ಮೈಸೂರಿನಲ್ಲಿ ಇಂದು ಐತಿಹಾಸಿಕ ದಿನ, ಹಿರಿಯರ ಸಮ್ಮುಖದಲ್ಲಿ ಬಸವ ಜಯಂತಿ ಆಚರಣೆ ಮಾಡಲಾಗುತ್ತಿದೆ. ಬಸವಣ್ಣನವರನ್ನ ನಾವು ವಿಶ್ವ ಗುರು ಎಂದು ಕರೆಯುತ್ತೇವೆ. ಏಕೆಂದರೆ ಜಾತಿ ವ್ಯವಸ್ಥೆ, ಮೌಢ್ಯತೆ, ಅಸಮಾನತೆ ವಿರುದ್ಧ ಹೋರಾಡಿದ್ದು ಬಸವಣ್ಣನವರು ಎಂದು ಸಚಿವ ಎಂಬಿ ಪಾಟೀಲ್ ನುಡಿದರು.
ಮೈಸೂರು (ಜೂ.9): ಮೈಸೂರಿನಲ್ಲಿ ಇಂದು ಐತಿಹಾಸಿಕ ದಿನ, ಹಿರಿಯರ ಸಮ್ಮುಖದಲ್ಲಿ ಬಸವ ಜಯಂತಿ ಆಚರಣೆ ಮಾಡಲಾಗುತ್ತಿದೆ. ಬಸವಣ್ಣನವರನ್ನ ನಾವು ವಿಶ್ವ ಗುರು ಎಂದು ಕರೆಯುತ್ತೇವೆ. ಏಕೆಂದರೆ ಜಾತಿ ವ್ಯವಸ್ಥೆ, ಮೌಢ್ಯತೆ, ಅಸಮಾನತೆ ವಿರುದ್ಧ ಹೋರಾಡಿದ್ದು ಬಸವಣ್ಣನವರು ಎಂದು ಸಚಿವ ಎಂಬಿ ಪಾಟೀಲ್ ನುಡಿದರು.
ಇಂದು ಮೈಸೂರಿನಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಶಿಕ್ಷಣ, ದಾಸೋಹಕ್ಕೆ ಮಠ ಮಾನ್ಯಗಳ ಕೊಡುಗೆ ಅಪಾರವಾಗಿದೆ. ನಾವೆಲ್ಲರೂ ಮತ್ತೊಮ್ಮೆ ಸಂಘಟನೆ ಮೂಲಕ ಒಗ್ಗೂಡಬೇಕಿದೆ. ಉತ್ತರ ಕರ್ನಾಟಕದಂತೆ ದಕ್ಷಿಣ ಕರ್ನಾಟಕದಲ್ಲೂ ನಾವು ಸಂಘಟಿತರಾಗಬೇಕಿದೆ. ಉತ್ತರ-ದಕ್ಷಿಣದವರು ಒಂದಾಗಿಲ್ಲ. ಸ್ವಾಮೀಜಿಗಳ ನೇತೃತ್ವದಲ್ಲಿ ನಾವು ಒಂದಾಗಬೇಕಿದೆ ಎಂದು ಕರೆ ನೀಡಿದರು.
undefined
ಜಯಂತಿ ಮಾಡಿದ್ರೆ ಸಾಲದು, ಬಸವಣ್ಣನವರ ತತ್ವ ಸಿದ್ಧಾಂತ ಅಳವಡಿಸಿಕೊಳ್ಳಬೇಕು: ಯತೀಂದ್ರ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಬಸವಣ್ಣನವರ ತತ್ವ ಸಿದ್ಧಾಂತಗಳ ಮೇಲೆ ನಂಬಿಕೆ ಇಟ್ಟಿರುವ ವ್ಯಕ್ತಿಯಾಗಿದ್ದಾರೆ. ಹಾಗಾಗಿಯೇ ಬಸವಣ್ಣನವರನ್ನ ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದಾರೆ ಎಂದರು. ಇದೇ ವೇಳೆ ಲಿಂಗಾಯತರಿಗೆ ಒಬಿಸಿ ಮೀಸಲಾತಿ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಸಚಿವರು, ಕೇಂದ್ರದಲ್ಲಿ ಮಾತ್ರ ಲಿಂಗಾಯತರಿಗೆ ಒಬಿಸಿ ಮೀಸಲಾತಿ ಸಿಗುತ್ತಿದೆ. ಅದೇ ರೀತಿ ರಾಜ್ಯದಲ್ಲೂ ಮೀಸಲಾತಿ ಸಿಗಬೇಕು. ಅದಕ್ಕಾಗಿ ಎಲ್ಲಾ ಒಳ ಪಂಗಡಗಳು ಒಂದಾಗಿ ಹೋರಾಟ ಮಾಡಬೇಕಿದೆ, ಈ ಹೋರಾಟದ ನೇತೃತ್ವವನ್ನ ಸುತ್ತೂರು ಶ್ರೀಗಳೇ ವಹಿಸಬೇಕು ಎಂದರು.