ರಾಮ ಈ ದೇಶದ ಸಂಸ್ಕೃತಿ. ರಾಮನಿಗಾಗಿ ಅಳಿಲು ಸೇವೆಯೂ ಕಾಂಗ್ರೆಸ್ ನವರಿಂದ ಆಗಿಲ್ಲ. ಹೀಗಿರುವಾಗ ರಾಮ ಮಂದಿರ ಉದ್ಘಾಟನೆಗೆ ಕಾಂಗ್ರೆಸ್ ನವರು ಯಾವ ಮುಖ ಇಟ್ಕೊಂಡು ಬರುತ್ತಾರೆ? ಅದಕ್ಕಾಗಿ ಈ ರೀತಿ ಆಮಂತ್ರಣ ತಿರಸ್ಕರದ ಪ್ರಹಸನ ಮಾಡುತ್ತಿದ್ದಾರೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿ (ಜ.11) : ಕಾಂಗ್ರೆಸ್‌ನವರು ರಾಮಮಂದಿರ ಉದ್ಘಾಟನೆ ಆಮಂತ್ರಣ ತಿರಸ್ಕರಿಸುವ ಮೊದಲೇ ದೇಶದ ಜನ ಮತ್ತು ರಾಮಭಕ್ತರು ಕಾಂಗ್ರೆಸ್ ಪಕ್ಷವನ್ನ ತಿರಸ್ಕರಿಸಿಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಯಾಗಿ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಜೋಶಿ ಅವರು, ಅಯೋಧ್ಯೆಯಲ್ಲಿ ರಾಜಕೀಯ ಮಾಡಲು, ಅಲ್ಲಿ ನಡೆಯುತ್ತಿರುವುದು 140 ಕೋಟಿ ಭಾರತೀಯರ ಅಸ್ಮಿತೆ ಪ್ರಭು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಹೊರತು ವಿದೇಶಿ ವ್ಯಕ್ತಿಯೊಬ್ಬ ಸ್ಥಾಪಿಸಿದ ಕಾಂಗ್ರೆಸ್ ಪಕ್ಷದ ಚುನಾವಣಾ ರಾಲಿ ಅಲ್ಲ ಎಂದು ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ರಾಮಭಕ್ತರು ತಿರಸ್ಕರಿಸಿದ್ದಾರೆ:
ಶ್ರೀರಾಮನ ಮೇಲೆ ನಂಬಿಕೆ, ಭಕ್ತಿ, ಶ್ರದ್ಧೆ ಇದ್ದವರು ಖಂಡಿತವಾಗಿಯೂ ಯಾವುದೇ ರಾಜಕೀಯ ಮಾಡದೆ ಮಂದಿರಕ್ಕೆ ಭೇಟಿ ನೀಡುತ್ತಾರೆ. ಶ್ರೀರಾಮ ಎಲ್ಲ ಭಾರತೀಯರಿಗೆ ಸೇರಿದ್ದಾನೆ. ನಂಬಿಕೆ ಇರುವವರು ಆಹ್ವಾನ ನೀಡದೇ ಇದ್ದರೂ ಹೋಗುತ್ತಾರೆ. ಆದರೆ ಕಾಂಗ್ರೆಸ್ ಸರ್ಕಾರ ಹಿಂದಿನಿಂದಲೂ ರಾಮನ ಅಸ್ತಿತ್ವ ಪ್ರಶ್ನೆ ಮಾಡುತ್ತಾ ಬಂದಿತ್ತು. ಇದೀಗ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂಬ ಹೇಳಿಕೆಯಲ್ಲಿ ಯಾವುದೇ ಅಚ್ಚರಿಯಿಲ್ಲ ಎಂದಿದ್ದಾರೆ.
ಬಿಜೆಪಿಯಿಂದ ಸುಧಾಕರ್‌ಗೆ ಟಿಕೆಟ್ ಕೊಟ್ಟರೆ, ಕಾಂಗ್ರೆಸ್ ಪಕ್ಷದಿಂದ ನಾನು ಸ್ಪರ್ಧಿಸಲು ರೆಡಿ: ಶಾಸಕ ಪ್ರದೀಪ್ ಈಶ್ವರ್!
ರಾಜ್ಯದಲ್ಲಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ನೀವು (ಕಾಂಗ್ರೆಸ್) ನಿಮ್ಮ ಆಡಳಿತ ವೈಫಲ್ಯವನ್ನು ಮರೆಮಾಚಲು ಇಂತಹ ವಿಚಾರ ಮುನ್ನಲೆಗೆ ತರುವ ಪ್ರಯತ್ನ ಮಾಡುತ್ತಿದ್ದೀರಿ. ಇಂಥ ರಾಜಕೀಯವನ್ನು ತಾವು ಮಾಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ. ರಾಜ್ಯ ಮಾತ್ರವಲ್ಲ, ಇಡೀ ದೇಶದ ಜನತೆಗೆ ಅರ್ಥವಾಗಿದೆ. ಕರ್ನಾಟಕದಲ್ಲಿ ನಿಮ್ಮ "ಸುಳ್ಳಿನ ಸರಕಾರ ಎತ್ತ ಸಾಗುತ್ತಿದೆ" ಎಂದು ಪ್ರಶ್ನಿಸಿದ್ದಾರೆ.
ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನದ ಹಿಂದೆ ಪ್ರಹ್ಲಾದ್ ಜೋಶಿ ಕೈವಾಡ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
ರಾಮ ಈ ದೇಶದ ಸಂಸ್ಕೃತಿ. ರಾಮನಿಗಾಗಿ ಅಳಿಲು ಸೇವೆಯೂ ಕಾಂಗ್ರೆಸ್ ನವರಿಂದ ಆಗಿಲ್ಲ. ಹೀಗಿರುವಾಗ ರಾಮ ಮಂದಿರ ಉದ್ಘಾಟನೆಗೆ ಕಾಂಗ್ರೆಸ್ ನವರು ಯಾವ ಮುಖ ಇಟ್ಕೊಂಡು ಬರುತ್ತಾರೆ? ಅದಕ್ಕಾಗಿ ಈ ರೀತಿ ಆಮಂತ್ರಣ ತಿರಸ್ಕರದ ಪ್ರಹಸನ ಮಾಡುತ್ತಿದ್ದಾರೆ. ಆದರೆ ಇವರಿಗಿಂತ ಮೊದಲು ರಾಮ ಭಕ್ತರು ಇವರನ್ನ ತಿರಸ್ಕರಿಸಿ ಆಗಿದೆ. ಧಾರ್ಮಿಕವಾಗಿ ಅಲ್ಲದಿದ್ದರೂ, ರಾಮನನ್ನ ನಮ್ಮ ಸಾಂಸ್ಕೃತಿಕ ದೃಷ್ಟಿಯಿಂದ ನೋಡುವ ಮುಸ್ಲಿಂ, ಕ್ರಿಶ್ಚಿಯನ್ ಅನ್ಯ ಧರ್ಮದವರು ಕಾಂಗ್ರೆಸ್ ಅನ್ನ ತಿರಸ್ಕರಿಸುವ ಕಾಲ ಸನ್ನಿ ಹಿತದಲ್ಲಿದೆ ಎಂದು ಸಚಿವ ಜೋಶಿ ಎಚ್ಚರಿಕೆ ನೀಡಿದ್ದಾರೆ.