'ನಾನು ಯಾವತ್ತೋ ಮಂತ್ರಿ ಆಗಬೇಕಿತ್ತ. ಆದರೆ ಆಗಲಿಲ್ಲ. ಯಾಕಂದ್ರೆ ನಾನು ಬಣಜಿಗ. ಅತ್ತ ಶರಣಪ್ರಕಾಶ್ ಪಾಟೀಲಗೆ ಖರ್ಗೆ ಸಪೋರ್ಟ್ ಮಾಡ್ತಾರೆ, ಇತ್ತ ಈಶ್ವರ ಖಂಡ್ರೆ ಅವರಿಗೆ ವೀರಶೈವ ಮಹಾಸಭಾದವರು ಸಪೋರ್ಟ್ ಮಾಡ್ತಾರೆ. ನಮಗೆ ಯಾರು ಸಫೋರ್ಟ್ ಮಾಡ್ತಾರೆ?' ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಬೇಸರ ವ್ಯಕ್ತಪಡಿಸಿದ ಘಟನೆ ನಡೆಯಿತು.
ವಿಜಯಪುರ (ಡಿ.30): 'ನಾನು ಯಾವತ್ತೋ ಮಂತ್ರಿ ಆಗಬೇಕಿತ್ತ. ಆದರೆ ಆಗಲಿಲ್ಲ. ಯಾಕಂದ್ರೆ ನಾನು ಬಣಜಿಗ. ಅತ್ತ ಶರಣಪ್ರಕಾಶ್ ಪಾಟೀಲಗೆ ಖರ್ಗೆ ಸಪೋರ್ಟ್ ಮಾಡ್ತಾರೆ, ಇತ್ತ ಈಶ್ವರ ಖಂಡ್ರೆ ಅವರಿಗೆ ವೀರಶೈವ ಮಹಾಸಭಾದವರು ಸಪೋರ್ಟ್ ಮಾಡ್ತಾರೆ. ನಮಗೆ ಯಾರು ಸಫೋರ್ಟ್ ಮಾಡ್ತಾರೆ?' ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಬೇಸರ ವ್ಯಕ್ತಪಡಿಸಿದ ಘಟನೆ ನಡೆಯಿತು.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಚಿಕ್ಕ ಗಲಗಲಿಯಲ್ಲಿ ನಡೆಯುತ್ತಿರುವ ಬಣಜಿಗ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊದಲು ಲಿಂಗಾಯತ ಅಂತಾ ಮಾತ್ರ ಇತ್ತು, ಆಗಲೇ ಐದಾರು ಜನ ಮುಖ್ಯಮಂತ್ರಿಗಳಾದ್ರು. ಅವರೆಲ್ಲಾ ಬಣಜಿಗ ಅಂತಲ್ಲ, ಲಿಂಗಾಯತರು ಅಂತ ಹೇಳಿಯೇ ಸಿಎಂ ಆದ್ರು. ಆದರೀಗ ಬರೀ ಬಣಜಿಗ ಅಂತಾರೆ. ಬಣಜಿಗರು ಸಿಎಂ ಆಗಿದ್ರೆ ಅದು ಅವರ ಕೆಪ್ಯಾಸಿಟಿ ಮೇಲೆ ಆಗಿದ್ದಾರೆ. ನಾನು ಒಂದು ಸಲ ಮಂತ್ರಿ ಆಗಬೇಕು ಅಂತಾ ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳಿದ್ದೇನೆ. ಅವರು ಎರಡು ವರ್ಷ ಆದ್ಮೇಲೆ ಮಾಡ್ತೀನಿ ಅಂದಿದ್ದಾರೆ. ಮಂತ್ರಿ ಆಗ್ತಿನಿ ಅನ್ನೋ ಭರವಸೆ ಇದೆ ಎಂದರು.
undefined
ಹೆಸರಿಗಷ್ಟೇ ರಾಜಹಂಸ ಒಳಗಡೆ ಕುಳಿತರೆ ಡಗಡಗ ಅಂತಾ ಪರಮಹಿಂಸೆ ಕೊಡುತ್ತೆ ಬಸ್!
ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಲು ಶಕ್ತಿ ಯೋಜನೆ ಜಾರಿಗೆ ತಂದಿದೆ. ಆದರೆ ಶಕ್ತಿ ಯೋಜನೆ ಜಾರಿಯಾದ ಬಳಿಕ ಹೊಸ ಸಮಸ್ಯೆ ಸೃಷ್ಟಿಯಾಗಿದೆ. ಮಹಿಳೆಯರೆಲ್ಲ ಮನೆಯಲ್ಲಿ ಹೇಳದೆ ಕೇಳದೇ ಹೋಗ್ತಿದ್ದಾರೆ. ಇದರಿಂದ ಗಂಡಸರಿಗೆ ತೊಂದರೆಯಾಗ್ತಿದೆ. ಹಾಗಾಗಿ ನಿಮಗೆಲ್ಲ ಕೈ ಮುಗಿದು ಹೇಳ್ತೀನಿ ಎಲ್ಲಿಗೆ ಹೋದ್ರು ಹೇಳ್ಬಿಟ್ಟು ಹೋಗ್ರಮ್ಮ ತಾಯಿ ಎಂದ ಪಟ್ಟಣಶೆಟ್ಟಿ. ಗೃಹ ಲಕ್ಷ್ಮೀ ಯೋಜನೆಯಿಂದ ಅತ್ತೆ-ಸೊಸೆ ಜಗಳಾಡ್ತಿದಾರೆ ಎಂದು ಗಂಡಸರು ಕಂಪ್ಲೆಂಟ್ ಮಾಡ್ತಿದಾರೆ ಎಂದಾಗ ಇವರ ಮಾತು ಕೇಳಿ ಸಮಾವೇಶ ಕ್ಷಣ ನಗೆಗಡಲಲ್ಲಿ ತೇಲಿತು.
ಮುಂಜಾನೆ ಕೊರೆಯುವ ಚಳಿಗೆ ಹೆಚ್ಚುತ್ತಿರುವ ಅಪಘಾತ; ರಾತ್ರಿ ಪಾಳಿ ಚಾಲಕರಿಗೆ ಥರ್ಮೋ ಫ್ಲಾಸ್ಕ್ ನೀಡಲು KSRTC ನಿರ್ಧಾರ