‘ಒಂದು ರು.ತನ್ನಿ, ಒಂದು ಪ್ಯಾಂಟ್, ಶರ್ಟ್ ಕೊಂಡೊಯ್ಯಿರಿ’ ಎಂಬ ಬಟ್ಟೆ ಅಂಗಡಿಯವನ ಬಕ್ರೀದ್ ಕೊಡುಗೆಯನ್ನು ತಮ್ಮದಾಗಿಸಿಕೊಳ್ಳಲು ಜನ ನಸುಕಿನ ಜಾವ 4 ಗಂಟೆಯಿಂದಲೇ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಂತ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿಯಲ್ಲಿ ಭಾನುವಾರ ನಡೆದಿದೆ.
ಉಪ್ಪಿನಂಗಡಿ (ಜೂ.17): ‘ಒಂದು ರು.ತನ್ನಿ, ಒಂದು ಪ್ಯಾಂಟ್, ಶರ್ಟ್ ಕೊಂಡೊಯ್ಯಿರಿ’ ಎಂಬ ಬಟ್ಟೆ ಅಂಗಡಿಯವನ ಬಕ್ರೀದ್ ಕೊಡುಗೆಯನ್ನು ತಮ್ಮದಾಗಿಸಿಕೊಳ್ಳಲು ಜನ ನಸುಕಿನ ಜಾವ 4 ಗಂಟೆಯಿಂದಲೇ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಂತ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿಯಲ್ಲಿ ಭಾನುವಾರ ನಡೆದಿದೆ. ಇಲ್ಲಿನ ಬಸ್ ನಿಲ್ದಾಣದ ಪಕ್ಕದ ಪಂಚಾಯಿತಿ ಸ್ವಾಮ್ಯದ ವಾಣಿಜ್ಯ ಮಳಿಗೆಯಲ್ಲಿರುವ ಒಂದು ಜವಳಿ ಅಂಗಡಿಯಲ್ಲಿ ಗ್ರಾಹಕರನ್ನು ಸೆಳೆಯುವ ಸಲುವಾಗಿ ಈ ಕೊಡುಗೆ ಘೋಷಿಸಲಾಗಿತ್ತು. ಈ ಕೊಡುಗೆ ಜೂನ್ 16ರಂದು ಒಂದು ರು.ನೋಟಿನೊಂದಿಗೆ ಆಗಮಿಸುವ ಮೊದಲ 20 ಗ್ರಾಹಕರಿಗೆ ಮಾತ್ರ ಎಂಬ ಷರತ್ತು ವಿಧಿಸಲಾಗಿತ್ತು.
ಮೊದಲ ಗ್ರಾಹಕರಾಗುವ ಆಸೆಯಿಂದ ನಸುಕಿನ ಜಾವ 4 ಗಂಟೆಗೆ ಎದ್ದು ಬಂದು ಅಂಗಡಿ ಮುಂದೆ ಜನ ನಿಲ್ಲಲಾರಂಭಿಸಿದ್ದಾರೆ. ಮುಂಜಾನೆ 7 ಗಂಟೆಗೆ 20ಕ್ಕೂ ಅಧಿಕ ಮಂದಿ ಸರತಿ ಸಾಲಿನಲ್ಲಿ ನಿಂತಿದ್ದು, ಹಲವು ಮಂದಿ ಸರತಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಗಳ ಸಂಖ್ಯೆಯನ್ನು ಲೆಕ್ಕ ಹಾಕಿ 20 ದಾಟಿರುವುದನ್ನು ದೃಢಪಡಿಸಿಕೊಂಡು ನಿರ್ಗಮಿಸಿದರು. ಇನ್ನು ಕೆಲವರು ತಮಗೂ ದೊರೆಯಬಹುದೆಂದು ಆಸೆಯಿಂದ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡು ಬಂತು. ಮುಂಜಾನೆ 9 ಗಂಟೆಯ ಸುಮಾರಿಗೆ ಆಗಮಿಸಿದ ಅಂಗಡಿ ಮಾಲಿಕ, ನುಡಿದಂತೆ ಸರತಿ ಸಾಲಿನಲ್ಲಿ ಮೊದಲಾಗಿ ಇದ್ದ 20 ಮಂದಿಗೆ 1 ರು. ಪಡೆದು ಪ್ಯಾಂಟ್, ಶರ್ಟ್ ವಿತರಿಸಿದರು. ಉಳಿದ ಮಂದಿಗೆ ಗ್ರಾಹಕರಾಗಿ ಪ್ಯಾಂಟ್, ಶರ್ಟ್ ಖರೀದಿಸಲು ಅವಕಾಶ ಕಲ್ಪಿಸಿದರು.
ಒಂದು ವರ್ಷದಲ್ಲಿ ಎಲ್ಲಾ ರೀತಿ ಬೆಲೆ ಏರಿಕೆ ಭಾಗ್ಯ: ವಿಜಯೇಂದ್ರ, ಎಚ್‌ಡಿಕೆ ಆಕ್ರೋಶ
ತುಳು ಸಿನಿಮಾ ಕರಾವಳಿಯಾದ್ಯಂತ ತೆರೆಗೆ: ಸುಮುಖ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾದ ‘ತುಡರ್’ ತುಳು ಸಿನಿಮಾ ಶುಕ್ರವಾರ ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಂಡಿದೆ. ನಗರದ ಭಾರತ್ ಸಿನೆಮಾಸ್‌ನಲ್ಲಿ ನಡೆದ ಸಮಾರಂಭದಲ್ಲಿ ಅತಿಥಿಗಳು ದೀಪ ಬೆಳಗಿಸುವ ಮೂಲಕ ಸಿನಿಮಾ ಪ್ರದರ್ಶನಕ್ಕೆ ಚಾಲನೆ ನೀಡಿದರು. ಕರಾವಳಿ ಗ್ರೂಪ್ ಆಫ್ ಎಜುಕೇಷನ್ ಸಂಸ್ಥೆಯ ಚೇರ್‌ಮೆನ್ ಗಣೇಶ್ ರಾವ್ ಮಾತನಾಡಿ, ಬಿಡುಗಡೆಯಾಗಿರುವ ಈ ತುಳು ಸಿನಿಮಾ ತುಳು ತುಡರ್ ಚಿತ್ರರಂಗದಲ್ಲಿ ಹೊಸ ಬೆಳಕಾಗಿ ಮೂಡಿಬರಲಿ. ಸಮಾಜಕ್ಕೆ ಮನೋರಂಜನೆಯ ಜೊತೆಗೆ ಒಳ್ಳೆಯ ಸಂದೇಶ ನೀಡುವ ಸಿನಿಮಾಗಳು ಬರಲಿ. ಸಂಸ್ಕೃತಿಗೆ ಪೂರಕವಾದ ಜಾತಿ ಧರ್ಮ ದ್ವೇಷವನ್ನು ಪಸರಿಸದೆ ಜನರನ್ನು ಒಂದುಮಾಡುವ ಸಿನಿಮಾಗಳು ಬರಲಿ ಎಂದು ಶುಭ ಹಾರೈಸಿದರು.
ಜಮ್ಮುನಲ್ಲಿ ಮುಲಾಜಿಲ್ಲದೆ ಉಗ್ರರ ಸದೆಬಡೆಯಿರಿ: ಅಮಿತ್ ಶಾ ಆರ್ಡರ್
ಚಿತ್ರನಟ ಅರವಿಂದ್ ಬೋಳಾರ್ ಮಾತನಾಡಿ, ತುಳು ಸಿನಿಮಾ ಬಿಡುಗಡೆ ಎಂದರೆ ಭಯವಾಗುತ್ತದೆ. ಸಿನಿಮಾ ಎಷ್ಟು ದಿನ ನಡೆಯುತ್ತದೆ ಎಂದು ಹೇಳಲು ಆಗುವುದಿಲ್ಲ. ಆದರೆ ತುಡರ್ ಸಿನಿಮಾ ವೀಕ್ಷಿಸಿದವರು ಚಿತ್ರತಂಡವನ್ನು ಮೆಚ್ಚಿ ಬೆನ್ನುತಟ್ಟಿದ್ದಾರೆ. ಹೀಗಾಗಿ ನಮಗೆ ಧೈರ್ಯ ಬಂದಿದೆ ಎಂದರು. ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ, ಸಿನಿಮಾ ಕುರಿತು ಎಲ್ಲೆಡೆ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಸಿನಿಮಾ ಗೆಲ್ಲಲು ತುಳುವರ ಆಶೀರ್ವಾದ ಅಗತ್ಯ ಎಂದರು. ದಾಯ್ಜಿ ವಲ್ಡ್ ಮುಖ್ಯಸ್ಥ ವಾಲ್ಟರ್ ನಂದಳಿಕೆ ಮಾತಾಡಿ, ಸಿನಿಮಾ ನೋಡಿದವರು ಬಹಳ ಸಮಯದ ಬಳಿಕ ಒಳ್ಳೆಯ ಸಿನಿಮಾ ನೋಡಿದ್ದಾಗಿ ಹೇಳುತ್ತಿದ್ದಾರೆ ಎಂದರು.