ಶ್ರೀರಾಮನ ಪ್ರಾಣ ಪ್ರತಿಷ್ಠೆಯಿಂದ ಪ್ರತಿ ಜೀವ ಸಂಕುಲಕ್ಕೆ ಆನಂದ: ಕಲ್ಲಡ್ಕ ಪ್ರಭಾಕರ ಭಟ್

By Kannadaprabha NewsFirst Published Jan 21, 2024, 6:16 AM IST
Highlights

ರಾಮ ರಾಜ್ಯದ ನಿರ್ಮಾಣದ ಭಾಗವಾಗಿ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠೆಯಾಗುತ್ತಿದೆ. ರಾಮ ಹಾಗೂ ರಾಮ ರಾಜ್ಯದ ಪ್ರತಿಷ್ಠೆಯನ್ನು ಹಳ್ಳಿ ಹಳ್ಳಿಯಲ್ಲಿ ಸಂಭ್ರಮ ಪಡಬೇಕು. ಶ್ರೀ ರಾಮನ ಪ್ರತಿಷ್ಠೆಯಿಂದ ಮನುಷ್ಯ ಮಾತ್ರವಲ್ಲದೆ ಪ್ರತಿ ಜೀವ ಸಂಕುಲಗಳಿಗೂ ಆನಂದ ಉಂಟಾಗಲಿದೆ. ಇದರಿಂದ ಜಗತ್ತಿಗೇ ಒಳಿತಾಗಲಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

ಪುತ್ತೂರು (ಜ.21) : ರಾಮ ರಾಜ್ಯದ ನಿರ್ಮಾಣದ ಭಾಗವಾಗಿ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠೆಯಾಗುತ್ತಿದೆ. ರಾಮ ಹಾಗೂ ರಾಮ ರಾಜ್ಯದ ಪ್ರತಿಷ್ಠೆಯನ್ನು ಹಳ್ಳಿ ಹಳ್ಳಿಯಲ್ಲಿ ಸಂಭ್ರಮ ಪಡಬೇಕು. ಶ್ರೀ ರಾಮನ ಪ್ರತಿಷ್ಠೆಯಿಂದ ಮನುಷ್ಯ ಮಾತ್ರವಲ್ಲದೆ ಪ್ರತಿ ಜೀವ ಸಂಕುಲಗಳಿಗೂ ಆನಂದ ಉಂಟಾಗಲಿದೆ. ಇದರಿಂದ ಜಗತ್ತಿಗೇ ಒಳಿತಾಗಲಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

ಅವರು ಪುತ್ತೂರು ನಗರದ ತೆಂಕಿಲದಲ್ಲಿರುವ ವಿವೇಕಾನಂದ ಶಾಲೆಯಲ್ಲಿ ಶ್ರೀರಾಮ ಕಥಾವೈಭವ ಸಾಂಸ್ಕೃತಿಕ ಸಮಿತಿ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಭಾನುವಾರ ರಾತ್ರಿ ನಡೆದ ವೈಭವದ ಅಯೋಧ್ಯೆಯ ಸಮಗ್ರ ಕಥನ `ಶ್ರೀರಾಮ ಕಥಾವೈಭವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಯೋಧ್ಯೆಗೆ ತೆರಳಿದ ಕರ್ನಾಟಕ ಸೇರಿ ಹಲವು ರಾಜ್ಯಗಳ ವೀರಶೈವ ಮಠಾಧೀಶರು!

ಶ್ರೀರಾಮನೆಂದರೆ ಧರ್ಮ. ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮನ ಗೌರವಕ್ಕಾಗಿ ಲಕ್ಷಾಂತರ ಮಂದಿ ಹಲವು ರೀತಿಯ ತ್ಯಾಗ ಮಾಡಿದ್ದಾರೆ. ಜೈಲುವಾಸ, ಚಿತ್ರಹಿಂಸೆ ಅನುಭವಿಸಿದ್ದಾರೆ. ಆದರೆ 1992 ದಶಂಬರ್ 6 ರಂದು ಒಗ್ಗಟ್ಟಿನ ಮೂಲಕ ನಡೆದ ಹೋರಾಟ ಇತಿಹಾಸದಲ್ಲಿ ಚಿನ್ನದ ಅಕ್ಷರದಲ್ಲಿ ಬರೆದಿಡುವ ದಿನವಾಗಿದೆ ಎಂದು ಹೇಳಿದರು.

ಬೆಂಗಳೂರು ಎಂ.ಆರ್. ಜಿ. ಗ್ರೂಪ್ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, ಶ್ರೀರಾಮ ಮತ್ತು ಶ್ರೀಕೃಷ್ಣನ ಜೀವನ ಸಾರದ ಗ್ರಂಥಗಳು ಬದುಕಿನಲ್ಲಿ ಸದಾ ಉಳಿಯುವಂತದ್ದಾಗಿದೆ. ಶ್ರೀರಾಮ ಶಕ್ತಿಯ, ಆಂಜನೇಯ ಭಕ್ತಿಯ ಹಾಗೂ ಶ್ರೀಕೃಷ್ಣ ಯುಕ್ತಿಯ ಸ್ವರೂಪ ಎಂದರು. ಶ್ರೀರಾಮ ಮಂದಿರದ ಶಿಲಾನ್ಯಾಸ ಸಂದರ್ಭ 1 ಕೋಟಿಯನ್ನು ತಾನು ನೀಡಿದ್ದು, ಅತ್ಯಂತ ಖುಷಿಯಾಗಿದೆ ಎಂದು ಹೇಳಿದರು.

ದೈವ ನರ್ತಕ ಹಾಗೂ ಸಿವಿಲ್ ಇಂಜಿನಿಯರ್ ಡಾ. ರವೀಶ್ ಪಡುಮಲೆ ಮಾತನಾಡಿ, ಶ್ರೀರಾಮನ ಪ್ರತಿಷ್ಠೆಯ ಮೂಲಕ ಜ. 22 ರಿಂದ ನವ ಯುಗ ಆರಂಭವಾಗಲಿದೆ ಎಂದು ಅಭಿಪ್ರಾಯಿಸಿದರು.

ದ.ಕ. ಸಂಸದ ನಳಿನ್ ಕುಮಾರ್ ಕಟೀಲ್, ಅದಾನಿ ಗ್ರೂಪ್ ಕರ್ನಾಟಕದ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕಿಶೋರ್ ಅಳ್ವ, ಬೆಂಗಳೂರಿನ ಉದ್ಯಮಿ ಕಿರಣಚಂದ್ರ ಡಿ., ಬರೋಡಾದ ತುಳು ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡಾ ಶುಭಹಾರೈಸಿದರು.

ರಾಮನಿಗಾಗಿ ಹೋರಾಟ ನೆನಪಿಸಿಕೊಂಡ್ರೆ ಮೈ ಜುಮ್ ಅನ್ನುತ್ತೆ; ಕರಸೇವಕರ ಮನದಾಳದ ಮಾತುಗಳು ಇಲ್ಲಿವೆ

ಶಾಸಕರಾದ ಮಂಗಳೂರು ಉತ್ತರದ ಡಾ. ವೈ. ಭರತ್ ಶೆಟ್ಟಿ, ಬೆಳ್ತಂಗಡಿಯ ಹರೀಶ್ ಪೂಂಜಾ, ಸುಳ್ಯದ ಭಾಗೀರಥಿ ಮುರುಳ್ಯ, ಬಿಜೆಪಿ ದಕ್ಷಿಣ ಮುಂಬೈಯ ಪ್ರಧಾನ ಕಾರ್ಯದರ್ಶಿ ವಿಜಯ ಶೆಟ್ಟಿ ಪಣಕಜಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಮತ್ತಿತರರು ಇದ್ದರು.

ಶಂಖನಾದದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗಣಪತಿ ಸ್ತುತಿ ಹಾಗೂ ರಾಮ ಸ್ತುತಿ ಮಾಡಲಾಯಿತು. ಅತಿಥಿ ಗಣ್ಯರು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದರು.

ಶ್ರೀರಾಮ ಕಥಾ ವೈಭವ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಬೊಟ್ಯಾಡಿ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಾಂಸ್ಕೃತಿಕ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್. ದಾಮೋದರ ಪಾಟಾಳಿ ವಂದಿಸಿದರು.

click me!