
ಬೆಂಗಳೂರು(ಡಿ.22): ಯಶವಂತಪುರ ಮತ್ತು ಅರಸೀಕೆರೆ ನಡುವೆ (165.86 ಕಿ.ಮೀ.) ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಲು ರೈಲ್ವೆ ಮಂಡಳಿಯು ಅನುಮೋದನೆ ನೀಡಿದೆ. ಇದರಿಂದ ಪ್ರಯಾಣಿಕ ಹಾಗೂ ಸರಕು ಸಾಗಣೆ ರೈಲುಗಳ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ.
ಬೆಂಗಳೂರು ಮತ್ತು ಮೈಸೂರು ವಿಭಾಗಗಳು ಅದರಲ್ಲೂ ವಿಶೇಷವಾಗಿ ಯಶವಂತಪುರ-ಅರಸೀಕೆರೆ ವಿಭಾಗದಲ್ಲಿ ಹೆಚ್ಚಿನ ಪ್ರಯಾಣಿಕ ರೈಲುಗಳಿಗೆ ಬೇಡಿಕೆಯಿದೆ. ಅಲ್ಲದೆ ಇಲ್ಲಿಂದ ಆಹಾರ ಧಾನ್ಯ, ರಸಗೊಬ್ಬರ, ಪಿಒಎಲ್, ಸಿಮೆಂಟ್, ಉಕ್ಕು ಮತ್ತು ವಾಹನಗಳು ಸೇರಿದಂತೆ ಸರಕು ಸಾಗಣೆ ಕೂಡ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ರೈಲಿನ ಸಂಚಾರಕ್ಕೆ ಯಾವುದೇ ತಡೆ ಇಲ್ಲದಂತೆ ಸರಾಗವಾಗಿಸಲು ಸ್ವಯಂಚಾಲಿತ ಸಿಗ್ನಲಿಂಗ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಒಂಟಿಯಾಗಿ ರೈಲಲ್ಲಿ ಪ್ರಯಾಣಿಸೋ ಮಹಿಳೆಯರಿಗೆ ಸಿಗುತ್ತೆ ಈ ಸೌಲಭ್ಯ
ಈ ಯೋಜನೆಗೆ ₹218.75 ಕೋಟಿ ತಗುಲುವ ನೀರಿಕ್ಷೆಯಿದ್ದು, ಮೂರು ವರ್ಷಗಳ ಅವಧಿಯಲ್ಲಿ ಯೋಜನೆಯು ಪೂರ್ಣಗೊಳಿಸುವ ಗುರಿಯಿದೆ. ಸ್ವಯಂಚಾಲಿತ ಸಿಗ್ನಲಿಂಗ್‌ನ ಅನುಷ್ಠಾನವು ರೈಲ್ವೆ ಮೂಲಸೌಕರ್ಯವನ್ನು ಆಧುನೀಕರಣಗೊಳಿಸವ ಹೆಜ್ಜೆಯಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ