ಧೈರ್ಯವಾಗಿದ್ದರೆ ಕೊರೋನಾ ವಿರುದ್ಧ ಗೆದ್ದಂತೆ: ಗುಣಮುಖರಾದ BBMP ನೌಕರನ ಮಾತು!

By Kannadaprabha NewsFirst Published Jul 21, 2020, 7:53 AM IST
Highlights

‘ಧೈರ್ಯವಾಗಿದ್ದರೆ ಕೊರೋನಾ ವಿರುದ್ಧ ಗೆದ್ದಂತೆ’| -ಸಾಮಾನ್ಯ ಖಾಯಿಲೆ ಎಂದು ಭಾವಿಸಿ| ಸೋಂಕಿನಿಂದ ಗುಣಮುಖರಾದ ಬಿಬಿಎಂಪಿ ನೌಕರನ ಮನದ ಮಾತು

ಬೆಂಗಳೂರು(ಜು.21): ಕೊರೋನಾ ಸೋಂಕಿಗೆ ಒಳಗಾದರೆ ಆತಂಕಪಡುವ ಅಗತ್ಯವಿಲ್ಲ, ನಾವು ಎಷ್ಟುಧೈರ್ಯವಾಗಿ ಇರುತ್ತೇವೆಯೋ ಅಷ್ಟುಬೇಗ ಸೋಂಕಿನಿಂದ ಹೊರಬರುತ್ತೇವೆ, ಮಾನಸಿಕ ಧೈರ್ಯವೇ ಅರ್ಧ ನಮ್ಮನ್ನು ಗುಣಮುಖ ಮಾಡುತ್ತದೆ...

ಇದು ಕೊರೋನಾ ಸೋಂಕಿನಿಂದ ಗುಣಮುಖರಾದ ಬಿಬಿಎಂಪಿಯ ನೌಕರರರೊಬ್ಬರ ಆತ್ಮವಿಶ್ವಾಸ ಮಾತುಗಳು. ಜು.9ರಂದು ಜ್ವರ, ಕೆಮ್ಮು, ಶೀತ, ಮೈ ಕೈ ನೋವು ಕಾಣಿಸಿಕೊಂಡಿತ್ತು. ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡೆ. ಜು.11ರಂದು ಬಂದ ಪರೀಕ್ಷೆಯ ವರದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿತ್ತು. ಈ ವರದಿ ಕೈಸೇರುವ ಮೊದಲೇ ಶೀತ, ನೆಗಡಿ, ಕೆಮ್ಮು ಕಡಿಮೆಯಾಗಿತ್ತು. ಹೀಗಾಗಿ ನಗರದ ಜಿಕೆವಿಕೆಯ ಕೋವಿಡ್‌ ಆರೈಕೆ ಕೇಂದ್ರಕ್ಕೆ ತಮ್ಮನ್ನು ಕರೆದೊಯ್ದರು. ಅಲ್ಲಿ ಥರ್ಮಲ್‌ ಪರೀಕ್ಷೆ, ಆಕ್ಸಿಜನ್‌ ಪರೀಕ್ಷೆ ಮಾಡಿ ಕೊಠಡಿಯೊಂದಕ್ಕೆ ಬಿಟ್ಟರು. ಆ ಕೊಠಡಿಯಲ್ಲಿ ಒಟ್ಟು ಮೂರು ಮಂದಿ ಇದ್ದೆವು. ಒಟು ಏಳು ದಿನಗಳ ಕಾಲ ಈ ಆರೈಕೆ ಕೇಂದ್ರದಲ್ಲೇ ಇದ್ದೆ ಎಂದು ಹೇಳಿದರು.

ಕೊರೋನಾ ಗೆದ್ದ ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕ ಆಸ್ಪತ್ರೆಯಿಂದ ಡಿಸ್ಚಾರ್ಜ್

ಆರೈಕೆ ಕೇಂದ್ರದಲ್ಲಿ ಪ್ರತಿ ದಿನ ವಿಟಮಿನ್‌-ಸಿ ಮಾತ್ರೆ, ರೋಗ ನಿರೋಧಕ ಹೆಚ್ಚಿಸುವ ಮಾತ್ರೆಗಳನ್ನು ಕೊಡುತ್ತಿದ್ದರು. ಬೆಳಗ್ಗೆ ತಿಂಡಿ, ಕಷಾಯ, ಮಧ್ಯಾಹ್ನ ಊಟ, ಸಂಜೆ ಹಣ್ಣು-ಸಿಹಿ, ರಾತ್ರಿ ಊಟ, ಬಾದಾಮಿ ಹಾಲು ಕೊಡುತ್ತಿದ್ದರು. ಏಳು ದಿನ ಕಾಲ ಆರೈಕೆ ಕೇಂದ್ರದ ಸಿಬ್ಬಂದಿ ಚೆನ್ನಾಗಿ ನೋಡಿಕೊಂಡರು ಎಂದು ತಮ್ಮ ಅನುಭವ ಹಂಚಿಕೊಂಡರು.

ಕೇಂದ್ರದ ಆವರಣದಲ್ಲಿ ವಾಕಿಂಗ್‌ ಮಾಡುತ್ತಿದ್ದೆ. ಚೆನ್ನಾಗಿ ನಿದ್ರೆ ಮಾಡುತ್ತಿದ್ದೆ. ತಮ್ಮದೇ ಕೊಠಡಿಯಲ್ಲಿದ್ದ ಇಬ್ಬರ ಜೊತೆ ಮಾತುಕತೆ, ಹರಟೆ ಹೊಡೆಯುತ್ತಾ ದಿನ ಕಳೆಯುತ್ತಿದ್ದೆ. ಏಳು ದಿನ ಹೇಗೆ ಕಳೆಯಿತು ಎಂಬುದೇ ಗೊತ್ತಾಗಲಿಲ್ಲ. ನನಗೆ ಕೊರೋನಾ ಬಗ್ಗೆ ಭಯವೇ ಇರಲಿಲ್ಲ. ಹೀಗಾಗಿ ಆರೈಕೆ ಕೇಂದ್ರದಲ್ಲಿ ಆರಾಮಾಗಿದ್ದೆ ಎಂದು ಹೇಳಿದರು.

ಕೊರೋನಾದಿಂದ ಗುಣಮುಖರಾದ ಶಾಸಕ ಶರತ್​ ಬಚ್ಚೇಗೌಡ: ಜನರಿಗೆ ಕಿವಿಮಾತು..!

ಕೊರೋನಾಗೆ ವಾಕ್ಸಿನೇಷನ್‌ ಇನ್ನೂ ಕಂಡುಹಿಡಿದಿಲ್ಲ. ಆರೈಕೆ ಕೇಂದ್ರದಲ್ಲಿ ವಿಶೇಷ ಚಿಕಿತ್ಸೆ ಏನು ಇರಲಿಲ್ಲ. ಉದಾಹರಣೆಗೆ ಸೋಂಕಿತರಿಗೆ ಜ್ವರ ಬಂದರೆ ಜ್ವರದ ಮಾತ್ರೆ, ಶೀತಕ್ಕೆ ಶೀತದ ಮಾತ್ರೆ, ಕೆಮ್ಮಿಗೆ ಕೆಮ್ಮು ನಿವಾರಿಸುವ ಮಾತ್ರೆ ನೀಡುತ್ತಾರೆ. ಒಂದು ವೇಳೆ ಉಸಿರಾಟ ಸಮಸ್ಯೆ ಹೆಚ್ಚಾದರೆ, ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸುತ್ತಾರೆ. ನನ್ನ ಪ್ರಕಾರ ಈ ಸೋಂಕಿನ ವಿರುದ್ಧ ಹೋರಾಡಬೇಕಾದರೆ, ಮೊದಲು ನಾವು ಮಾನಸಿಕವಾಗಿ ಗಟ್ಟಿಯಾಗಬೇಕು. ಇದು ಕೂಡ ಒಂದು ಸಾಮಾನ್ಯ ಕಾಯಿಲೆ ಎಂದು ಭಾವಿಸಬೇಕು ಅಷ್ಟೇ ಎಂದು ‘ಕನ್ನಡಪ್ರಭ’ದೊಂದಿಗೆ ತಮ್ಮ ಕೊರೋನಾ ದಿನಗಳನ್ನು ನೆನಪಿಸಿಕೊಂಡರು.

‘ಸಣ್ಣಪುಟ್ಟ ನ್ಯೂನತೆಗಳನ್ನು ಅನುಸರಿಸಿಕೊಳ್ಳಬೇಕು’

ಕೊರೋನಾ ಆರೈಕೆ ಕೇಂದ್ರದಲ್ಲಿ ನೂರಕ್ಕೆ ನೂರು ಸರಿ ಎಂದು ಹೇಳಲಾಗದು. ಸಣ್ಣಪುಟ್ಟಸಮಸ್ಯೆಗಳು ಇದ್ದವು. ನಮ್ಮ ಮನೆಗಳಲ್ಲಿ ಅನುಸರಿಸಿಕೊಳ್ಳುವಂತೆ ಸಣ್ಣಪುಟ್ಟನ್ಯೂನತೆಗಳನ್ನು ಅನುಸರಿಸಿಕೊಂಡು ಹೋಗಬೇಕು ಎಂದು ಅವರು ಹೇಳಿದರು.

click me!