ದೇಶದಲ್ಲಿ ಭ್ರಷಾಚಾರದ ಪಿತಾಮಹ ಯಾರಾದ್ರೂ ಇದ್ರೆ ಅದು ಬಿಜೆಪಿ: ಸಿಎಂ ವಾಗ್ದಾಳಿ

By Ravi Janekal  |  First Published Aug 3, 2024, 4:28 PM IST

ಈ ದೇಶದಲ್ಲಿ ಭ್ರಷ್ಟಾಚಾರದ ಪಿತಾಮಹ ಯಾರಾದ್ರೂ ಇದ್ರೆ ಅದು ಬಿಜೆಪಿ. ಭ್ರಷ್ಟಾಚಾರದ ಬಗ್ಗೆ ಕುಮಾರಸ್ವಾಮಿ, ವಿಜಯೇಂದ್ರ, ಅಶೋಕ್ ಯಾರಿಗೂ ನೈತಿಕತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದರು.


ಹಾಸನ (ಆ.3): ಈ ದೇಶದಲ್ಲಿ ಭ್ರಷ್ಟಾಚಾರದ ಪಿತಾಮಹ ಯಾರಾದ್ರೂ ಇದ್ರೆ ಅದು ಬಿಜೆಪಿ. ಭ್ರಷ್ಟಾಚಾರದ ಬಗ್ಗೆ ಕುಮಾರಸ್ವಾಮಿ, ವಿಜಯೇಂದ್ರ, ಅಶೋಕ್ ಯಾರಿಗೂ ನೈತಿಕತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದರು.

ಹಾಸನ ಜಿಲ್ಲೆ ಸಕಲೇಶಪುರದ ದೊಡ್ಡತಪ್ಲುವಿಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಬಿಜೆಪಿಯವರು ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದಾರೆ. ಅವರ ಹಗರಣನ್ನು ನಾವು ಬಯಲು ಮಾಡುತ್ತೇವೆ. ಈ ಬಗ್ಗೆ ಮೈಸೂರಿನಲ್ಲಿ ಸಮಾವೇಶ ಮಾಡುತ್ತೇವೆ. ಕುಮಾರಸ್ವಾಮಿ ಅವರು ಎಷ್ಟು ದಿನ ಮಂತ್ರಿ ಆಗಿರ್ತಾರೋ ನೋಡೋಣ ಎಂದರು.

Latest Videos

undefined

'ಮಿಸ್ಟರ್ ಕುಮಾರಸ್ವಾಮಿ ನಾನು ತಿಹಾರ್ ಜೈಲು ನೋಡಿದ್ದೇನೆ' ಹೆಚ್‌ಡಿಕೆ ವಿರುದ್ಧ ಶಿವಕುಮಾರ ವಾಗ್ದಾಳಿ

ಈ ವರ್ಷ ಹಾಸನ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿದೆ. ಈ ಬಾರಿ ಶೇ.65ರಷ್ಟು ಮಳೆಯಾಗಿದೆ, ಅದರಲ್ಲೂ ಸಕಲೇಶಪುರದಲ್ಲಿ ನೂರಕ್ಕೂ ಹೆಚ್ಚು ಮಳೆಯಾಗಿದೆ. ಹೀಗಾಗಿ ಭೂಕುಸಿತವಾಗಿದೆ. ಇಲ್ಲಿ ರಾಷ್ಟ್ರೀಯ ಹೆದ್ದಾರಿ, ಚತುಷ್ಪಥ ರಸ್ತೆ ಮಾಡುತ್ತಿದ್ದಾರೆ. ಸುಮಾರು 38 ಕಿಮೀ ರಸ್ತೆ ಮಾಡುತ್ತಿದ್ದಾರೆ. ಮೇಲಿನ ಮಣ್ಣು ಸಡಿಲವಾಗಿದೆ. ಹೆಚ್ಚು ಜಮೀನನ್ನು ಸ್ವಾಧೀನಪಡಿಸಿಕೊಳ್ಳಬೇಕು. 90 ಡಿಗ್ರಿ ಕಟಿಂಗ್ ಮಾಡಬಾರದು. 45 ಡಿಗ್ರಿ ಕಟಿಂಗ್ ಮಾಡಬೇಕು. ಆಗ ಭೂಕುಸಿತ ಆಗೊಲ್ಲ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಸೂಚನೆ ನೀಡಿದ್ದೇವೆ. ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆಯುತ್ತಾರೆ. ನಾನು ದೆಹಲಿಗೆ ಹೋದಾಗ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡುತ್ತೇನೆ. ಅದಕ್ಕು ಮೊದಲು ಕೇಂದ್ರ ಸಚಿವರಿಗೆ ನಾನೂ ಕೂಡ ಪತ್ರ ಬರೆಯುತ್ತೇನೆ. ಇದು ಅವೈಜ್ಞಾನಿಕ ಕಾಮಗಾರಿಯಾಗಿದೆ ಹೀಗಾಗಿ ಭೂಕುಸಿತವಾಗಿದೆ. ಸ್ಥಳೀಯರ ಅಭಿಪ್ರಾಯ ಏನಿದೆ ಎಂಬುದನ್ನ ಕೇಂದ್ರ ಸಚಿವರಿಗೆ ತಿಳಿಸುತ್ತೇನೆ ಎಂದರು.

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯರ ಮೇಲೆ ಗೂಬೆ ಕೂರಿಸಲು ಮೋದಿ, ಅಮಿತ್ ಷಾ ಕುತಂತ್ರ -ಎಂಬಿ ಪಾಟೀಲ್

ಕೇರಳದಲ್ಲಿ ಭೂಕುಸಿತದಿಂದ ನೆಲೆ ಕಳೆದುಕೊಂಡ ಸಂತ್ರಸ್ತರಿಗೆ ನೂರು ಮನೆ ನಿರ್ಮಿಸಿಕೊಡುತ್ತೇವೆ. ಈ ವಿಚಾರವಾಗಿ ಕೇರಳ ಮುಖ್ಯಮಂತ್ರಿ ಜೊತೆ ಮಾತನಾಡಿದ್ದೇವೆ. ಮನೆಗಳು ಕೊಚ್ಚಿ ಹೋಗಿವೆ, ಜೀವಗಳು ಹಾನಿಯಾಗಿವೆ. ಅವರಿಗೆ ಸಹಾಯ ಮಾಡಲು ಸುಮಾರು ಹತ್ತು ಕೋಟಿ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಡುತ್ತೇವೆ ಎಂದರು.

click me!