BBMP ಬಜೆಟ್: 20 ಸಾವಿರ ಕೋಟಿ ರು.ದಾಟಿದ ಪಾಲಿಕೆ ಬಜೆಟ್‌ ಗಾತ್ರ!

ರಾಜ್ಯ ಸರ್ಕಾರವು ಬಿಬಿಎಂಪಿಯ 2025-26ನೇ ಸಾಲಿನ ಬಜೆಟ್ ಗಾತ್ರವನ್ನು ₹20,439.77 ಕೋಟಿಗೆ ಏರಿಸಿದೆ. ಉಪ ಮುಖ್ಯಮಂತ್ರಿಯ ವಿವೇಚನಾ ಅನುದಾನವನ್ನು ₹360 ಕೋಟಿಗೆ ಹೆಚ್ಚಿಸಲಾಗಿದೆ. ಹೆಚ್ಚುವರಿಯಾಗಿ ₹509.69 ಕೋಟಿ ಮೊತ್ತದ ಯೋಜನೆಗಳನ್ನು ಸೇರ್ಪಡೆಗೊಳಿಸಲಾಗಿದೆ.


ಬೆಂಗಳೂರು ಉಪ ಮುಖ್ಯಮಂತ್ರಿಯ ವಿವೇಚನಾ ಅನುದಾನವನ್ನು ₹360 ಕೋಟಿಗೆ ಹೆಚ್ಚಿಸುವುದು ಸೇರಿದಂತೆ ಮತ್ತಷ್ಟು ಕಾರ್ಯಕ್ರಮ ಸೇರ್ಪಡೆಗೊಳಿಸಿ ಬಿಬಿಎಂಪಿಯು ಮಂಡಿಸಿದ 2025-26ನೇ ಸಾಲಿನ ಬಜೆಟ್‌ ಗಾತ್ರವನ್ನು ₹20,439.77 ಕೋಟಿಗೆ ಏರಿಸಿ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ಕಳೆದ ಶನಿವಾರ ಬಿಬಿಎಂಪಿಯು ದಾಖಲೆಯ ₹19,927.08 ಕೋಟಿ ಗಾತ್ರದ ಬಜೆಟ್‌ ಮಂಡಿಸಿ ರಾಜ್ಯ ಸರ್ಕಾರದ ಅನುಮೋದನೆಗೆ ಸಲ್ಲಿಸಿತ್ತು. ಪರಿಶೀಲನೆ ಮಾಡಿರುವ ರಾಜ್ಯ ಸರ್ಕಾರವು ಪಾಲಿಕೆಯ ಬಜೆಟ್‌ಗೆ ಹೆಚ್ಚುವರಿಯಾಗಿ ₹509.69 ಕೋಟಿ ಮೊತ್ತದ ಇನ್ನಷ್ಟು ಯೋಜನೆಗಳನ್ನು ಸೇರ್ಪಡೆಗೊಳಿಸಿ ಅನುಮೋದಿಸಿದೆ.

Latest Videos

ಇದನ್ನೂ ಓದಿಮೆಟ್ರೋ, ಹಾಲು ದರ ಹೆಚ್ಚಳ ಬೆನ್ನಲ್ಲೇ ಮತ್ತೊಂದು ಬೆಲೆ ಏರಿಕೆ ಬರೆ; ಇಂದಿನಿಂದ ಕಸ ವಿಲೇವಾರಿಗೂ ಬಿಬಿಎಂಪಿ ಶುಲ್ಕ ವಸೂಲಿ!

ಕಸದ ಕಂಪನಿಗೆ ಹೆಚ್ಚುವರಿ ₹100 ಕೋಟಿ:

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿಗೆ ಸಹಾಯಧನಕ್ಕೆ ₹486 ಕೋಟಿ ನೀಡಲಾಗಿತ್ತು. ಅನುಮೋದನೆ ವೇಳೆ ಹೈಕೋರ್ಟ್‌, ಸುಪ್ರಿಂ ಕೋರ್ಟ್‌, ಎನ್‌ಜಿಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲುಷಿತ ಕೆರೆ, ರಾಜಕಾಲುವೆ, ಚರಂಡಿ ನೀರು ಸಂಸ್ಕರಣೆ ಕಾಮಗಾರಿ ಹೆಸರಿನಲ್ಲಿ ಹೆಚ್ಚುವರಿ ₹100 ಕೋಟಿ ನೀಡಿ ಕಂಪನಿಗೆ ನೀಡಲಾಗುವ ಸಹಾಯಧನದ ರೂಪದಲ್ಲಿ ನೀಡಿ ಕಂಪನಿ ಸಹಾಯಧನ ಮೊತ್ತವನ್ನು ₹586 ಕೋಟಿ ಹೆಚ್ಚಿಸಲಾಗಿದೆ.

ಉಳಿದಂತೆ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಕಟ್ಟಡ ನಿರ್ಮಾಣಕ್ಕೆ ₹50 ಕೋಟಿ, ಸರ್ಕಾರದ ಕಾರ್ಯಕ್ರಮಗಳ ಪ್ರಚಾರಕ್ಕೆ ಮತ್ತು ಜನಸ್ಪಂದನಾ ಕಾರ್ಯಕ್ರಮ ಆಯೋಜನೆಗೆ ₹50 ಕೋಟಿ, ಜಾಹೀರಾತು ವೆಚ್ಚಕ್ಕೆ ₹50 ಕೋಟಿ, ಕೇಂದ್ರ ಕಚೇರಿ ಆಯೋಜಿಸುವ ಸಭೆ ಸಮಾರಂಭಕ್ಕೆ ₹25 ಕೋಟಿ ಹಾಗೂ ವೈದ್ಯಕೀಯ ಪರಿಹಾರ ನಿಧಿಗೆ ₹10 ಕೋಟಿ ನೀಡಲಾಗಿದೆ.

ಆರ್ಥಿಕ ಶಿಸ್ತು ಮೀರಿ ಬಿಬಿಎಂಪಿ ಬಜೆಟ್‌

ಆಯವ್ಯಯದಲ್ಲಿ ಬೇಕಾ ಬಿಟ್ಟಿ ಯೋಜನೆಗಳನ್ನು ಘೋಷಣೆಗೆ ಸ್ವಯಂ ಕಡಿವಾಣ ಹಾಕಿಕೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರದ ಮಾದರಿಯಲ್ಲಿ ಬಿಬಿಎಂಪಿಯೂ ‘ಬಿಬಿಎಂಪಿ ಹಣಕಾಸು ಹೊಂದಾಣಿಕೆ ಮತ್ತು ಆಯವ್ಯಯ ನಿರ್ವಹಣಾ ನಿಯಮ-2021’ ರೂಪಿಸಿಕೊಳ್ಳಲಾಗಿದೆ. ಆದರೆ, ಪಾಲಿನೆ ಆಗುತ್ತಿಲ್ಲ. ಅದು 2025-26ನೇ ಸಾಲಿನ ಬಜೆಟ್‌ನಲ್ಲಿಯೂ ಮುಂದುವರೆದಿದೆ. ಪಾಲಿಕೆ ಮಂಡಿಸಿ ₹19,927.08 ಕೋಟಿ ಗಾತ್ರದ ಬಜೆಟ್‌ ಸಹ ಆರ್ಥಿಕ ಶಿಸ್ತು ಪಾಲನೆ ಮಾಡಿಲ್ಲ. ₹1,806.66 ಕೋಟಿ ಹೆಚ್ಚುವರಿ ಮೊತ್ತದ ಬಜೆಟ್‌ ರೂಪಿಸಿಕೊಂಡಿದೆ ಎಂದು ಸರ್ಕಾರವು ಬಿಬಿಎಂಪಿ ಬಜೆಟ್‌ ಅನುಮೋದನೆ ಆದೇಶದಲ್ಲಿ ಉಲ್ಲೇಖಿಸಿದೆ. ಆದರೂ, ಸರ್ಕಾರವೇ ₹509 ಕೋಟಿ ಮೊತ್ತದ ಹೆಚ್ಚುವರಿ ಕಾರ್ಯಕ್ರಮಗಳನ್ನು ಸೇರ್ಪಡೆಗೊಳಿಸಿ ಆದೇಶಿಸಿರುವುದರ ಹಿಂದಿನ ತರ್ಕ ಅರ್ಥವಾಗಿಲ್ಲ.

iಇದನ್ನೂ ಓದಿ: ಬೆಂಗಳೂರು 180 ಅಡಿ ಆಳದಲ್ಲಿ 16 ಕಿ.ಮೀ ಸುರಂಗ ಮಾರ್ಗ; 5 ವರ್ಷದಲ್ಲಿ ನಿರ್ಮಾಣ, 30 ವರ್ಷ ಟೋಲ್ ಸಂಗ್ರಹ!

ಡಿಸಿಎಂ ಅನುದಾನ ₹360 ಕೋಟಿಗೆ ಏರಿಕೆ

ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರು ಆಗಿರುವ ಡಿ.ಕೆ.ಶಿವಕುಮಾರ್‌ ಅವರಿಗೆ ಬಿಬಿಎಂಪಿ ಬಜೆಟ್‌ ಮಂಡನೆ ವೇಳೆ ₹135.31 ಕೋಟಿ ಅನ್ನು ವಿವೇಚನಾ ಅನುದಾನ ಮೀಸಲಿಡಲಾಗಿತ್ತು. ಸರ್ಕಾರದ ಅನುಮೋದನೆ ವೇಳೆ ಹೆಚ್ಚುವರಿಯಾಗಿ 224.69 ಕೋಟಿ ರು. ಸೇರಿಸಿ ಉಪ ಮುಖ್ಯಮಂತ್ರಿಯ ವಿವೇಚನಾ ಅನುದಾನದ ಮೊತ್ತವನ್ನು 360 ಕೋಟಿ ಹೆಚ್ಚಿಸಲಾಗಿದೆ. ಕಳೆದ 2024-25ನೇ ಸಾಲಿನ ಬಜೆಟ್‌ನಲ್ಲಿ ₹266.24 ಕೋಟಿ ಡಿಸಿಎಂ ವಿವೇಚನಾ ಅನುದಾನ ನೀಡಲಾಗಿತ್ತು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ₹93.76 ಕೋಟಿ ಹೆಚ್ಚುವರಿಯಾಗಿ ಮೀಸಲಿಡಲಾಗಿದೆ.

click me!