆನು ಬದಲಾವಣೆ ಮಾಡಲಾಗಿದ್ದು, ಇಂದಿರಾ ಕ್ಯಾಂಟೀನ್‌ನಲ್ಲಿ ದರ್ಶಿನಿ (ಹೋಟೆಲ್) ರೇಂಜ್‌ಗೆ ಮೆನು ಕೂಡ ಸಿದ್ಧವಾಗಿದೆ. ಇಂದಿರಾ ಕ್ಯಾಂಟೀನ್‌ನಲ್ಲಿ ಪ್ರಾದೇಶಿಕ ವಿಭಾಗವಾರು ಎಲ್ಲ ಜನರಿಗೂ ಅತಮ್ಮ ಆಹಾರಗಳು ಲಭ್ಯವಾಗುವಂತೆ ಮೆನು ಸಿದ್ಧಒರಿಸಲಾಗಿದೆ. ಬ್ರೆಡ್ ಜಾಮ್, ಮಂಗಳೂರು ಬನ್ಸ್, ಮಂಡ್ಯದ ರಾಗಿಮುದ್ದೆ-ಸೊಪ್ಪುಸಾರು, ಪಾಯಸ, ಚಪಾತಿ-ಸಾಗು ಹೊಸದಾಗಿ ಸೇರ್ಪಡೆಯಾದ ತಿಂಡಿಯಾಗಿವೆ. ಶೀಘ್ರವೇ ಹೊಸ ಮೆನು ಇಂದಿರಾ ಕ್ಯಾಂಟೀನ್‌ನಲ್ಲಿ ಲಭ್ಯವಾಗಲಿದೆ.
undefined
ಇಂದಿರಾ ಕ್ಯಾಂಟೀನ್ ಊಟದ ಮೆನು ಬದಲಾವಣೆ: ಹೊಸ ಸೇರ್ಪಡೆ ಪಟ್ಟಿ ಇಲ್ಲಿದೆ ನೋಡಿ
ವಾರದ 7 ದಿನಗಳಲ್ಲಿ ಕೊಡುವ ತಿಂಡಿ, ಊಟದ ಮೆನು ವಿವರ:
ಭಾನುವಾರ -
ಬೆಳಗ್ಗೆ : ಇಡ್ಲಿ ಚಟ್ನಿ / ಖಾರಾ ಬಾತ್ / ಬ್ರೆಡ್ & ಜಾಮ್
ಮಧ್ಯಾಹ್ನ : ಅನ್ನ ಸಾಂಬಾರ್ / ಮೊಸರಾನ್ನ / ರಾಗಿಮುದ್ದೆ ಸೊಪ್ಪು ಸಾರು
ರಾತ್ರಿ : ಅನ್ನ ಸಾಂಬಾರ್ / ರಾಗಿಮುದ್ದೆ ಸೊಪ್ಪು ಸಾರು
ಸೋಮವಾರ -
ಬೆಳಗ್ಗೆ : ಇಡ್ಲಿ ಸಾಂಬಾರ್ / ಪಲಾವ್ ರೈತ / ಬ್ರೆಡ್ & ಜಾಮ್
ಮಧ್ಯಾಹ್ನ : ಅನ್ನ ಸಾಂಬಾರ್ + ಕೀರ್ / ರಾಗಿಮುದ್ದೆ ಸೊಪ್ಪು ಸಾರು + ಕೀರ್
ರಾತ್ರಿ : ಅನ್ನ ಸಾಂಬಾರ್ / ರಾಗಿಮುದ್ದೆ ಸೊಪ್ಪು ಸಾರು
ಮಂಗಳವಾರ -
ಬೆಳಗ್ಗೆ : ಇಡ್ಲಿ ಚಟ್ನಿ / ಬಿಸಿ ಬೇಳೆ ಬಾತ್ / ಮಂಗಳೂರು ಬನ್ಸ್
ಮಧ್ಯಾಹ್ನ : ಅನ್ನ ಸಾಂಬಾರ್ + ಮೊಸರು / ಚಪಾತಿ ಸಾಗು + ಕೀರ್
ರಾತ್ರಿ : ಅನ್ನ ಸಾಂಬಾರ್ + ರೈತ / ಚಪಾತಿ + ವೆಜ್ ಕರಿ
ಬುಧವಾರ -
ಬೆಳಗ್ಗೆ : ಇಡ್ಲಿ ಸಾಂಬಾರ್ / ಖಾರಾ ಬಾತ್ / ಬೇಕರಿ ಬನ್
ಮಧ್ಯಾಹ್ನ : ಅನ್ನ ಸಾಂಬಾರ್ + ಕೀರ್ / ರಾಗಿಮುದ್ದೆ + ಸೊಪ್ಪು ಸಾರು
ರಾತ್ರಿ : ಅನ್ನ ಸಾಂಬಾರ್ / ರಾಗಿಮುದ್ದೆ + ಸೊಪ್ಪು ಸಾರು
ಗುರುವಾರ -
ಬೆಳಗ್ಗೆ : ಇಡ್ಲಿ ಸಾಂಬಾರ್ / ಪಲಾವ್ / ಬ್ರೆಡ್ & ಜಾಮ್
ಮಧ್ಯಾಹ್ನ : ಅನ್ನ ಸಾಂಬಾರ್ + ಮೊಸರು / ಚಪಾತಿ ಸಾಗು + ಕೀರ್
ರಾತ್ರಿ : ಅನ್ನ ಸಾಂಬಾರ್ + ಮೊಸರು / ಚಪಾತಿ + ವೆಜ್ ಕರಿ
ಹೊಸದಾಗಿ 50 ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಬಿಬಿಎಂಪಿ ಪ್ರಸ್ತಾವನೆ
ಶುಕ್ರವಾರ -
ಬೆಳಗ್ಗೆ : ಇಡ್ಲಿ ಸಾಂಬಾರ್ / ಬಿಸಿಬೇಳೆ ಬಾತ್ / ಮಂಗಳೂರು ಬನ್ಸ್
ಮಧ್ಯಾಹ್ನ : ಅನ್ನ ಸಾಂಬಾರ್ / ಮೊಸರಾನ್ನ / ರಾಗಿಮುದ್ದೆ ಸೊಪ್ಪು ಸಾರು
ರಾತ್ರಿ : ಅನ್ನ ಸಾಂಬಾರ್ / ರಾಗಿಮುದ್ದೆ ಸೊಪ್ಪು ಸಾರು
ಶನಿವಾರ -
ಬೆಳಗ್ಗೆ : ಇಡ್ಲಿ ಸಾಂಬಾರ್ / ಪೊಂಗಲ್ / ಬೇಕರಿ ಬನ್
ಮಧ್ಯಾಹ್ನ : ಅನ್ನ ಸಾಂಬಾರ್ + ಕೀರ್ / ಚಪಾತಿ ಸಾಗು + ಕೀರ್
ರಾತ್ರಿ : ಅನ್ನ ಸಾಂಬಾರ್ + ಮೊಸರು / ಚಪಾತಿ + ವೆಜ್ ಕರಿ