ನಾವು ರಾಮಭಕ್ತರೇ ಆದರೆ ರಾಮಮಂದಿರ ಉದ್ಘಾಟನೆಗೆ ಯಾಕೆ ಹೋಗೊಲ್ಲಂದ್ರೆ..; ಮಾಜಿ ಸಚಿವ ಎಚ್‌ ಆಂಜನೇಯ ಹೇಳಿದ್ದೇನು?

By Ravi Janekal  |  First Published Jan 11, 2024, 2:36 PM IST

ನಾವು ಹಿಂದೂಗಳಲ್ಲ ಅಂತಾ ಎಲ್ಲೂ ಹೇಳಿಲ್ಲ, ರಾಮನ ಪೂಜೆಗೆ ನಮ್ಮ ವಿರೋಧವಿಲ್ಲ. ನಾವೆಲ್ಲರೂ ಹಿಂದೂಗಳೇ, ರಾಮನ ಪೂಜೆಯನ್ನೂ ಮಾಡುತ್ತಿಲ್ವೇ? ನಾವೆಲ್ಲ ರಾಮನ ಭಕ್ತರೇ. ಬಿಜೆಪಿ ರಾಮನ ಹೆಸರಲಿ ರಾಜಕೀಯ ಮಾಡ್ತಿರೋದ್ರಿಂದ ನಾವು ಹೋಗಲ್ಲ ಅಂತ ಹೇಳಿದ್ದೇವೆ ಎಂದು ಕಾಂಗ್ರೆಸ್ ಮಾಜಿ ಸಚಿವ ಎಚ್‌ ಆಂಜನೇಯ ತಿಳಿಸಿದರು.


ಚಿತ್ರದುರ್ಗ (ಜ.11): ಎಲ್ಲ ಜಾತಿಯಲ್ಲೂ ರಾಮಭಕ್ತರಿದ್ದಾರೆ. ಬಿಜೆಪಿಯವರು ರಾಮನ ಹೆಸರು ದುರುಪಯೋಗ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್‌ ಆಂಜನೇಯ ಆರೋಪಿಸಿದರು.

ಇಂದು ಚಿತ್ರದುರ್ಗದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ರಾಮಮಂದಿರ ಉದ್ಘಾಟನಾ ಕಾರ್ಯಕ್ರಮ ಆಹ್ವಾನ ಪತ್ರಿಕೆ ಕಾಂಗ್ರೆಸ್ ಪಕ್ಷ ಯಾಕೆ ತಿರಸ್ಕರಿಸಿದೆ ಎಂಬುದು ನಿಮಗೆಲ್ಲರಿಗೂ ಗೊತ್ತಿದೆ. ಇನ್ನೂ ದೇವಸ್ಥಾನವೇ ಪೂರ್ಣ ಆಗಿಲ್ಲ ಉದ್ಘಾಟನೆ ಮಾಡಲು ಹೊರಟಿದ್ದಾರೆ. ಲೋಕಸಭಾ ಚುನಾವಣೆ ಲಾಭ ಪಡೆಯಲು ತರಾತುರಿಯಲ್ಲಿ ದೇಗುಲ ನಿರ್ಮಾಣ ಮಾಡ್ತಿದ್ದಾರೆ. ಎಲೆಕ್ಷನ್ ಆದಮೇಲೆ ಮಾಡಬೇಕಿತ್ತು. ಆದರೆ ಚುನಾವಣೆಯಲ್ಲಿ ರಾಮನ ಹೆಸರು ಹೇಳಿಕೊಂಡು ವೋಟ್ ಪಡೆಯಬಹುದು ಲೆಕ್ಕಾಚಾರದಲ್ಲಿ ಮಾಡ್ತಿದ್ದಾರೆ. ಹೀಗಾಗಿ ಬಿಜೆಪಿಯವರು ಉದ್ಘಾಟನೆ ಮಾಡ್ತಿರೋ ಪೂಜೆಗೆ ನಾವು ಹೋಗಲ್ಲ ಅಂತ ಹೇಳಿದ್ದೇವೆ ಅಷ್ಟೇ ಎಂದರು.

Tap to resize

Latest Videos

undefined

ರಾಮನಿಗಾಗಿ ಅಳಿಲು ಸೇವೆಯೂ ಮಾಡದ ಕಾಂಗ್ರೆಸ್ ಯಾವ ಮುಖ ಇಟ್ಟುಕೊಂಡು ಬರ್ತಾರೆ? : ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು! 

ರಾಮನ ಪೂಜೆಗೆ ನಮ್ಮ ವಿರೋಧವಿಲ್ಲ:

ನಾವು ಹಿಂದೂಗಳಲ್ಲ ಅಂತಾ ಎಲ್ಲೂ ಹೇಳಿಲ್ಲ, ರಾಮನ ಪೂಜೆಗೆ ನಮ್ಮ ವಿರೋಧವಿಲ್ಲ. ನಾವೆಲ್ಲರೂ ಹಿಂದೂಗಳೇ, ರಾಮನ ಪೂಜೆಯನ್ನೂ ಮಾಡುತ್ತಿಲ್ವೇ? ನಾವೆಲ್ಲ ರಾಮನ ಭಕ್ತರೇ. ಬಿಜೆಪಿ ರಾಮನ ಹೆಸರಲಿ ರಾಜಕೀಯ ಮಾಡ್ತಿರೋದ್ರಿಂದ ನಾವು ಹೋಗಲ್ಲ ಅಂತ ಹೇಳಿದ್ದೇವೆ ಎಂದರು. 

ಬಿಜೆಪಿಯಿಂದ ಸುಧಾಕರ್‌ಗೆ ಟಿಕೆಟ್ ಕೊಟ್ಟರೆ, ಕಾಂಗ್ರೆಸ್ ಪಕ್ಷದಿಂದ ನಾನು ಸ್ಪರ್ಧಿಸಲು ರೆಡಿ: ಶಾಸಕ ಪ್ರದೀಪ್ ಈಶ್ವರ್!

ಇನ್ನು ರಾಮಮಂದಿರ ಉದ್ಘಾಟನೆಗೆ ಗೈರು ಒಂದು ದುರ್ದೈವ ಎಂಬ ಬಿಎಸ್ ಯಡಿಯೂರಪ್ಪ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಅದು ಅವರಿಗೆ ದುರ್ದೈವ. ನಮಗ್ಯಾಕೆ ದುರ್ದೈವ. ನಮಗೆ ಬೇಕಾದಾಗ ನಾವು ಹೋಗ್ತೀವಿ. ಅದು ನಮ್ಮ ಧಾರ್ಮಿಕ ಅಭಿವ್ಯಕ್ತಿ ಸ್ವಾತಂತ್ರ್ಯ. ಇಷ್ಟವಿದ್ದರೆ ಹೋಗ್ತೀವಿ ಇಲ್ಲ ಅಂದ್ರೆ ಇಲ್ಲ. ನಾವು ದೇವಸ್ಥಾನಕ್ಕೆ ಹೋಗಲ್ಲ ಎಂದು ಹೇಳಿದ್ದೇವಾ? ಪೂಜೆ ಮಾಡೊಲ್ಲ ಅಂತ ಹೇಳಿದ್ದೇವಾ? ಆದರೆ ರಾಮನನನ್ನ ಹೇಗೆ ಬಿಂಬಿಸ್ತಿದ್ದಾರೆ ಅದು ಗೊತ್ತಿಲ್ಲ ನಿಮ್ಗೆ? ರಾಮನನ್ನ ಕೊಂಡು ಕೊಂಡುಬಿಟ್ಟಿದ್ದೀರಾ ಅನ್ನೋ ರೀತಿ ಮಾಡ್ತಿದ್ದೀರಾ? ಇದೆಲ್ಲ ವೋಟಿಗಾಗಿ ಮಾಡ್ತಿದ್ದಾರೆ. ಎಲೆಕ್ಷನ್ ಬಂತು ಅಂತ ಮಾಡ್ತಿದ್ದೀರಾ? ಕಾರ್ಯಕ್ರಮಕ್ಕೆ ಎಲ್ಲರನ್ನ ಕರೆಯಬೇಕು. ಪಕ್ಷದವರೆ ಸೀಮಿತವಾಗಿ ಮಾಡ್ತಿದ್ದರೆ ನಾವು ಹೊಗಲ್ಲ. ನಾವು ಹೋಗೆ ಹೋಗ್ತೀವಿ, ನಮಗೆ ಇಷ್ಟ ಬಂದಾಗ ನಾವು ಹೋಗ್ತೇವೆ ಎಂದ ತಿರುಗೇಟು ನೀಡಿದರು.

click me!