Five State Election Result 2022: BJP ಗೆದ್ದರೆ ಸಂಪುಟಕ್ಕೆ ಭಾರೀ ಸರ್ಜರಿ

Kannadaprabha News   | Asianet News
Published : Mar 10, 2022, 06:25 AM ISTUpdated : Mar 10, 2022, 06:39 AM IST
Five State Election Result 2022: BJP ಗೆದ್ದರೆ ಸಂಪುಟಕ್ಕೆ ಭಾರೀ ಸರ್ಜರಿ

ಸಾರಾಂಶ

- ಬಿಜೆಪಿ ಪಂಚರಾಜ್ಯ ಗೆದ್ದರೆ ಸಂಪುಟಕ್ಕೆ ಭಾರಿ ಸರ್ಜರಿ? - ರಾಜ್ಯ ಬಿಜೆಪಿಯಲ್ಲೂ ಮಹತ್ತರ ಬದಲಾವಣೆಗಳಾಗುವ ಸಂಭವ - ಯುಗಾದಿ ಬಳಿಕ ವರಿಷ್ಠರಿಂದ ಕರ್ನಾಟಕದ ಬಗ್ಗೆ ಗಮನ ಸಾಧ್ಯತೆ

ಬೆಂಗಳೂರು (ಮಾ.10): ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ (Five State Assembly elections Result) ಫಲಿತಾಂಶ ಗುರುವಾರ ಹೊರಬೀಳಲಿದ್ದು, ಆ ಫಲಿತಾಂಶ ಆಧರಿಸಿ ರಾಜ್ಯ ಬಿಜೆಪಿಯ (State BJP) ಸಂಘಟನೆ ಹಾಗೂ ಸರ್ಕಾರದ ಸಚಿವ ಸಂಪುಟದಲ್ಲಿ (State Cabinet) ಕೆಲವು ಬದಲಾವಣೆ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಹಾಗಂತ ತಕ್ಷಣದಲ್ಲೇ ಯಾವುದೇ ಪ್ರಮುಖ ಬದಲಾವಣೆಗಳು ಆಗುವುದಿಲ್ಲ. ಪ್ರಸಕ್ತ ಬಜೆಟ್‌ ಅಧಿವೇಶನ (Budget Session) ನಡೆಯುತ್ತಿರುವ ಹಿನ್ನೆಲೆಯಲ್ಲಿ ಬರುವ ಏಪ್ರಿಲ್‌ ಮೊದಲ ವಾರದ ಯುಗಾದಿ ಹಬ್ಬದ ಬಳಿಕ ಬಿಜೆಪಿ ವರಿಷ್ಠರು ಕರ್ನಾಟಕ ರಾಜಕಾರಣದ (Karnataka Politics) ಕಡೆಗೆ ಗಮನಹರಿಸುವುದು ನಿಶ್ಚಿತವಾಗಿದೆ. ಪಕ್ಷ ಮತ್ತು ಸರ್ಕಾರ ಎರಡಕ್ಕೂ ಸರ್ಜರಿ ಮಾಡುವ ಬಗ್ಗೆ ವರಿಷ್ಠರು ಒಲವು ಹೊಂದಿದ್ದಾರೆ. ಆ ಸರ್ಜರಿಯ ರೂಪರೇಷೆ ಫಲಿತಾಂಶದ ಬಳಿಕ ಸ್ಪಷ್ಟರೂಪ ಪಡೆದುಕೊಳ್ಳಲಿದೆ.

ಗುರುವಾರದ ಫಲಿತಾಂಶ ಬಿಜೆಪಿ ವರಿಷ್ಠರ ನಿರೀಕ್ಷೆಗೂ ಮೀರಿ ಬಂದಲ್ಲಿ ಕರ್ನಾಟಕದಲ್ಲಿ ‘ರಿಸ್ಕ್‌’ ಎನ್ನುವಂಥ ಮಹತ್ತರ ಬದಲಾವಣೆಗಳನ್ನು ಕೈಗೊಳ್ಳಲು ಮುಂದಾಗುವ ಸಂಭವ ಹೆಚ್ಚಾಗಿದೆ. ಒಂದು ವೇಳೆ ಸಾಧಾರಣ ಫಲಿತಾಂಶ ಹೊರಬಿದ್ದಲ್ಲಿ ಅಳೆದೂ ತೂಗಿ ಬದಲಾವಣೆಗಳನ್ನು ಕೈಗೊಳ್ಳಬಹುದು ಎನ್ನಲಾಗಿದೆ.

ಕರ್ನಾಟಕ ವಿಧಾನಸಭೆಯ (Karnataka Assembly election) ಮುಂದಿನ ಸಾರ್ವತ್ರಿಕ ಚುನಾವಣೆ ಗಮನದಲ್ಲಿ ಇರಿಸಿಕೊಂಡು ಹಲವು ಪ್ರಮುಖ ಬದಲಾವಣೆ ಮಾಡುವುದಕ್ಕೆ ವರಿಷ್ಠರು ಈ ಹಿಂದೆಯೇ ಚಿಂತನೆ ನಡೆಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Union Minister Amit Shah ) ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಅದೇ ವೇಳೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಎದುರಾಯಿತು. ಹೀಗಾಗಿ, ಈ ಫಲಿತಾಂಶವನ್ನು ನೋಡಿಕೊಂಡು ಯಾವ ಸ್ವರೂಪದಲ್ಲಿ ಬದಲಾವಣೆ ಮಾಡಬೇಕು ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಬಹುದು ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ರಾಜ್ಯದ ಆಡಳಿತಾರೂಢ ಬಿಜೆಪಿಯಲ್ಲಿ ಬದಲಾವಣೆ ಇದ್ದೇ ಇದೆ. ಆದರೆ, ಅದು ಯಾವ ರೀತಿ ಇರುತ್ತದೆ ಎಂಬುದರ ಸ್ಪಷ್ಟರೂಪರೇಷೆ ಇನ್ನು ಮುಂದೆ ಸಿದ್ಧಗೊಳ್ಳಬೇಕಿದೆ. ಫಲಿತಾಂಶ ಹೊರಬೀಳಲಿರುವ ರಾಜ್ಯಗಳ ಸರ್ಕಾರ ರಚನೆ ಪ್ರಕ್ರಿಯೆ ಮುಗಿದ ಬಳಿಕ ಕರ್ನಾಟಕಕ್ಕೆ ಆದ್ಯತೆ ನೀಡಲಿದ್ದಾರೆ. ಪಕ್ಷದ ವರಿಷ್ಠರು ರಾಜ್ಯಕ್ಕೆ ಆಗಮಿಸಿ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಮುಂದಿನ ವಿಧಾನಸಭಾ ಚುನಾವಣೆಗೆ ಪೂರಕವಾಗಿ ತಂಡವನ್ನು ಕಟ್ಟಲಿದ್ದಾರೆ ಎಂದು ತಮ್ಮ ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಕ್ಷದ ಹಿರಿಯ ನಾಯಕರೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

Goa Election 2022: ಪಕ್ಷಾಂತರ ತಡೆದು, ಸರ್ಕಾರ ರಚನೆಗೆ ಡಿಕೆಶಿ ಗೋವಾಗೆ
ಪಕ್ಷದ ಸಂಘಟನೆಯಲ್ಲಿ ಒಂದಿಷ್ಟುಬದಲಾವಣೆ ಕೈಗೊಳ್ಳಬೇಕಾಗಿದೆ. ಮುಂದಿನ ಚುನಾವಣೆ ಗುರಿಯಾಗಿಸಿಕೊಂಡು ಪಕ್ಷದ ಸಂಘಟನೆ ಮಾಡುವವರಿಗೆ ಆದ್ಯತೆ ನೀಡುವ ಬಗ್ಗೆ ಚರ್ಚೆ ನಡೆದಿದೆ. ಅದೇ ರೀತಿ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸಂಪುಟದಲ್ಲಿ ಕೆಲವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಅವಕಾಶ ನೀಡುವ ಬಗ್ಗೆಯೂ ಪರಿಶೀಲಿಸಲಾಗುವುದು. ಆ ಐದು ರಾಜ್ಯಗಳಲ್ಲಿ ನಿರೀಕ್ಷಿತ ಮಟ್ಟದ ಫಲಿತಾಂಶ ಸಿಗದೇ ಇದ್ದಲ್ಲಿ ಕರ್ನಾಟಕದಲ್ಲೂ ಹೆಚ್ಚು ಬದಲಾವಣೆ ಮಾಡುವ ಗೋಜಿಗೆ ಹೋಗಲಿಕ್ಕಿಲ್ಲ. ಸಂಪುಟ ಪುನಾರಚನೆ ಬದಲು ವಿಸ್ತರಣೆಯನ್ನಷ್ಟೇ ಕೈಗೊಳ್ಳಬಹುದು ಎಂದು ತಿಳಿದು ಬಂದಿದೆ.

Goa Election 2022 Result ಗೋವಾದಲ್ಲಿ ರೆಸಾರ್ಟ್‌ ರಾಜಕೀಯ ಶುರು!
ಏನೇನಾಗಬಹುದು?

- ನಿರೀಕ್ಷೆಗೂ ಮೀರಿದ ಫಲಿತಾಂಶ ಬಂದರೆ ವರಿಷ್ಠರು ರಾಜ್ಯಕ್ಕೆ ನಿರೀಕ್ಷೆ

- ಬೊಮ್ಮಾಯಿ ಸಂಪುಟದಲ್ಲಿ ಹೊಸ ಮುಖಗಳಿಗೆ ಅವಕಾಶ ಸಾಧ್ಯತೆ

- ಸಂಘಟನೆ ಮಾಡುವವರಿಗೆ ರಾಜ್ಯ ಬಿಜೆಪಿಯಲ್ಲಿ ಆದ್ಯತೆ ಸಂಭವ

- ರಾಜ್ಯ ನಾಯಕರ ಅಭಿಪ್ರಾಯ ಆಧರಿಸಿ ತಂಡ ಕಟ್ಟುವ ಬಗ್ಗೆ ಚರ್ಚೆ

- ನಿರೀಕ್ಷಿತ ಮಟ್ಟದ ಫಲಿತಾಂಶ ಬಾರದಿದ್ದರೆ ಹೆಚ್ಚು ಬದಲಾವಣೆ ಇಲ್ಲ

- ಸಂಪುಟ ಪುನಾರಚನೆ ಬದಲು ವಿಸ್ತರಣೆಯಷ್ಟೇ ಮಾಡುವ ನಿರೀಕ್ಷೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!
ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!