ಮಾವ ಈಶ್ವರಪ್ಪ ಟಿಕೆಟ್ ಕೊಟ್ಟಿಲ್ಲಾಂತ ದಂಗೆದ್ರೆ, ಅಳಿಯ ರಾಮಲಿಂಗಪ್ಪ ಬ್ಯಾನರ್‌ನಲ್ಲಿ ಫೋಟೋ ಹಾಕಿಲ್ಲಾಂತ ಕೂಗಾಡಿದ್ರು

By Sathish Kumar KH  |  First Published Mar 20, 2024, 6:50 PM IST

ಮಾವ ಕೆ.ಎಸ್.ಈಶ್ವರಪ್ಪ ಅವರು ಬಿಜೆಪಿ ಟಿಕೆಟ್ ಕೊಟ್ಟಿಲ್ಲಾಂತ ಆಕ್ರೋಶಗೊಂಡಿದ್ದರೆ, ಇತ್ತ ಬಳ್ಳಾರಿಯಲ್ಲಿ ಅವರ ಅಳಿಯ ರಾಮಲಿಂಗಪ್ಪ ಬಿಜೆಪಿ ಬ್ಯಾನರ್‌ನಲ್ಲಿ ತಮ್ಮ ಫೋಟೋ ಹಾಕಿಲ್ಲವೆಂದು ಆಕ್ರೋಶಗೊಂಡಿದ್ದಾರೆ.


ಬಳ್ಳಾರಿ (ಮಾ.20): ರಾಜ್ಯದಲ್ಲಿ ಕುರುಬ ಸಮುದಾಯದ ಪ್ರಭಲ ಮುಖಂಡ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ತಮ್ಮ ಪುತ್ರನಿಗೆ ಬಿಜೆಪಿಯಿಂದ ಲೋಕಸಭಾ ಟಿಕೆಟ್‌ ಕೊಟ್ಟಿಲ್ಲವೆಂದು ಪಕ್ಷದ ವಿರುದ್ಧ ದಂಗೆದ್ದು, ಬಂಡಾಯ ಸ್ಪರ್ಧೆಗೆ ಮುಂದಾಗಿದ್ದಾರೆ. ಆದರೆ, ಅವರ ಅಳಿಯ ರಾಮಲಿಂಗಪ್ಪ ಬಳ್ಳಾರಿಯಲ್ಲಿ ನಡೆಯುತ್ತಿದ್ದ ಬಿಜೆಪಿ ಕಾರ್ಯಕ್ರಮದ ಬ್ಯಾನರ್‌ನಲ್ಲಿ ತಮ್ಮ ಫೋಟೋ ಹಾಕಿಲ್ಲವೆಂದು ಕೂಗಾಡಿದ್ದಾರೆ.

ಹೌದು, ಅದೇನೋ ಗಾದೆ ಹೇಳ್ತಾರಲ್ಲ... ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆ ಎಳೆದಿತ್ತಂತೆ. ಅದೇ ರೀತಿ ಶಿವಮೊಗ್ಗದಲ್ಲಿ ಕೆ.ಎಸ್. ಈಶ್ವರಪ್ಪ ಅವರು ರಾಜ್ಯದ ಪ್ರಭಲ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರರ ವಿರುದ್ಧ ಬಂಡಾಯವೆದ್ದಿದ್ದಾರೆ. ತಮ್ಮ ಪುತ್ರ ಕಾಂತೇಶ್ ಅವರಿಗೆ ಹಾವೇರಿಯ ಲೋಕಸಭಾ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿದ್ದ ಯಡಿಯೂರಪ್ಪ ಅವರು ಕೊನೇ ಕ್ಷಣದಲ್ಲಿ ಹಾವೇರಿ ಟಿಕೆಟ್‌ ಅನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಸಿಗುವಂತೆ ಮಾಡಿದ್ದಾರೆ. ಆದರೆ, ಯಡಿಯೂರಪ್ಪ ತಮ್ಮ ಪುತ್ರ ಬಿ.ವೈ. ರಾಘವೇಂದ್ರ ಹಾಗೂ ತಮ್ಮ ಆಪ್ತೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್‌ ಕೊಡಿಸಿದ್ದಾರೆ. ಆದರೆ, ನನ್ನ ಪುತ್ರನಿಗೆ ಒಂದು ಟಿಕೆಟ್ ಕೊಡಿಸಿಲ್ಲವೆಂದು ಆಕ್ರೋಶಗೊಂಡಿದ್ದಾರೆ. ಹೀಗಾಗಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿಯೇ ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಅವರ ವಿರುದ್ಧವೇ ಬಂಡಾಯವಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

Tap to resize

Latest Videos

undefined

ನಿಮ್ಮಪ್ಪ 2009ರಲ್ಲಿ ಸಿಎಂ ಆದ್ರೆ, ನಮ್ಮಪ್ಪ 1990ರಲ್ಲೇ ಸಿಎಂ ಆಗಿದ್ರು; ಸಚಿವ ಮಧು ಬಂಗಾರಪ್ಪ

ಇನ್ನು ಈಶ್ವರಪ್ಪ ಅವರು ಕುರುಬ ಸಮುದಾಯದ ಪ್ರಭಲ ನಾಯಕರೂ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಇರುವ ಅವರ ಅಳಿಯ ಕೂಡ ಕೆಲವು ವರ್ಷಗಳಿಂದ ಬಿಜೆಪಿಯ ಮೂಲಕ ರಾಜಕಾರಣಕ್ಕೆ ಮುಂದಡಿಯಿಟ್ಟಿದ್ದಾರೆ. ಇನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರನ್ನು ಕಣಕ್ಕಿಳಿಸಲು ಟಿಕೆಟ್ ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಾದ್ಯಂತ ಬಿಜೆಪಿ ಬೂತ್‌ ಮಟ್ಟದ ವಿಜಯ ಯಾತ್ರೆ ಸಭೆಗಳನ್ನು ಆಯೋಜನೆ ಮಾಡಲಾಗುತ್ತಿದೆ. 

ಬಳ್ಳಾರಿಯಲ್ಲಿ ಆಯೋಜನೆ ಮಾಡಿದ್ದ ವಿಜಯಯಾತ್ರೆ ಕಾರ್ಯಕ್ರಮದ ವೇದಿಕೆಯಲ್ಲಿ ಭಾಷಣ ಆರಂಭಿಸದ ಕೆ.ಎಸ್. ಈಶ್ವರಪ್ಪ ಅವರ ಅಳಿಯ ರಾಮಲಿಂಗಪ್ಪ ಅವರು, ಕಾರ್ಯಕ್ರಮದ ಬ್ಯಾನರ್ ನಲ್ಲಿ ತಮ್ಮ ಪೋಟೋ ಹಾಕಿಸದಿದ್ದಕ್ಕೆ ಸ್ಥಳೀಯ ನಾಯಕರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಭಾಷಣ ಮಾಡುತ್ತಾ ತಮ್ಮ ಅಳಲು ತೋಡಿಕೊಂಡಿದ್ದಾರೆ. ನನ್ನ ಫೋಟೋವನ್ನು ಹಾಕದೇ ಕಡೆಗಣಿಸುವ ಮೂಲಕ ಬಳ್ಳಾರಿಯಲ್ಲಿ ಕುರುಬ ಸಮಾಜವನ್ನ ಕಡೆಗಣಿಸಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ. ಇದಕ್ಕಾಗಿ ನಮ್ಮ ಸಮಾಜದ ಜನ ಸಿಟ್ಟಾಗಿದ್ದಾರೆ. ನನ್ನ ವಿರುದ್ಧ ಷ್ಯಡ್ಯಂತ್ರ ಮಾಡಿ ಈ ರೀತಿ ಮಾಡಲಾಗ್ತಿದೆ. 

ಕೇರಳದ ಚಿನ್ನದ ವ್ಯಾಪಾರಿ ಮೇಲೆ ಇಡಿ ದಾಳಿ, ಈತನ ಕಾರ್‌ ಮೇಲೆ ಕರ್ನಾಟಕ ಶಾಸಕ ಎನ್‌ಎ ಹ್ಯಾರಿಸ್‌ ಸ್ಟಿಕ್ಕರ್‌!

ವೇದಿಕೆ ಭಾಷಣದಲ್ಲಿ ರಾಮಲಿಂಗಪ್ಪ ಅವರ ಮಾತನ್ನು ಕೇಳಿದ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರ ಮಾತಿಗೆ ಸಿಟ್ಟಾಗಿ, ರಾಮಲಿಂಗಪ್ಪ ಅವರು ತಮ್ಮ ಭಾಷಣವನ್ನು ಅರ್ಧಕ್ಕೆ ಬಿಟ್ಟು ವೇದಿಕೆಯಿಂದ ಕೆಳಗಿಳಿದು ಹೋದರು. ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಸಮ್ಮುಖದಲ್ಲಿ ರಾಮಲಿಂಗಪ್ಪರಿಂದ ಬಹಿರಂಗ ಅಸಮಾಧಾನ ತೋರಿಸಿದ್ದರಿಂದ, ಎಂಎಲ್ ಸಿ ರವಿಕುಮಾರ್ ಅವರು ಸಮಾಧಾನಪಡಿಸುವ ಕಾರ್ಯ ಮಾಡಿದರು.

click me!