ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ವೀರಶೈವ ಎಂಬ ಪದ ಬಿಟ್ಟಿದ್ದೇ ಬೊಮ್ಮಾಯಿ: ರಂಭಾಪುರಿ ಶ್ರೀ ಅಸಮಾಧಾನ

By Govindaraj S  |  First Published Aug 3, 2024, 4:51 PM IST

ವೀರಶೈವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ವಿರುದ್ಧ ರಂಭಾಪುರಿ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 


ದಾವಣಗೆರೆ (ಆ.03): ವೀರಶೈವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ವಿರುದ್ಧ ರಂಭಾಪುರಿ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಲ್ಲಿನ ರೇಣುಕಾ ಮಂದಿರದಲ್ಲಿ ನಡೆದ ಧರ್ಮಸಭೆಯಲ್ಲಿ ಮಾತನಾಡಿದ ಅವರು, 9ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ವೀರಶೈವ ಎಂಬ ಪದ ಬಿಟ್ಟಿದ್ದೇ ಬಸವರಾಜ ಬೊಮ್ಮಾಯಿ ಹಾಗು ಶಿಕ್ಷಣ ಸಚಿವರಾಗಿದ್ದ ಬಿ.ಸಿ.ನಾಗೇಶ್ ಎಂದರು. ಮುಖ್ಯಮಂತ್ರಿಗಳ ಲೆಟರ್ ಪ್ಯಾಡ್ ನಲ್ಲಿ ಬಸವಣ್ಣ ಚರಿತ್ರೆ ಪರಿಷ್ಕರಣೆ ಸಂದರ್ಭದಲ್ಲಿ ಮೊದಲು ಏನಿತ್ತು ಆ ನಂತರ ಏನಾಯಿತು ಎಂಬುದನ್ನು ಕಳಿಸಿಕೊಟ್ಟಿದ್ದಾರೆ ಎಂದರು. 

ವೀರಶೈವ ಸಮಾಜದ ಮುಖ್ಯಮಂತ್ರಿಗಳು ಅವರು, ಮೂಲ ಪದವನ್ನು ತೆಗೆದುಹಾಕಿರುವುದು ಎಷ್ಟು ನೋವು ಸಂಗತಿ, ಅವರ ಕಾಲದಲ್ಲಿ ಶಿಫಾರಸ್ಸು ಆಯ್ತು ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಮುದ್ರಣಗೊಂಡು ಜಾರಿಗೆ ಬಂತು. ಹಿಂದೆ ವೀರಶೈವ ಲಿಂಗಾಯತ ಧರ್ಮ ಎಂದು ಬೇರ್ಪಡಿಸುವ ಕೆಲಸ ಕಾಂಗ್ರೆಸ್ ಮಾಡಿದ್ರು. ಆಗ ವೀರಶೈವ ಸ್ವಾಮೀಜಿ ಗಳು ಪಂಚ ಮಠಾಧೀಶರು ಹೋರಾಟ ಮಾಡಿ ಜಯಗಳಿಸಿದ್ದೇವು. ಆಗ ಕಾಂಗ್ರೇಸ್ ಬೇರ್ಪಡಿಸುವ ಕೆಲಸ ಮಾಡಿದ್ರು. ಬಿಜೆಪಿ ಗೊತ್ತಿಲ್ಲದಂತೆ ಬೇರ್ಪಡಿಸುವ ಕೆಲಸ ಮಾಡಲು ಮುಂದಾಗಿದ್ದಾರೆ. 

Tap to resize

Latest Videos

undefined

ಆದರೆ ನಮ್ಮ ಸಮಾಜದ ಮುಖ್ಯಸ್ಥರು ವೀರಶೈವ ಎನ್ನುವ ಪದವನ್ನು ತೆಗೆದು ಹಾಕಲು ಹುನ್ನಾರ ನಡೆಸಿದ್ದಕ್ಕೆ ಯಾವುದೇ ಕ್ಷಮೆ ಕೊಡಲು ಸಾದ್ಯವಾಗುವುದಿಲ್ಲ. ಈ ರೀತಿ ತಪ್ಪು ನಮ್ಮ ಸಮಾಜದ ನಾಯಕರು ಮುಂದೆ ಮಾಡಬಾರದು ಎಂದು ಈ ಸಭೆಯ ಮೂಲಕ ತಿಳಿಸುತ್ತೇನೆ ಎಂದು ರಂಭಾಪುರಿ ಜಗದ್ಗುರು ಹೇಳಿದರು. ಪ್ರಾಚೀನ ಪರಂಪರೆಯಲ್ಲಿ ಲಿಂಗಾಯತ ಎನ್ನುವ ಪದ ರೂಢಿಗತವಾಗಿ ಬಂದಿತ್ತು. ಆದರೆ ಈಗ ಅಖಿಲ ಭಾರತ ವೀರಶೈವ ಮಹಾಸಭೆಯವರನ್ನು ಕೆಲ ಸ್ವಾಮೀಜಿಗಳು ಹೆದರಿಸಿ ಬೆದರಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾಡಿದ್ರು. 

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರವಿಲ್ಲ: ಸಚಿವ ಚಲುವರಾಯಸ್ವಾಮಿ

ಸಮಾಜ ಸಮಗ್ರತೆಯಿಂದ ಭಾವೈಕ್ಯತೆಯಿಂದ ಬದುಕಲಿ ಎಂದು ಪೀಠಗಳು ಕರೆಯಲ್ಪಟ್ಟವು. ಆದರೆ ಇವತ್ತು ಅದೇ ಬಸವಣ್ಣನ ಅನುಯಾಯಿಗಳಾದ ಬುದ್ದಿ ವಿಕಾರಗೊಂಡ ಮಠಾಧೀಶರು, ವೀರಶೈವರನ್ನು ತೆಗೆದುಹಾಕಿ ಬಸವಣ್ಣ ನವರ ನಿಜವಾದ ಚಾರಿತ್ರ್ಯಕ್ಕೆ ಕಪ್ಪು ಚುಕ್ಕಿ ತರುವ ಕೆಲಸ ಮಾಡುತ್ತಿದ್ದಾರೆ. ಯಾರು ರೀತಿ ದ್ವಂದ್ವ ಹೇಳಿಕೆ ಖಂಡಿಸಿ ಸರಿಪಡಿಸಬೇಕು ಎಂದು ವೀರಶೈವ ಮಹಾಸಭೆಗೆ ತಿಳಿಸಿದ್ದೇವೆ ಎಂದು ತಿಳಿಸಿದರು.

click me!