ಬಪ್ಪನಾಡು ಬ್ರಹ್ಮರಥೋತ್ಸವ ದುರಂತ, ದುರ್ಗೆ ದೇವಿ ಮುನಿಸಿಕೊಂಡಳಾ? ಇದು ಸೂಚನೆಯಾ?

Published : Apr 19, 2025, 01:59 PM ISTUpdated : Apr 19, 2025, 03:29 PM IST
ಬಪ್ಪನಾಡು ಬ್ರಹ್ಮರಥೋತ್ಸವ ದುರಂತ, ದುರ್ಗೆ ದೇವಿ ಮುನಿಸಿಕೊಂಡಳಾ? ಇದು ಸೂಚನೆಯಾ?

ಸಾರಾಂಶ

ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ರಥೋತ್ಸವದಲ್ಲಿ ತೇರು ಮುರಿದು ಬಿದ್ದಿದೆ. ಗೆದ್ದಲು ಹಿಡಿದ ಶಿಥಿಲ ಮರದ ಆಕ್ಸಲ್ ತುಂಡಾಗಿ ಈ ಅವಘಡ ಸಂಭವಿಸಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ. ಆಡಳಿತ ಮಂಡಳಿಯ ನಿರ್ಲಕ್ಷ್ಯಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವಿಯ ಅಸಮಾಧಾನ ಎಂದೂ ಚರ್ಚಿಸುತ್ತಿದ್ದಾರೆ.

ಮುಲ್ಕಿ (ಏ19): ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಪ್ರಸಿದ್ಧ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಥೋತ್ಸವದ ವೇಳೆ ತೇರು ಮುರಿದು ಬಿದ್ದ ಅವಘಡ ಈಗ ಕರಾವಳಿಯಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಯಾವುದೋ ದೋಷವಿರಬೇಕು. ದೇವಿ ಮುನಿಸಿಕೊಂಡಿದ್ದಾಳೆ. ಇದು ಅಪಶಕುನದ ಸೂಚನೆ ಎಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ. 'ದೇವಿ ಒಂದು ಸಂದೇಶ ಕೊಟ್ಟಿದ್ದಾಳೆ, ಸರಿ ಮಾಡಿಕೊಳ್ಳಿ ಎಂದು ಎಚ್ಚರಿಸಿದ್ದಾಳೆ' ಎಂದು ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರದ ಭಕ್ತರು ಹೇಳಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ  ಮಾತನಾಡುತ್ತಾ ಕ್ಷೇತ್ರದ ಭಕ್ತ ಮೋಹನದಾಸ್ ಸುರತ್ಕಲ್ ಕಣ್ಣೀರು ಹಾಕಿದರು. ಬಪ್ಪನಾಡು ಕ್ಷೇತ್ರದ ರಥೋತ್ಸವದಲ್ಲಿ ನಡೆದ ದುರ್ಘಟನೆ ಇದೇ ಮೊದಲಲ್ಲ. ಕಳೆದ ಬಾರಿ ಇದಕ್ಕಿಂತ ದೊಡ್ಡ ದುರಂತ ಸಂಭವಿಸುತ್ತಿತ್ತು. ಕಳೆದ ಬಾರಿ ರಥ ಒಂದು ಕಡೆ ವಾಲಿ ದುರಂತ ಸಂಭವಿಸಿತ್ತು. ದೊಡ್ಡ ದುರ್ಘಟನೆ ತಪ್ಪಿ ಹೋಗಿತ್ತು, ಇದು ಒಂದು ರೀತಿಯಲ್ಲಿ ನಿರ್ಲಕ್ಷ್ಯದಿಂದ ಆಗಿದೆ, ಎಲ್ಲರೂ ಕೆಲಸ ಮಾಡಿದ್ದಾರೆ. ರಥದ ಮರದ ಅವಧಿ ಕಳೆದಿದೆ, ಗೆದ್ದಲು ಬಂದಿತ್ತು. ಹೀಗಾಗಿ ಶಕ್ತಿ ಹೀನವಾಗಿತ್ತು. ಗೆದ್ದಲು ಹಿಡಿದ ಮರವನ್ನ ಯಾಕೆ ದುರಸ್ತಿ ಮಾಡಿಲ್ಲ? ಇಷ್ಟು ಭಾರವಾದ ರಥ ಎಳೆಯುವಾಗ ಎಷ್ಟು ಒತ್ತಡ ಬಿದ್ದಿರಬಹುದು? ಒಂದು ಕ್ಷೇತ್ರಕ್ಕೆ ಬ್ರಹ್ಮರಥ ಕೀರ್ತಿ ಕಲಶವಿದ್ದಂತೆ, ಅ ಕಲಶ ಬಿದ್ದು ಹೋಗೋದು ಸರಿಯಲ್ಲ. ಅಪಶಕುನದಲ್ಲಿ ದೊಡ್ಡ ಅಪಶಕುನವದು, ದೇವಿಗೆ ಕೋಪವಿರಬಹುದು ಅನಿಸುತ್ತೆ. ಆಕೆ ಏನೋ ಅಪೇಕ್ಷೀಸುತ್ತಿದ್ದಾಳೆ ಎಂದು ಅನಿಸುತ್ತೆ, ಪ್ರಶ್ನಾ ಚಿಂತನೆಯಲ್ಲಿ ವಿಮರ್ಶೆ ಮಾಡಿ ನೋಡಬೇಕು. ರಥೋತ್ಸವದ ವೇಳೆ ಯಾಕೆ ಈ ರೀತಿ ನಡೆಯುತ್ತೆ?

ಹಿಂದೆ ದೇವಸ್ಥಾನದಲ್ಲಿ ಅಗ್ನಿ ಅವಘಢ ಸಂಭವಿಸಿದ್ದ ವೇಳೆ ದೇವಿ ಬ್ರಹ್ಮಕಲಶ ಬಯಸಿದ್ದಾಳೆ ಎಂಬ ವಿಚಾರ ತಿಳಿದಿತ್ತು. ದೇವಿ ಏನೋ ಬಯಸುತ್ತಿದ್ದಾಳೆ ಎಂಬುದನ್ನು ವಿಮರ್ಶೆ ಮಾಡಬೇಕು. ಈ ಬಾರಿ ದೇವಿಗೆ ಹೊಸ ಬ್ರಹ್ಮರಥ ಬೇಕೋ ಏನೋ ಗೊತ್ತಿಲ್ಲ. ಇದೆಲ್ಲ ಒಂದು ನೆಪ ಆದರೆ ಜಾಗೃತರಾಗಿರಬೇಕು, ಅಮ್ಮನಿಗೆ ಏನು ಬೇಕೋ ಗೊತ್ತಿಲ್ಲ. ಅದಕ್ಕೆ ಹೀಗೆ ಮಾಡುತ್ತಿದ್ದಳೋ ಏನೋ? 9 ಮಾಗಣೆಯ ಭಕ್ತರ ಮನಸ್ಸಿಗೆ ತುಂಬಾ ನೋವಾಗಿದೆ . ಯಾವಾಗ ದೇವಿ ಸಂತೋಷ ಪಡುತ್ತಾಳೊ ಅಲ್ಲಿವರೆಗೆ ನಮಗೆ ಸಂತೋಷವಿಲ್ಲ, ಅಷ್ಟು ನೋವು ನಮ್ಮ ಮನಸ್ಸಿನಲ್ಲಿದೆ.

ದೇವಿಯ ಮೂರ್ತಿ ಕೆಳಗಡೆ ಬಿದ್ದಿದರೆ ನಾವು ಏನು ಮಾಡಬೇಕಿತ್ತು ? ಜೀವಹಾನಿ ಆಗಿದ್ರೆ ನಾವು ಏನು ಮಾಡಬೇಕು? ದೇವಿ ಒಂದು ಸಂದೇಶ ಕೊಟ್ಟಿದ್ದಾಳೆ, ಸರಿ ಮಾಡಿಕೊಳ್ಳಿ ಎಂದು ಎಚ್ಚರಿಸಿದ್ದಾಳೆ. ಮುಖ್ಯಸ್ಥರು ತಕ್ಷಣ 9 ಮಾಗಣೆ ಜನರ ಸಭೆ ಕರೆಯಬೇಕಿದೆ, ಎಲ್ಲರ ಅಭಿಪ್ರಾಯ ಪಡೆದುಕೊಳ್ಳಿ. ಇದು ಸಣ್ಣ ವಿಷಯವಲ್ಲ, ಇದಕ್ಕೆ ಮುಂದೆ ಬೆಲೆ ತೆರಬೇಕಾದಿತು ಎಂದಿದ್ದಾರೆ.

ತಪ್ಪಿದ ಭಾರೀ ಅನಾಹುತ:
ರಾತ್ರಿ‌ ಸುಮಾರು 1.40-2.00 ಗಂಟೆಗೆ  ರಥೋತ್ಸವ ನಡೆಯುತ್ತಿದ್ದ ವೇಳೆ ತೇರಿನ ಮೇಲ್ಭಾಗ ಏಕಾಏಕಿ ಕುಸಿತವಾಗಿ ಬಿದ್ದಿದೆ. ರಥದ ಕೆಳಗಡೆ ನೂರಾರು ಸಂಖ್ಯೆಯಲ್ಲಿ ನೆರೆದಿದ್ದರು. ತೇರಿನ ಮೇಲ್ಬಾಗ ಕುಸಿಯುವ ವೇಳೆ ಅರ್ಚಕರು ತೇರಿನಲ್ಲೇ ಇದ್ದರು. ಅದೃಷ್ಟವಶಾತ್  ಯಾರಿಗೂ ಗಾಯವಾಗಿಲ್ಲ, ಪ್ರಾಣಹಾನಿಯಾಗಿಲ್ಲ. ತೇರು ಬಿದ್ದ ಬಳಿಕ  ಚಂದ್ರಮಂಡಲ ತೇರಿನಲ್ಲಿ   ದೇವರ ಉತ್ಸವ ಮುಂದುವರೆಯಿತು.

ಘಟನೆ ಹಿನ್ನೆಲೆ
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ರಥದ ಚಕ್ರದ ಆ್ಯಕ್ಸಲ್ ತುಂಡಾಗಿ  ಈ  ಅವಘಡ ಸಂಭವಿಸಿದೆ. ರಥದ ಮುಂಭಾಗದ ಚಕ್ರ ಸಂಪೂರ್ಣವಾಗಿ ಕಿತ್ತು ಬಂದಿದೆ. ಮುಂಭಾಗದ ಎರಡು ಚಕ್ರಕ್ಕೆ ಅಳವಡಿಸಿದ್ದ ಮರದ ಆ್ಯಕ್ಸಲ್ ತುಂಡಾದರಿಂದ ಆಯತಪ್ಪಿ ರಥದ ಗೋಪುರ ಬಿದ್ದಿದೆ.  ರಥದ ಮೇಲ್ಬಾಗ ಬೀಳುತ್ತಿದ್ದಂತೆ ಭಕ್ತರು ಓಡಿ ಹೋದ  ಹಿನ್ನೆಲೆ ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ.  ಸದ್ಯ ರಥದ ಮೇಲೆ ಟರ್ಪಾಲ್ ಹಾಕಿರುವ ದೇವಸ್ಥಾನದ ಆಡಳಿತ ಮಂಡಳಿ ಅದನ್ನು ಬದಿಯಲ್ಲಿ ತಂದು ಇರಿಸಿದೆ. ರಥದ ಅವಶೇಷವಮ್ಮು  ಕುತೂಹಲದಿಂದ ಬಂದು ಭಕ್ತರು ವೀಕ್ಷಿಸುತ್ತಿದ್ದಾರೆ.

ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್
ಬಪ್ಪನಾಡು ದುರ್ಗಾಪರಮೇಶ್ವರಿ ದೇವರ ರಥದ ಬಳಿ ಏಷ್ಯಾನೆಟ್ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದ್ದು, ರಥದ ಚಕ್ರದ ಬಳಿ ಗೆದ್ದಲು ಹಿಡಿದು ಶಿಥಿಲಗೊಂಡರೂ ನಿರ್ಲಕ್ಷ್ಯ ತೋರಲಾಯ್ತಾ? ಎಂಬ ಪ್ರಶ್ನೆ ಎದ್ದಿದೆ. ರಥದ ಚಕ್ರದ ಬಳಿಯ ಮರದ ಆಕ್ಸಲ್ ಗೆ ಗೆದ್ದಲು ಹಿಡಿದು ಶಿಥಿಲಗೊಂಡಿದೆ. ಮಳೆಯ ನೀರು ಬಿದ್ದು ಶಿಥಿಲಗೊಂಡಿರೋ ಸಾಧ್ಯತೆ. ಹೀಗಿದ್ರೂ ಫಿಟ್ ನೆಸ್ ಟೆಸ್ಟ್ ಮಾಡದೇ ಆಡಳಿತ ಮಂಡಳಿ ರಥೋತ್ಸವ ಮಾಡಿದೆ.  ರಥ ಕಟ್ಟಿ ತಡರಾತ್ರಿ  ದುರ್ಗಾಪರಮೇಶ್ವರಿ ಬ್ರಹ್ಮರಥೋತ್ಸವ ಮಾಡುವಾಗ ಈ ದುರ್ಘಟನೆ  ನಡೆದಿದೆ. ಸಂಪೂರ್ಣ ಶಿಥಿಲಗೊಂಡಿದ್ದರೂ  ಪರಿಶೀಲನೆ ಮಾಡದಿರುವುದುದೇ ಈ ಅವಘಡಕ್ಕೆ ಕಾರಣವಾಗಿದೆ.

ಆಡಳಿತ ಮಂಡಳಿ ನಿರ್ಲಕ್ಷ್ಯ
ರಥೋತ್ಸವದ ವೇಳೆ  ಮೃದುವಾದ ಮಣ್ಣಿದ್ದ ಜಾಗದಲ್ಲಿ  ಬ್ರಹ್ಮರಥದ ಚಕ್ರ ಹೂತು ಹೋಯ್ತು. ಈ ವೇಳೆ ರಥದ ಪಥ ಬದಲಿಸೋ ಮರದ ತುಂಡು ತಿರುಗಿಸಿದ ವೇಳೆ ಮುಂಭಾಗದ ಚಕ್ರಕ್ಕೆ ಹಾನಿಯಾಗಿ ಚಕ್ರದ ಭಾಗದ ಶಿಥಿಲಗೊಂಡ ಮರದ ಆಕ್ಸೆಲ್ ತುಂಡಾಗಿ ಬಲಭಾಗಕ್ಕೆ  ರಥ ವಾಲಿದೆ. ಮಾತ್ರವಲ್ಲ ಏಕಾಏಕಿ ರಥ ವಾಲಿದ ಪರಿಣಾಮ ರಥದ ಗೋಪುರ ನೆಲಕ್ಕುರುಳಿದೆ. ಅಡಳಿತ ಮಂಡಳಿ ನಿರ್ಲಕ್ಷಿದಿಂದಲೇ ಬ್ರಹ್ಮರಥದ ಅವಘಡ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಕುಕ್ಕೆ ಸುಬ್ರಹ್ಮಣ್ಯ ಬಳಿಕ ಜಿಲ್ಲೆಯ ಅತೀ ದೊಡ್ಡ ಬ್ರಹ್ಮರಥವಾಗಿದೆ. ದುರ್ಗಾಪರಮೇಶ್ವರಿ ದಯೆಯಿಂದ ಲಕ್ಷಾಂತರ ಭಕ್ತರಿದ್ದರೂ ಬಾರೀ ಅವಘಡ ತಪ್ಪಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ! ಏನಿದು ಪ್ರಕರಣ?
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!