ಬಿಡಿಎ ಮೂಲೆ ನಿವೇಶನಗಳ ಹರಾಜು: 46 ಕೋಟಿ ಆದಾಯ

By Kannadaprabha NewsFirst Published Aug 8, 2020, 7:41 AM IST
Highlights

75 ನಿವೇಶನಗಳ ಪೈಕಿ 61 ಸೈಟ್‌ ಹರಾಜು| 515 ಬಿಡ್ಡುದಾರರು ಭಾಗಿ| ಆರಂಭಿಕ ಬಿಡ್‌ ದರಕ್ಕಿಂತ ದುಪ್ಪಟ್ಟು ದರವನ್ನು ನಮೂದಿಸಿ ಕೆಲವು ನಿವೇಶನಗಳನ್ನು ಖರೀದಿಸಿದ ಬಿಡ್‌ದಾರರು| ಬಿಡ್‌ದಾರರಿಂದ ಉತ್ತಮ ಪ್ರತಿಕ್ರಿಯೆ| 

ಬೆಂಗಳೂರು(ಆ.08):  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹರಾಜಿಗಿಟ್ಟ 308 ಮೂಲೆ ನಿವೇಶನಗಳ ಪೈಕಿ ಮೊದಲ ಹಂತದಲ್ಲಿ 75 ನಿವೇಶನಗಳ ಇ-ಹರಾಜು ಶುಕ್ರವಾರ ನಡೆದಿದೆ. ಬಿಡ್‌ದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು 46.14 ಕೋಟಿ ಆದಾಯ ಬಂದಿದೆ.

ಮೊದಲ ಹಂತದಲ್ಲಿ ಒಟ್ಟು 75 ನಿವೇಶನಗಳನ್ನು ಹರಾಜಿಗಿಟ್ಟಿದ್ದು, ಅವುಗಳಲ್ಲಿ 67 ನಿವೇಶಗಳು ಮಾರಾಟವಾಗಿವೆ. ಆರಂಭಿಕ ಬಿಡ್‌ ದರಕ್ಕಿಂತ ದುಪ್ಪಟ್ಟು ದರವನ್ನು ನಮೂದಿಸಿ ಕೆಲವು ನಿವೇಶನಗಳನ್ನು ಬಿಡ್‌ದಾರರು ಖರೀದಿಸಿದ್ದಾರೆ. ಬನಶಂಕರಿ 6ನೇ ಹಂತ 11ನೇ ಬ್ಲಾಕ್‌ ನಿವೇಶನ ಸಂಖ್ಯೆ 936 ಮತ್ತು 937ಕ್ಕೆ ಆರಂಭಿಕ ಠೇವಣಿ 58,370 ನಿಗದಿಪಡಿಸಲಾಗಿದ್ದು, ಬಿಡ್‌ ದರವು ದುಪ್ಪಟ್ಟು ಅಂದರೆ 1,34,370 ಮತ್ತು 1,38,870 ಗಳಿಗೆ ಬಿಡ್‌ ಮಾಡಿ ಖರೀದಿಸಲಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: ಜಾಗ ಕೊಟ್ಟವರಿಗೆ ಶೇ.40 ಬಿಡಿಎ ಸೈಟ್‌?

ಮೊದಲ ಹಂತದ 75 ನಿವೇಶನಗಳ ಹರಾಜಿನಲ್ಲಿ 8 ನಿವೇಶನಗಳಿಗೆ ಯಾರು ಬಿಡ್‌ ಮಾಡಲಿಲ್ಲ. ಉಳಿದ ಆರು ನಿವೇಶನಗಳು ಶೇ.5ಕ್ಕಿಂತ ಹೆಚ್ಚು ಬಿಡ್‌ ಆಗಲಿಲ್ಲ. ಹೀಗಾಗಿ ಒಟ್ಟು 14 ನಿವೇಶನಗಳು ಬಿಡ್‌ ಮಾಡಲಾಗಿಲ್ಲ. ಉಳಿದಂತೆ 61 ನಿವೇಶನಗಳು .46.14 ಕೋಟಿಗೆ ಹರಾಜಾಗಿವೆ. ಈ ಹರಾಜು ಪ್ರಕ್ರಿಯೆಯಲ್ಲಿ ಸುಮಾರು 515 ಬಿಡ್ಡುದಾರರು ಪಾಲ್ಗೊಂಡಿದ್ದರು ಎಂದು ಬಿಡಿಎ ಆಯುಕ್ತ ಡಾ.ಮಹಾದೇವ್‌ ತಿಳಿಸಿದ್ದಾರೆ.
 

click me!