ಈಗ ಸಂವಿಧಾನ ಜಪ ಮಾಡೋ ಕಾಂಗ್ರೆಸ್ ಅಂಬೇಡ್ಕರ್‌ರನ್ನ 2 ಬಾರಿ ಸೋಲಿಸಿತ್ತು, ನಿಧನರಾದಾಗ ಅಂತ್ಯಸಂಸ್ಕಾರಕ್ಕೂ ಜಾಗ ಕೊಡಲಿಲ್ಲ!

Kannadaprabha News   | Kannada Prabha
Published : Nov 27, 2026, 08:08 AM IST
Former Chief Minister of Tripura Biplab Kumar Deb

ಸಾರಾಂಶ

ಕಾಂಗ್ರೆಸ್ ತನ್ನ ಸ್ವಾರ್ಥಕ್ಕಾಗಿ ಅಂಬೇಡ್ಕರ್ ಮತ್ತು ಸಂವಿಧಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಬಿಜೆಪಿ ನಾಯಕ ಬಿಪ್ಲಬ್ ಕುಮಾರ್ ದೇಬ್ ಆರೋಪಿಸಿದ್ದಾರೆ. ಕಾಂಗ್ರೆಸ್‌ ಅಂಬೇಡ್ಕರ್‌ ಅವರನ್ನು ಗೌರವಿಸಲಿಲ್ಲ ಹಾಗೂ ದೇಶದ ಹಿತಕ್ಕಿಂತ ಸ್ವಹಿತಾಸಕ್ತಿಗೆ ತಿದ್ದುಪಡಿಗಳನ್ನು ತಂದಿದೆ ಎಂದು ವಾಗ್ದಾಳಿ.

ಬೆಂಗಳೂರು (ನ.27): ಬಾಬಾ ಸಾಹೇಬ್‌ ಅಂಬೇಡ್ಕರ್‌(Dr BR Ambedkar) ಅವರ ಸಂವಿಧಾನ(Constitutiion)ವನ್ನು ಕಾಂಗ್ರೆಸ್ಸಿ(Congress)ನವರು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ(BJP National General Secretary) ಹಾಗೂ ತ್ರಿಪುರಾದ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್(Former Chief Minister of Tripura Biplab Kumar Deb) ಆರೋಪಿಸಿದ್ದಾರೆ.

ಗುರುವಾರ ನಗರದಲ್ಲಿ ರಾಜ್ಯ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ‘ಸಂವಿಧಾನ ಗೌರದ ದಿನʼ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ಮತ್ತು ಅಂಬೇಡ್ಕರ್‌ ಎರಡೂ ಒಂದಕ್ಕೊಂದು ಪೂರಕ. ಸಂವಿಧಾನದ ಪ್ರತಿ ನೋಡಿದರೆ ಇನ್ನೊಬ್ಬ ಮಹಾಪುರುಷನ ನೆನಪಾಗುತ್ತದೆ. ಅವರೇ ಅಂಬೇಡ್ಕರ್‌. ದೇಶದಲ್ಲಿ ಕೆಲವು ರಾಜಕಾರಣಿಗಳು ತುಂಬಾ ಎತ್ತರಕ್ಕೆ ಹೋಗಿದ್ದಾರೆ. ಅವರನ್ನು ನೋಡಿದಾಗ ಸಂಸಾರ ಮಾತ್ರ ನೆನಪಾಗುತ್ತದೆ ಎಂದು ಹೇಳಿದರು.

ಅಂಬೇಡ್ಕರ್ ಅವರನ್ನ ಎರಡು ಬಾರಿ ಸೋಲಿಸಿದ್ದು ಕಾಂಗ್ರೆಸ್

ಅಂಬೇಡ್ಕರ್‌ ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಸಿತು. ಅವರು ನಿಧನರಾದಾಗ ದೆಹಲಿಯಲ್ಲಿ ಅಂತ್ಯಸಂಸ್ಕಾರಕ್ಕೂ ಜಾಗ ನೀಡಲಿಲ್ಲ. ಅವರು ಸಚಿವರಾಗಿ ಒಂದೂವರೆ ವರ್ಷದಲ್ಲಿ ರಾಜೀನಾಮೆ ನೀಡಬೇಕಾಗಿ ಬಂತು. ಕಾಂಗ್ರೆಸ್‌ನವರು ಸಂವಿಧಾನ ಪ್ರತಿ ಹಿಡಿದುಕೊಂಡೇ ಪ್ರಮಾಣವಚನ ಸ್ವೀಕರಿಸುತ್ತಾರೆ. ಆದರೆ ಅದನ್ನು ಹೇಗೆ ಹಿಡಿಯಬೇಕು ಎಂದೇ ಅವರಿಗೆ ತಿಳಿದಿಲ್ಲ. ಸಂವಿಧಾನದ ಬಗ್ಗೆ ನಿಜವಾದ ಗೌರವ ಹೃದಯದಲ್ಲಿ ಇರಬೇಕೇ ಹೊರತು ತೋರಿಕೆಗೆ ಇರಬಾರದು ಎಂದರು.

ಕಾಂಗ್ರೆಸ್‌ ಸ್ವಾರ್ಥಕ್ಕಾಗಿ ಅಂಬೇಡ್ಕರ್, ಸಂವಿಧಾನ ಬಳಕೆ

ದೇಶದಲ್ಲಿ ತುಂಬಾ ಸಮಯದವರೆಗೆ ಗಾಂಧಿ ಹೆಸರಲ್ಲಿ ಅಧಿಕಾರವನ್ನು ಕಾಂಗ್ರೆಸ್‌ನವರು ಅನುಭವಿಸಿದರು. ಹಲವು ಬಾರಿ ಸಂವಿಧಾನದ ತಿದ್ದುಪಡಿ ಮಾಡಲು ಮಾಡಿದ್ದಾರೆ. ಆದರೆ ಆ ತಿದ್ದುಪಡಿಗಳೆಲ್ಲ ದೇಶದ ಹಿತದಿಂದ ನಡೆದಿಲ್ಲ. ಅವೆಲ್ಲ ಸ್ವಾರ್ಥಕ್ಕಾಗಿ ನಡೆದಿವೆ. ಗಾಂಧಿ ಪರಿವಾರದವರು ಸಂವಿಧಾನವನ್ನು ಒಪ್ಪಿಕೊಂಡೇ ಇಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ಡಿಜಿಟಲ್‌ ವ್ಯವಸ್ಥೆ ಸುಧಾರಣೆಯಿಂದ ಹಿಡಿದು ಹಲವು ಕ್ರಾಂತಿಕಾರಕ ಬದಲಾವಣೆ ಜಾರಿ ಮಾಡಿದೆ ಎಂದು ವಿವರಿಸಿದರು.

ಎಸ್ಸಿ ಎಸ್ಟಿಗೆ ಮೀಸಲಿಟ್ಟ ಹಣ ಮುಸ್ಲಿಮರಿಗೆ ಕೊಟ್ಟರು

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಸಹ ಕೇಂದ್ರದ ಕಾಂಗ್ರೆಸ್‌ ನಾಯಕರ ಆಜ್ಞೆಯಂತೆ ವರ್ತಿಸುತ್ತದೆ. ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಮುಸ್ಲಿಮವರಿಗೆ ಕೊಟ್ಟರು. ನಾವು ಮುಸ್ಲಿಮರ ವಿರುದ್ಧ ಇಲ್ಲ. ಆದರೆ ಸಂವಿಧಾನ ಹಾಳು ಮಾಡುವವರ ವಿರುದ್ಧ ಇದ್ದೇವೆ. ನಾವೆಲ್ಲ ಸಂವಿಧಾನದ ಮೂಲಕವೇ ನಾವು ಗೆಲ್ಲುತ್ತಾ ಬಂದಿದ್ದೇವೆ, ಜನಪ್ರತಿನಿಧಿಗಳಾಗಿದ್ದೇವೆ ಎಂದರು.

ಕಾಂಗ್ರೆಸ್ ದೇಶದ ವ್ಯವಸ್ಥೆಯನ್ನ ಹಾಳು ಮಾಡಲು ಹೊರಟಿದೆ

ಜೆನ್‌ಜಿಗಳು ಹೋರಾಟ ಮಾಡಿ ಚುನಾವಣಾ ಆಯೋಗದ ವಿರುದ್ಧ ಸುಪ್ರೀಂಕೋರ್ಟ್‌ಗೆ ದೂರು ನೀಡುತ್ತಾರೆ. ಅವರ ಜೊತೆ ಕಾಂಗ್ರೆಸ್‌ ನಿಲ್ಲುತ್ತದೆ. ಬಾಂಗ್ಲಾದೇಶ, ನೇಪಾಳದಲ್ಲಿ ನಡೆದಂತೆ ಜೆನ್‌ಜೀ ಕ್ರಾಂತಿ ಭಾರತದಲ್ಲಿ ನಡೆಯುವುದಿಲ್ಲ. ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಕಾಂಗ್ರೆಸ್‌ ಸಹಮತ ನೀಡಲಿಲ್ಲ. ಸಂಸತ್ತಿನ ಒಳಗೆ ಕೂರಲು ಆಸನಗಳಿದ್ದರೂ ಕಾಂಗ್ರೆಸ್‌ನವರು ಹೊರಗೆ ಬಂದು ಪ್ರತಿಭಟನೆ ಮಾಡ್ತಾರೆ. ಚುನಾವಣೆಯಲ್ಲಿ ಗೆದ್ದು ಟೀವಿಯಲ್ಲಿ ಕಾಣಿಸಿಕೊಳ್ಳಲು ಇವರಿಗೆ ಆಗ್ತಾ ಇಲ್ಲ. ಅದಕ್ಕೆ ಪ್ರತಿಭಟನೆ ದಾರಿ ಹಿಡಿಯುತ್ತಾರೆ. ಕಾಂಗ್ರೆಸ್‌ನವರು ದೇಶದ ವ್ಯವಸ್ಥೆಯನ್ನೇ ಹಾಳು ಮಾಡಲು ಮುಂದಾಗಿದ್ದಾರೆ ಆದರೆ ನಾವು ಹಾಗೆ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಖಂಡರಾದ ಎನ್.ರವಿಕುಮಾರ್‌, ಗೋವಿಂದ ಕಾರಜೋಳ ಮತ್ತಿತರರು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇದೇ ಮೊದಲ ಬಾರಿಗೆ ಕೆಎಎಸ್ ಪರೀಕ್ಷೆಯ 11 ದಿನದಲ್ಲೇ ರಿಸಲ್ಟ್‌, ಎಲ್ಲರ ಅಂಕ ಬಹಿರಂಗ! ಪಾರದರ್ಶಕತೆಯತ್ತ ಮಹತ್ವದ ಹೆಜ್ಜೆ
Karnataka News Live: ಈಗ ಸಂವಿಧಾನ ಜಪ ಮಾಡೋ ಕಾಂಗ್ರೆಸ್ ಅಂಬೇಡ್ಕರ್‌ರನ್ನ 2 ಬಾರಿ ಸೋಲಿಸಿತ್ತು, ನಿಧನರಾದಾಗ ಅಂತ್ಯಸಂಸ್ಕಾರಕ್ಕೂ ಜಾಗ ಕೊಡಲಿಲ್ಲ!