ಬಾಣಂತಿ ಆರೋಗ್ಯ ತಪಾಸಣೆಗೆ ತೆರಳಿದ್ದ ಆರೋ​ಗ್ಯಾ​ಧಿ​ಕಾರಿ ಮೇಲೆ ನಾಯಿ ದಾಳಿ: ಮಾಲೀಕ ವಿರುದ್ಧ ಪ್ರಕ​ರ​ಣ

By Ravi Janekal  |  First Published Aug 18, 2023, 9:07 AM IST

ಬಾಣಂತಿ ವಿಚಾರಿಸಲು ಹೋದ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ನಾಯಿ ದಾಳಿ ನಡೆಸಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಪಾರಾಣೆ ಗ್ರಾಮದಲ್ಲಿ ನಡೆದಿದೆ.


ನಾಪೋ​ಕ್ಲು (ಆ.18): ಬಾಣಂತಿ ವಿಚಾರಿಸಲು ಹೋದ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ನಾಯಿ ದಾಳಿ ನಡೆಸಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಪಾರಾಣೆ ಗ್ರಾಮದಲ್ಲಿ ನಡೆದಿದೆ.

ಪಾರಾಣೆ ಕಮ್ಯುನಿಟಿ ಹೆಲ್ತ್ ಆಫೀಸರ್ ಕೆ‌ ಕೆ ಭವ್ಯ ನಾಯಿ ದಾಳಿಗೆ ಒಳಗಾದ ವೈದ್ಯೆ.ಪಾರಾಣೆ ಗ್ರಾಮದ ಮಾಚಯ್ಯ ಎಂಬುವವರ ಮನೆಗೆ ತೆರಳಿದ್ದಾಗ ನಡೆದಿರುವ ದುರ್ಘಟನೆ.ಇತ್ತೀಚೆಗೆ ಡೆಲಿವರಿ ಆಗಿದ್ದ ಮಗು ಹಾಗೂ ತಾಯಿ ಆರೋಗ್ಯ ವಿಚಾರಿಸಲು ತೆರಳಿದ್ದ ಭವ್ಯ.ತಾಯಿ ಮಗುವಿನ ಆರೋಗ್ಯ ವಿಚಾರಿಸಿ ವಾಪಸ್ ಆಗುವಾಗ ನಾಯಿ ದಾಳಿ. ದೇಹದ ಹಲವು ಭಾಗಗಳಿಗೆ ಬಲವಾಗಿ ಕಚ್ಚಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಭವ್ಯ ಸದ್ಯ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

Tap to resize

Latest Videos

undefined

ಶಾಲೆಯಿಂದ ಮನೆಗೆ ಹೋಗ್ತಿದ್ದ ವೇಳೆ ಬೀದಿ ನಾಯಿ ದಾಳಿ; ಬಾಲಕನ ಸ್ಥಿತಿ ಗಂಭೀರ!

ನಾಯಿ ಕಚ್ಚುತ್ತಿದ್ದಂತೆ ಎಚಚ್ಚೆತ್ತುಕೊಂಡ ಪೊಲೀಸ್ ಇಲಾಖೆ. ಈ ಪ್ರಕರಣ ಸಂಬಂಧ ಸಾಕು​ನಾಯಿ ಮಾಲೀ​ಕನ ವಿರುದ್ಧ ನಾಪೋಕ್ಲು ಪೊಲೀ​ಸರು ಪ್ರಕ​ರಣ ದಾಖ​ಲಿ​ಸಿ​ದ್ದಾ​ರೆ.ಸಾರ್ವಜನಿಕರ ಮೇಲೆ ಸಾಕು ದಾಳಿ ಮಾಡಿದರೆ ಮಾಲೀಕನಿಗೆ ನಾಯಿ ಕಚ್ಚಿದ ಸ್ವರೂಪದಲ್ಲಿ6 ತಿಂಗಳಿನಿಂದ 10ವರ್ಷಗಳವರೆಗೂ ಶಿಕ್ಷೆ ವಿಧಿಸಬಹುದಾಗಿದೆ.

ಬಾಲಕಿಯ ಮೇಲೆ ಬೀದಿನಾಯಿ ದಾಳಿ

ನವಲಗುಂದ: ಪಟ್ಟಣದ ದೇಸಾಯಿ ಪೇಟೆಯಲ್ಲಿ 5 ವರ್ಷದ ಬಾಲಕಿಯ ಮೇಲೆ ಬೀದಿನಾಯಿ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಗುರುವಾರ ಜರುಗಿದೆ.

ಮನೆ ಮುಂಭಾಗದಲ್ಲಿ ಬಾಲಕಿ ಭಾಗ್ಯಶ್ರೀ ಕೊಟ್ಟಗಿ ಆಟ ಆಡುತ್ತಿರುವಾಗ ಏಕಾಏಕಿ ನಾಯಿ ದಾಳಿ ಮಾಡಿ ಬಾಲಕಿಯ ಬಲಕಣ್ಣಿನ ಮೇಲ್ಭಾಗದಲ್ಲಿ ಗಂಭೀರವಾದ ಗಾಯ ಮಾಡಿದೆ.ಇನ್ನು ಸ್ಥಳಿಯರು ನಾಯಿಯನ್ನು ಹೊಡೆದು ಓಡಿಸಿದ್ದಾರೆ.ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ ಕಳಿಸಿದ್ದಾರೆ. ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪುರಸಭೆ ಸಿಬ್ಬಂದಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆದಷ್ಟುಬೇಗ ಪುರಸಭೆಯವರು ಎಚ್ಚೆತ್ತುಕೊಂಡು ನಾಯಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಬೀದಿ ನಾಯಿಗಳ ದಾಳಿಗೆ 11 ವರ್ಷದ ವಿಶೇಷಚೇತನ ಬಾಲಕ ಬಲಿ: ಕೇರಳ ಸರ್ಕಾರದ ವಿರುದ್ದ ಟೀಕೆ

click me!