ಬೆಂಗಳೂರಿನಲ್ಲಿ ಕೊರೋನಾ ರಣಕೇಕೆ: ಪ್ರಸಿದ್ಧ ಬನಶಂಕರಿ ಅಮ್ಮನವರ ದೇವಸ್ಥಾನ ಬಂದ್

Suvarna News   | Asianet News
Published : Jun 25, 2020, 01:50 PM ISTUpdated : Jun 25, 2020, 02:03 PM IST
ಬೆಂಗಳೂರಿನಲ್ಲಿ ಕೊರೋನಾ ರಣಕೇಕೆ: ಪ್ರಸಿದ್ಧ ಬನಶಂಕರಿ ಅಮ್ಮನವರ ದೇವಸ್ಥಾನ ಬಂದ್

ಸಾರಾಂಶ

ಕೊರೋನಾ ವೈರಸ್‌ ಕಾಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಬನಶಂಕರಿ ಅಮ್ಮನವರ ದೇವಸ್ಥಾನ ಬಂದ್| ಮುಂಜಾಗ್ರತಾ ಕ್ರಮವಾಗಿ ದೇವಸ್ಥಾನವನ್ನ ಬಂದ್‌ ಮಾಡಲು ದೇವಾಲಯದ ಅಡಳಿತ ಮಂಡಳಿ ನಿರ್ಧಾರ| ಈ ಸಂಬಂಧ ಸುತ್ತೋಲೆ ಹೊರಡಿಸಿದ ದೇವಾಲಯದ ಅಡಳಿತ ಮಂಡಳಿ| 

ಬೆಂಗಳೂರು(ಜೂ.25): ಮಹಾಮಾರಿ ಕೊರೋನಾ ವೈರಸ್‌ ನಗರದಲ್ಲಿನ ಜನತೆಗೆ ದಿನೇ ದಿನೇ ಹೆಚ್ಚಿನ ಕಾಟ ಕೊಡುತ್ತಿದೆ. ಹೌದು, ಇದರಿಂದ ಜನರು ಮನೆ ಬಿಟ್ಟು ಹೊರ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ಕೊರೋನಾ ಪ್ರಕರಣಗಳು ಶರವೇಗದಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಮತ್ತೆ ಬೆಂಗಳೂರಿನಲ್ಲಿ ಮತ್ತೆ ಲಾಕ್‌ಡೌನ್‌ ಮಾಡಿ ಎಂಬ ಕೂಗು ಸಹ ಕೇಳಿ ಬರುತ್ತಿದೆ.

ಕೊರೋನಾ ವೈರಸ್‌ ಕಾಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಬನಶಂಕರಿ ಅಮ್ಮನವರ ದೇವಸ್ಥಾನ ಬಂದ್ ಆಗಿದೆ. ಹೌದು, ಮುಂಜಾಗ್ರತಾ ಕ್ರಮವಾಗಿ ದೇವಸ್ಥಾನವನ್ನ ಬಂದ್‌ ಮಾಡಲು ದೇವಾಲಯದ ಅಡಳಿತ ಮಂಡಳಿ ನಿರ್ಧರಿಸಿದೆ. ಈ ಸಂಬಂಧ ಸುತ್ತೋಲೆಯೊಂದನ್ನ ಕೂಡ ಹೊರಡಿಸಿದೆ. 

ಕೊರೋನಾ ಕಾಟದ ಮಧ್ಯೆ SSLC ಪರೀಕ್ಷೆ ಆರಂಭ, ವೈರಸ್‌ ಭಯವಿಲ್ಲದೆ ಎಕ್ಸಾಮ್‌ಗೆ ಬಂದ ವಿದ್ಯಾರ್ಥಿಗಳು

ವಾರದಲ್ಲಿ ಮೂರು ದಿನ ಅಮ್ಮನವರ ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶವನ್ನ ನಿಷೇಧಿಸಲಾಗಿದೆ. ಶುಕ್ರವಾರ, ಭಾನುವಾರ ಹಾಗೂ ಮಂಗಳವಾರ ದೇವಸ್ಥಾನಕ್ಕೆ ಬಕ್ತರು ಬರುವ ಹಾಗಿಲ್ಲ. ಅಮವಾಸೆ ಹಾಗೂ ಹುಣ್ಣಿಮೆ ದಿನಗಳಲ್ಲೂ ಕೂಡ ಸಾರ್ವಜನಿಕರ ಪ್ರವೇಶಕ್ಕೆ  ನಿರ್ಬಂಧ ಹೇರಲಾಗಿದೆ.  ರಾಜ್ಯ ಹಾಗೂ ಬೆಂಗಳೂರಿನಲ್ಲಿ ಮತ್ತೆ ಲಾಕ್‌ಡೌನ್‌ ಮಾಡುವ ಸಂಬಂಧ ರಾಜ್ಯ ಸರ್ಕಾರ ಇಂದು(ಗುರುವಾರ) ನಾಳೆ(ಶುಕ್ರವಾರ) ಸಭೆ ನಡೆಸಿ ನಿರ್ಧಾರಕ್ಕೆ ಬರಲಾಗುತ್ತದೆ ಎಂದು ಹೇಳಲಾಗುತ್ತಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!