
ಬಾಗಲಕೋಟೆ (ಅ.17): ದೇಶದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಆರಿಸಿ ತಂದ್ರೆ ಎಲ್ಲರೂ ಉಳಿತೀರಿ. ಮೋದಿ ಆರಿಸಿ ತರಲಿಲ್ಲಾಂದ್ರ ಯಾರೂ ಉಳಿಯೊಲ್ಲ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದ ಮಹಾಲಿಂಗಾಪುರದ ಮಹಲಿಂಗೇಶ್ವರ ಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ವಿಡಿಯೋ ವೈರಲ್ ಆಗಿತ್ತ. ಈ ಬಗ್ಗೆ ಸ್ವತಃ ಸ್ವಾಮೀಜಿ ಸ್ಪಷ್ಟೀಕರಣ ನೀಡಿದ್ದು, ನಾನು ಯಾವುದನ್ನೂ ಹೇಳಿಲ್ಲ. ಯಾರೋ ಕಿಡಿಗೇಡಿಗಳು ಈ ರೀತಿ ವಿಡಿಯೋ ಹರಿಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತು ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರದ ಮಹಾಲಿಂಗೇಶ್ವರ ಸ್ವಾಮಿ ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿ ಆಯ್ಕೆ ಮಾಡಿದ್ರೆ ಉಳಿತಿರಿ, ಇಲ್ಲಾಂದ್ರೆ ಉಳಿಯಲ್ಲ ಎಂಬ ಸ್ವಾಮೀಜಿ ಭವಿಷ್ಯ ವಾಣಿ ವಿಚಾರವಾಗಿ ವಿಡಿಯೋ ಮಾಡಿ ಸ್ಪಷ್ಟೀಕರಣ ನೀಡಿದ್ದಾರೆ. ನಿನ್ನೆ ಆಡಿರುವ ಮಾತುಗಳು ಯಾವುದೂ ಪಕ್ಷಾತೀತವಾಗಿಲ್ಲ. ಯಾವುದನ್ನೂ ನಾನು ಹೇಳಿಲ್ಲ. ಯಾರೋ ಕಿಡಿಗೇಡಿಗಳು ನನ್ನ ಮಾತುಗಳನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ನಾನು ಪಕ್ಷಾತೀತವಾಗಿ ಮಾತನಾಡಿಲ್ಲ, ನನಗೆ ಈ ಬಗ್ಗೆ ಯಾವುದೂ ಗೊತ್ತಿಲ್ಲ ಎಂದು ವಿಡಿಯೋ ಮೂಲಕ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಪಷ್ಟನೆ ನೀಡಿದರು.
ದೇಶದಲ್ಲಿ ಮೋದಿ ಆಯ್ಕೆ ಮಾಡಿದ್ರೆ ಉಳಿತೀರಿ, ಇಲ್ಲಾಂದ್ರೆ ಯಾರೂ ಉಳಿಯೊಲ್ಲ: ಮಹಾಲಿಂಗೇಶ್ವರ ಸ್ವಾಮೀಜಿ ಭವಿಷ್ಯ!
ಸ್ವಾಮೀಜಿ ವಿಡಿಯೋ ವೈರಲ್: ಬಾಗಲಕೋಟೆ (ಅ.16): ದೇಶದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಿದರೆ ಎಲ್ಲರೂ ಉಳಿಯುತ್ತೀರಿ, ಮೋದಿಯನ್ನ ಆರಿಸಿ ತರಲಿಲ್ಲವೆಂದರೆ ಯಾರೂ ಉಳಿಯೋದಿಲ್ಲ ಎಂದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದ ಮಹಾಲಿಂಗೇಶ್ವರ ದೇವಸ್ಥಾನದ ಮಹಾಲಿಂಗೇಶ್ವರ ಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿದಿದ್ದರು.
ಮಹಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಹಿನ್ನೆಲೆ ನಡೆದ ವಿಶೇಷ ಪೂಜೆಯ ನಂತರ ಜಟ ಹಿಡಿದು ಭವಿಷ್ಯ ನುಡಿದಿರುವ ಮಹಲಿಂಗೇಶ್ವರ ಸ್ವಾಮೀಜಿ ಅವರು, ಜಟ ಹಿಡಿದು ಪ್ರದರ್ಶನ ಮಾಡಿದ ಅವರು "ಇದರ ಮೇಲೆ ಏನಾದ್ರೂ ವ್ಯತ್ಯಾಸ ಮಾಡಿದ್ರಿ ಅಂದ್ರ ಉಳಿತೀರಿ, ಮೋದಿನ ಆರಿಸಿ ತರ್ಲಿಲ್ಲಾಂದ್ರ ನೀವ್ಯಾರೂ ಉಳಿಯಲ್ಲ" ಎಂದು ಸ್ಪೋಟಕ ಭವಿಷ್ಯವನ್ನು ನುಡಿದಿದ್ದಾರೆ. ಇದರಿಂದ ರಾಜಕೀಯ ವಲಯದಲ್ಲಿ ಭಾರಿ ಸಂಚಲನವೇ ಸೃಷ್ಟಿಯಾಗಿದೆ. ಲೋಕಸಭಾ ಚುನಾವಣೆಗೂ ಮುನ್ನ ಈ ವೀಡಿಯೋ ಭಾರಿ ವೈರಲ್ ಆಗುತ್ತಿದೆ.
ಹಳಿ ತಪ್ಪಿದ ಯಶವಂತಪುರ- ಕಾರಟಗಿ ಎಕ್ಸ್‌ಪ್ರೆಸ್ ರೈಲು: ತಪ್ಪಿದ ಭಾರಿ ಅನಾಹುತ
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದ ಮಹಾಲಿಂಗೇಶ್ವರ ಮಠದ ಮಹಾಲಿಂಗೇಶ್ವರ ಸ್ವಾಮೀಜಿ ಜಟ ಹಿಡಿದು ಭವಿಷ್ಯ ನುಡಿದಿರುವ ವಿಡಿಯೋ ವೈರಲ್ ಆಗುತ್ತಿದೆ. ನವರಾತ್ರಿ ಹಿನ್ನೆಲೆ ನಡೆದ ವಿಶೇಷ ಪೂಜೆ ನೆರವೇರಿಸಿ ಜಟ ಹಿಡಿದು ಭವಿಷ್ಯ ಹೇಳಿದ್ದಾರೆ. ಜಟ ಪ್ರತಿವರ್ಷ ಬೆಳೆಯುತ್ತೆ ಅನ್ನೋದು ಇಲ್ಲಿನ ಭಕ್ತರ ನಂಬಿಕೆಯಾಗಿದೆ. ಜಟ ಭವಿಷ್ಯವೂ ನಿಜವಾಗುತ್ತೆ ಅನ್ನೋದು ನಂಬಿಕೆ ಭಕ್ತರಲ್ಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ