ರಾತ್ರೋ ರಾತ್ರಿ ಕಳ್ಳನಂತೆ ಕೃಷಿ ಭೂಮಿಯಲ್ಲಿ ಕಸ ಎಸೆದು ಬರ್ತಿದೆ BBMP ಲಾರಿ..!

By Kannadaprabha NewsFirst Published Nov 2, 2019, 8:38 AM IST
Highlights

ಸಿಲಿಕಾನ್ ಸಿಟಿಯಲ್ಲಿ ದಿನನಿತ್ಯ ಉತ್ಪತ್ತಿಯಾಗುವ ಬೃಹತ್ ಪ್ರಮಾಣದ ತ್ಯಾಜ್ಯ ಎಲ್ಲಿ ವಿಲೇವಾರಿಯಾಗುತ್ತೆ ಗೊತ್ತಾ..? ಬಿಬಿಎಂಪಿ ಕಳ್ಳನಂತೆ ರಾತ್ರೋ ರಾತ್ರಿ ಸಮೀಪದ ಗ್ರಾಮದ ಕೃಷಿಭೂಮಿಯಲ್ಲಿ ಕಸ ಎಸೆದು ಓಡಿ ಬರುತ್ತಿದೆ. ಇದೆಷ್ಟು ಸಮಯದಿಂದ ನಡೆಯುತ್ತಿತ್ತೋ ಗೊತ್ತಿಲ್ಲ, ಆದ್ರೆ ಶುಕ್ರವಾರ ಕಸ ಸುರಿಯಲು ಲಾರಿಗಳು ಹೋದ ಸಂದರ್ಭ ಗ್ರಾಮಸ್ಥರು ಎಚ್ಚೆತ್ತಿದ್ದಾರೆ. ಆಮೇಲೇನಾಯ್ತು ಎಂದು ತಿಳಿಯಲು ಈ ಸುದ್ದಿ ಓದಿ.

ಬೆಂಗಳೂರು(ನ.02): ಸಿಲಿಕಾನ್ ಸಿಟಿಯಲ್ಲಿ ದಿನನಿತ್ಯ ಉತ್ಪತ್ತಿಯಾಗುವ ಬೃಹತ್ ಪ್ರಮಾಣದ ತ್ಯಾಜ್ಯ ಎಲ್ಲಿ ವಿಲೇವಾರಿಯಾಗುತ್ತೆ ಗೊತ್ತಾ..? ಬಿಬಿಎಂಪಿ ಕಳ್ಳನಂತೆ ರಾತ್ರೋ ರಾತ್ರಿ ಸಮೀಪದ ಗ್ರಾಮದ ಕೃಷಿಭೂಮಿಯಲ್ಲಿ ಕಸ ಎಸೆದು ಓಡಿ ಬರುತ್ತಿದೆ. ಇದೆಷ್ಟು ಸಮಯದಿಂದ ನಡೆಯುತ್ತಿತ್ತೋ ಗೊತ್ತಿಲ್ಲ, ಆದ್ರೆ ಶುಕ್ರವಾರ ಕಸ ಸುರಿಯಲು ಲಾರಿಗಳು ಹೋದ ಸಂದರ್ಭ ಗ್ರಾಮಸ್ಥರು ಎಚ್ಚೆತ್ತಿದ್ದಾರೆ.

ರಾತ್ರೋರಾತ್ರಿ ಬಿಬಿಎಂಪಿ ವ್ಯಾಪ್ತಿಯ ಕಸವನ್ನು ಕೃಷಿ ಜಮೀನಿನಲ್ಲಿ ಸುರಿಯಲು ಯತ್ನಿಸಿದ ಲಾರಿ ಚಾಲಕರು ಗ್ರಾಮಸ್ಥರು ಕೈಗೆ ಸಿಕ್ಕಿಕೊಂಡು, ಸ್ಥಳದಲ್ಲೇ ಲಾರಿ ಬಿಟ್ಟು ಪರಾರಿ ಯಾಗಿರುವ ಘಟನೆ ಎಲೆಕ್ಟ್ರಾನಿಕ್‌ಸಿಟಿ ಸಮೀಪದ ಮೈಲಸಂದ್ರ ಗ್ರಾಮದಲ್ಲಿ ನಡೆದಿದೆ.

ವ್ಹೀಲ್ ಚೇರ್ ನೀಡದ ಏರ್ ಇಂಡಿಯಾಗೆ 20 ಲಕ್ಷ ದಂಡ..!

ಶುಕ್ರವಾರ ಮುಂಜಾನೆ 3ರ ವೇಳೆಗೆ ಕಸ ತುಂಬಿದ್ದು ಸುಮಾರು 8ರಿಂದ 10 ಲಾರಿಗಳು ಗ್ರಾಮಕ್ಕೆ ಆಗಮಿಸಿವೆ. ಇದರಲ್ಲಿ ಮೂರು ಲಾರಿಗಳು ಕಸ ಸುರಿದಿದ್ದು, ಈ ವೇಳೆಗೆ ಕೆಲ ಗ್ರಾಮಸ್ಥರಿಗೆ ಎಚ್ಚರಿಕೆಯಾಗಿ ಸ್ಥಳಕ್ಕೆ ದೌಡಾಯಿಸಿದ್ದಾರೆ.

ಕಸ ಸುರಿದಿರುವುದನ್ನು ಕಂಡು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆಗಾಗಲೇ ಮತ್ತಷ್ಟು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದು, ಇದನ್ನು ಕಂಡು ಲಾರಿ ಚಾಲಕರು ಭಯಗೊಂಡು ಸ್ಥಳದಲ್ಲೇ ಲಾರಿಗಳನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.   

ಶಾಸಕರಿಗೆ ಕರೆ ಬಂದರೆ ಎಸಿಪಿ ಫೋನ್ ರಿಂಗ್ ಆಗ್ತಿತ್ತು !.

click me!