ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಳ; ಇತ್ತ ರಾಜಕೀಯ ಹಗ್ಗ ಜಗ್ಗಾಟದಲ್ಲಿ ಸರ್ಕಾರ!

By Kannadaprabha NewsFirst Published Aug 17, 2023, 7:08 AM IST
Highlights

ಸಾಲಬಾಧೆ ತಾಳಲಾರದೆ ಹಾವೇರಿಯಲ್ಲಿ ಮತ್ತೊಬ್ಬ ರೈತ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಮೂಲಕ ಕಳೆದ 15 ದಿನಗಳಲ್ಲಿ ಜಿಲ್ಲೆಯಲ್ಲಿ ಮೂವರು ರೈತರು ಆತ್ಮಹತ್ಯೆಗೆ ಶರಣಾಗಿರುವ ಆತಂಕಕಾರಿ ಬೆಳವಣಿಗೆ ನಡೆದಿದೆ.

ಹಾವೇರಿ/ಧಾರವಾಡ (ಆ.17) : ಸಾಲಬಾಧೆ ತಾಳಲಾರದೆ ಹಾವೇರಿಯಲ್ಲಿ ಮತ್ತೊಬ್ಬ ರೈತ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಮೂಲಕ ಕಳೆದ 15 ದಿನಗಳಲ್ಲಿ ಜಿಲ್ಲೆಯಲ್ಲಿ ಮೂವರು ರೈತರು ಆತ್ಮಹತ್ಯೆಗೆ ಶರಣಾಗಿರುವ ಆತಂಕಕಾರಿ ಬೆಳವಣಿಗೆ ನಡೆದಿದೆ.

ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕು ಬಾಳಂಬೀಡ ಗ್ರಾಮದ ರಮೇಶ್‌ ಮಡ್ಡಿ (45) ಆತ್ಮಹತ್ಯೆ ಮಾಡಿಕೊಂಡ ರೈತ. ವಿಷಸೇವಿಸಿ ಅಸ್ವಸ್ಥಗೊಂಡಿದ್ದ ರಮೇಶ್‌ ಮಡ್ಡಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇವರು ವಿವಿಧ ಬ್ಯಾಂಕ್‌ಗಳಲ್ಲಿ .10 ಲಕ್ಷ ಸಾಲ ಮಾಡಿಕೊಂಡಿದ್ದರು. ಈ ಸಲ ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆಯೂ ನಷ್ಟವಾಗಿದ್ದರಿಂದ ಕಂಗೆಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಾವೇರಿಯಲ್ಲಿ ನಾಲ್ಕೈದು ತಿಂಗಳಿಂದ ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಏಪ್ರಿಲ್‌ನಿಂದ ಈವರೆಗೆ ಒಟ್ಟು 23 ರೈತರು ಸಾವಿಗೆ ಶರಣಾಗಿದ್ದಾರೆ. ಹಾವೇರಿಯಲ್ಲಿ ರೈತರ ಸರಣಿ ಆತ್ಮಹತ್ಯೆ ಕುರಿತು ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿದ್ದು, ಅನ್ನದಾತನ ಸಾವಿನ ವಿಚಾರ ವಿಧಾನಮಂಡಲದ ಅಧಿವೇಶನದಲ್ಲೂ ತೀವ್ರ ಚರ್ಚೆಗೆ ಕಾರಣವಾಗಿತ್ತು.

 

ಧಾರವಾಡ: ಸಾಲಬಾಧೆಗೆ ಒಂದೂವರೆ ತಿಂಗಳಲ್ಲಿ ಆರು ಜನ ರೈತರ ಆತ್ಮಹತ್ಯೆ

ಧಾರವಾಡಲ್ಲೂ ಆತ್ಮಹತ್ಯೆ: ಇದೇ ವೇಳೆ ಧಾರವಾಡದಲ್ಲೂ ಸಾಲಬಾಧೆ ತಾಳಲಾರದೆ ಮಾದನಭಾವಿ ಗ್ರಾಮದ ರೈತ ಯಲ್ಲಪ್ಪ ಮಹಾದೇವ ಆಡೀನ್‌(67) ಅವರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಕೃಷಿ ಮತ್ತು ಟ್ರ್ಯಾಕ್ಟರ್‌ ಖರೀದಿಗೆ .7 ಲಕ್ಷ ಸಾಲ ಮಾಡಿದ್ದರು ಎಂದು ತಿಳಿದು ಬಂದಿದೆ. ಸಾಲ ತೀರಿಸಲಾಗದ ಅಸಹಾಯಕತೆಯಿಂದ ಬೇಸತ್ತು ಆ.11ರಂದು ವಿಷ ಸೇವಿಸಿದ್ದರು. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಕಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮಂಗಳವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಸಾಲ ತೀರಿಸಲಾಗದೆ ರೈತ ಆತ್ಮಹತ್ಯೆ

ಸಾಲ ತೀರಿಸಲಾಗದ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ತಾಲೂಕಿನ ಮಾದನಭಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಯಲ್ಲಪ್ಪ‌ ಮಹಾದೇವ ಆಡೀನ್ (67) ಆತ್ಮಹತ್ಯೆ ಮಾಡಿಕೊಂಡ ರೈತ. ಕೃಷಿ ಸಾಲ‌ ಮತ್ತು ಟ್ರ್ಯಾಕ್ಟರ್ ಖರೀದಿಗೆ ಬ್ಯಾಂಕಿನಲ್ಲಿ ಸುಮಾರು‌ ಏಳು ಲಕ್ಷ ರೂಪಾಯಿ ಸಾಲ ಮಾಡಿದ್ದರು ಎಂದು ತಿಳಿದು ಬಂದಿದೆ. ಸಾಲ ತೀರಿಸಲಾಗದೇ ಅಸಹಾಯಕತೆಯಿಂದ ಬೇಸತ್ತು ಕಳೆದ ಆ.11 ರಂದು ಯಲ್ಲಪ್ಪ ವಿಷ ಸೇವಿಸಿದ್ದರು. ತೀವ್ರ ಅಸ್ವಸ್ಥರಾಗಿದ್ದ ಯಲ್ಲಪ್ಪ ಅವರನ್ನು ಕಿಮ್ಸ್‌ಗೆ‌ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮಂಗಳವಾರ ರಾತ್ರಿ‌ ಕೊನೆಯುಸಿರೆಳೆದಿದ್ದಾರೆ. ಗರಗ ಠಾಣೆಯ ಪಿಎಸ್‌ಐ ಎಫ್.ಎಂ. ಮಂಟೂರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮುಂಗಾರು ವೈಫಲ್ಯ: ಎರಡೇ ತಿಂಗಳಲ್ಲಿ 42 ರೈತರ ಆತ್ಮಹತ್ಯೆ!

click me!