ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿನ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಬಿಬಿಎಂಪಿ ಕೋವಿಡ್ ನಿಯಂತ್ರಣ ರಾಯಭಾರಿಯನ್ನಾಗಿ ಹಿರಿಯ ಕಲಾವಿದ ರಮೇಶ್ ಅರವಿಂದ್ ಅವರನ್ನು ಆಯ್ಕೆ ಮಾಡಿದೆ.
ಬೆಂಗಳೂರು(ಜು.21): ನಗರದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿನ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಬಿಬಿಎಂಪಿ ಕೋವಿಡ್ ನಿಯಂತ್ರಣ ರಾಯಭಾರಿಯನ್ನಾಗಿ ಹಿರಿಯ ಕಲಾವಿದ ರಮೇಶ್ ಅರವಿಂದ್ ಅವರನ್ನು ಆಯ್ಕೆ ಮಾಡಿದೆ.
ರಾಜ್ಯದ ಅತಿ ಹೆಚ್ಚು ಸೋಂಕು ಪ್ರಕರಣಗಳು ಬೆಂಗಳೂರಿನಲ್ಲೂ ದೃಢಪಡುತ್ತಿರುವ ಹಿನ್ನೆಲೆಯಲ್ಲಿ ನಗರ ಜನರಲ್ಲಿ ಕೊರೋನಾ ಸೋಂಕಿನಿಂದ ಮುಕ್ತವಾಗಿರುವುದು ಹೇಗೆ ಎಂಬುದು ಸೇರಿದಂತೆ ಸೋಂಕಿನ ಕುರಿತು ಅರಿವು ಮೂಡಿಸುವುದು.
ಬಿಬಿಎಂಪಿಯ ಕಾರ್ಯಗಳನ್ನು ಜನರಿಗೆ ಮುಟ್ಟಿಸುವ ಉದ್ದೇಶದಿಂದ ರಮೇಶ್ ಅರವಿಂದ್ ಅವನ್ನು ರಾಯಭಾರಿಯಾಗಿ ನೇಮಿಸಿಕೊಂಡಿದೆ. ಜತೆಗೆ ಬಿಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ರಚನೆಯಾಗಿರುವ ಕೋವಿಡ್ ಕಾರ್ಯಪಡೆ ಸಮಿತಿಯ ಸದಸ್ಯರಾಗಿ ರಮೇಶ್ ಅರವಿಂದ್ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ.