
ಧರ್ಮಸ್ಥಳ (ಆ.19) ಧರ್ಮಸ್ಥಳ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ, ಧರ್ಮಸ್ಥಳದ ಮೇಲೆ ಕೇಳಿ ಬಂದಿರುವ ಆರೋಪ, ಎಸ್ಐಟಿ ತನಿಖೆ ಸೇರಿದಂತೆ ಸಮಗ್ರ ವಿಚಾರಗಳ ಕುರಿತು ಮೊದಲ ಬಾರಿಗೆ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಮಾತನಾಡಿದ್ದಾರೆ. ಕ್ಷೇತ್ರದದ ವಿರುದ್ದ, ಕುಟುಂಬದ ವಿರುದ್ಧ ಸುಳ್ಳು ಆರೋಪ, ಅಪಪ್ರಾಚರಗಳಿಂದ ತೀವ್ರ ನೋವಾಗಿದೆ ಎಂದು ವಿರೇಂದ್ರ ಹೆಗ್ಗಡೆ ಪಿಟಿಐ ಮಾಧ್ಯಮಕ್ಕೆ ನೀಡದ ಸಂದರ್ಶನದಲ್ಲಿ ಹೇಳಿದ್ದಾರೆ. ಎಸ್ಐಟಿ ತನಿಖೆಯನ್ನು ಸ್ವಾಗತಿಸುತ್ತಾ ಮಾತಾನಾಡಿದ ವಿರೇಂದ್ರ ಹೆಗ್ಗಡೆ ಸತ್ಯ ಹೊರಬರಬೇಕು. ಧರ್ಮಸ್ಥಳ ಮೇಲಿನ ಕಾರ್ಮೋಡ ಸರಿಯಬೇಕು ಎಂದಿದ್ದಾರೆ
ಮುಸುಕುದಾರು ದೂರುದಾರ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದೆ. ವಿನಾ ಕಾರಣ ಅಪಪ್ರಚಾರ ಮಾಡಲಾಗುತ್ತಿದೆ. ಈ ರೀತಿಯ ಆರೋಪ, ದೂರುಗಳಿಂದ ನೋವಾಗಿದೆ. ಧರ್ಮಸ್ಥಳ ಕ್ಷೇತ್ರದ ಬಗ್ಗೆ, ನನ್ನ ಬಗ್ಗೆ ಭಕ್ತರಿಗೆ ನಂಬಿಕೆ ಇದೆ. ಈ ಆರೋಪಗಳಿಂದ ಅವರಿಗೂ ನೋವಾಗಿದೆ. ಭಕ್ತರಿಗೆ ಕ್ಷೇತ್ರದ ಮೇಲೆ ಅಪನಂಬಿಕೆ ಇಲ್ಲ. ಸಂಪೂರ್ಣ ವಿಶ್ವಾಸವಿಟ್ಟಿದ್ದಾರೆ. ಭಕ್ತರು ದೇವಸ್ಥಾನಕ್ಕೆ ಬರುತ್ತಿದ್ದಾರೆ. ಆದರೆ ಸತ್ಯಕ್ಕೆ ದೂರವಾಗಿರುವ ಹಲವು ಆರೋಪಗಳನ್ನು ಒಂದರ ಹಿಂದೆ ಒಂದರಂತೆ ಮಾಡಿದ್ದಾರೆ. ಇದು ಸಂಪೂರ್ಣವಾಗಿ ಆಧಾರ ರಹಿತ ಎಂದು ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಎಸ್ಐಟಿ ತನಿಖೆಯನ್ನು ವಿರೇಂದ್ರ ಹೆಗ್ಗಡೆ ಸ್ವಾಗತಿಸಿದ್ದಾರೆ. ಎಸ್ಐಟಿಯಿಂದ ಸತ್ಯ ಹೊರಬರಲಿದೆ. ಕ್ಷೇತ್ರದ ಮೇಲೆ ಕೇಳಿಬಂದಿರುವ ಆರೋಪ, ಆಧಾರ ರಹಿತ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ಗೊತ್ತಾಗಲಿದೆ. ಶೀಘ್ರದಲ್ಲೇ ತನಿಖೆಯ ವರದಿ ಹೊರಬರಲಿ ಎಂದು ವಿರೇಂದ್ರ ಹೆಗ್ಗಡೆ ಹೇಳಿದ್ದಾರೆ. ಮುಕ್ತವಾಗಿ ತನಿಖೆ ನಡೆಯುತ್ತಿದೆ. ನಾವು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಯಾವುದು ಮುಚ್ಚಿಡುವ ಪ್ರಶ್ನೆ ಇಲ್ಲ ಎಂದು ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಮುಸುಕುದಾರಿ ದೂರುದಾರ ಮಾಡಿರುವ ಶವ ಹೂತಿಟ್ಟ ಆರೋಪ ಆಧಾರ ರಹಿತವಾಗಿದೆ. ಈ ರೀತಿಯ ಪ್ರಕರಣಗಳು ನಡೆದಿಲ್ಲ. ಸುಳ್ಳನ್ನೇ ಪೋಣಿಸಿ ವ್ಯವಸ್ಥಿತವಾಗಿ ಆರೋಪ ಮಾಡಲಾಗಿದೆ. ಈ ಎಲ್ಲಾ ಅಂಶಗಳನ್ನು ಎಸ್ಐಟಿ ತನಿಖೆ ಮೂಲಕ ಬಹಿರಂಗಪಡಿಸಬೇಕು ಎಂದು ವೀರೇಂದ್ರ ಹೆಗ್ಗಡೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಆಗ್ರಹಿಸಿದ್ದಾರೆ.
ಧರ್ಮಸ್ಥಳದ ಬಗ್ಗೆ ಸತತವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಈ ಹಿಂದೆಯೂ ಬೇರೆ ಬೇರೆ ಕಾರಣಗಳನ್ನು ಹಿಡಿದು ಅಪಪ್ರಚಾರ ಮಾಡಲಾಗಿತ್ತು. ಕ್ಷೇತ್ರ ಹಲವ ರೀತಿಯ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದೆ. ಪ್ರತಿ ಬಾರಿ ಧರ್ಮಸ್ಥಳವನ್ನು ಟಾರ್ಗೆಟ್ ಮಾಡಿ ಆರೋಪ ಮಾಡಲು ಕಾರಣವೇನು ಅನ್ನೋದು ಗೊತ್ತಿಲ್ಲ. ಇದನ್ನು ತಿಳಿದುಕೊಳ್ಳು ಪ್ರಯತ್ನ ಮಾಡುತ್ತೇವೆ. ಧರ್ಮಸ್ಥಳಧ ದಾನ ಧರ್ಮ, ಕೀರ್ತಿ, ಶಿಕ್ಷಣ ಸಂಸ್ಥೆ, ಗ್ರಾಮಾಭಿವದ್ಧಿ ಯೋಜನೆ, ಮಹಿಳೆಯರ ಸ್ವಾವಲಂಬಿ ಕಾರ್ಯಕ್ರಮಗಳು ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳಿಂದ ಅಸೂಯೆ ಪಟ್ಟು ಈ ರೀತಿ ಮಾಡಿರಬಹುದು. ಎಲ್ಲಾ ಸತ್ಯಗಳು ಹೊರಗೆ ಬರಬೇಕು. ತಪ್ಪಿತಸ್ತರಿಗೆ ಶಿಕ್ಷೆಯಾಗಲಿ ಎಂದು ಹೆಗ್ಗಡೆ ಆಗ್ರಹಿಸಿದ್ದಾರೆ.
ಸೌಜನ್ಯ ಪ್ರಕರಣದಲ್ಲೂ ಸುಳ್ಳು ಆರೋಪ ಮಾಡಲಾಗಿತ್ತು. ನಮ್ಮ ಕುಟುಂಬದ ಸದಸ್ಯರ ಮೇಲೆ ಮಾಡಿದ ಆರೋಪ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಆದರೆ ಕುಟುಂಬ ಸದಸ್ಯರು ಘಟನೆ ನಡೆದಾಗ ವಿದೇಶದಲ್ಲಿದ್ದರು. ಅದರೂ ಆರೋಪ ಮಾಡಿದ್ದಾರೆ. ವಿನಾಕಾರಣ ಈ ಪ್ರಕರಣದಲ್ಲಿ ಧರ್ಮಸ್ಥಳ ಹಾಗೂ ನಮ್ಮ ಕುಟುಂಬವನ್ನು ಸಿಲುಕಿಸುವ ಪ್ರಯತ್ನ ನಡೆಯಿತು ಎಂದು ಹೆಗ್ಗಡೆ ಹೇಳಿದ್ದಾರೆ.
ಧರ್ಮಸ್ಥಳ ಕ್ಷೇತ್ರ ಧಾರ್ಮಿಕ,ಶೈಶಕ್ಷಣಿಕ, ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿದೆ. ಆದರೆ ಸುಳ್ಳು ಆರೋಪಗಳ ಮೂಲಕ ಯುವ ಸಮೂಹದ ದೇವಸ್ಥಾನ, ಧಾರ್ಮಿಕ ನಂಬಿಕೆಗೆ ಘಾಸಿಗೊಳಿಸುವ ಪ್ರಯತ್ನ ನಡೆಯುತ್ತಿದೆ.ಸಾಮಾಜಿಕ ಮಾಧ್ಯಮಗಳ ಮೂಲಕ ಇತರ ವೇದಿಕೆಗಳ ಮೂಲಕ ಅಪನಂಬಿಕೆ ಬರುವಂತೆ ಮಾಡಲಾಗುತ್ತಿದೆ. ಸತತವಾಗಿ ಸುಳ್ಳು, ಅಪಪ್ರಚಾರ ಮಾಡುವ ಮೂಲಕ ಯುವಕರು, ಯುವ ಸಮೂಹ ದೇವಸ್ಥಾನದ ಮೇಲಿಟ್ಟ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಲಾಗುತ್ತಿದೆ ಎಂದು ವಿರೇಂದ್ರ ಹೆಗ್ಗಡೆ ಹೇಳಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ