ಸಂಪುಟ ಸಭೆಗೂ ಘಳಿಗೆ ನೋಡ್ತಾರೆ: ಬರಗೂರು ಕಿಡಿ!

Published : Dec 06, 2018, 05:03 PM ISTUpdated : Dec 06, 2018, 06:47 PM IST
ಸಂಪುಟ ಸಭೆಗೂ ಘಳಿಗೆ ನೋಡ್ತಾರೆ: ಬರಗೂರು ಕಿಡಿ!

ಸಾರಾಂಶ

‘ವಿಧಾನಸೌಧ, ಸಂಸತ್ತು ಎರಡೂ ಮೌಢ್ಯದಿಂದ ಮುಕ್ತವಾಗಬೇಕು’ ‘ಸಚಿವ ಸಂಪುಟದ ಸಭೆಗೂ ಘಳಿಗೆ ನೋಡ್ತಾರೆ’ ‘ಧನುರ್ಮಾಸ ಅಂತ ಸಂಪುಟ ವಿಸ್ತರಣೆ ಮುಂದಕ್ಕೆ ಹಾಕ್ತಾರೆ’ ‘ಮಠ ಮಾನ್ಯಗಳಲ್ಲೂ ಮೌಢ್ಯ ವಿಮೋಚನೆಯಾಗಬೇಕು’ ಬೆಳಗಾವಿಯಲ್ಲಿ ಬರಗೂರು ರಾಮಚಂದ್ರಪ್ಪ ಕಿಡಿ

ಬೆಳಗಾವಿ(ಡಿ.06): ಸಚಿವ ಸಂಪುಟದ ಸಭೆಯನ್ನು ಯಾವ ಘಳಿಗೆಯಲ್ಲಿ, ಯಾವ ಸೇಕೆಂಡ್ ನಲ್ಲಿ ಶುರು ಮಾಡಬೇಕು ಅಂತ ಯೋಚನೆ ಮಾಡುವಂತ ದುಸ್ಥಿತಿಯಲ್ಲಿ ನಾವಿದ್ದೀವಿ ಎಂದು ಸಾಹಿತಿ, ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿಕೆ ನೀಡಿದ್ದಾರೆ.

"

ಸಂಪುಟ ವಿಸ್ತರಣೆ ಆಗಬೇಕು ಅಂತ ಇಷ್ಟು ದಿನ ಬಾಯಿ ಬಡ್ಕೊಂಡು, ಅದಾಗುತ್ತೆ ಅಂತ ತಿರ್ಮಾನವಾದಾಗ ಧನುರ್ಮಾಸ ಅಂತ ಮುಂದಕ್ಕೆ ಹಾಕ್ತಿವಿ ಅಂತ ಯಾರು ಹೇಳ್ತಾರೊ ಅವರಿಗೆಲ್ಲ ಮಂತ್ರಿ ಪದವಿ ಇಲ್ಲಾ ಅಂತ ಹೇಳಿಬಿಟ್ಟರೆ ಒಳ್ಳೆಯದಲ್ಲವೇ ಎಂದು ಬರಗೂರು ಹರಿಹಾಯ್ದರು.

ವಿಧಾನಸೌಧ, ಸಂಸತ್ತು ಎರಡೂ ಮೌಢ್ಯದಿಂದ ಮುಕ್ತವಾಗಬೇಕು. ಶಾಸಕರು, ಸಂಸದರು ತಮ್ಮ ಮನೆಗಳಲ್ಲಿ ಏನಾದರು ಆಚರಣೆ ಇಟ್ಟುಕೊಳ್ಳಲು ಆದರೆ ಬಹುತ್ವವನ್ನು ಪ್ರತಿಪಾದಿಸುವ ಸಂವಿಧಾನಕ್ಕೆ ಗೌರವ ಕೊಡಿ ಎಂದು ಬರಗೂರು ಆಗ್ರಹಿಸಿದರು.

ಮಠ ಮಾನ್ಯಗಳಲ್ಲೂ ಮೌಢ್ಯ ವಿಮೋಚನೆಯಾಗಬೇಕು. ಮಠಮಾನ್ಯಗಳು ಧರ್ಮದ ಸ್ಥಾನಗಳಾಗದೇ ಜಾತಿ ಕೇಂದ್ರಗಳಾಗಿ ರೂಪಾಂತರಗೊಂಡಿವೆ ಎಂದೂ ಬರಗೂರು ತೀವ್ರ ವಿಷಾದ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ