ಬೆಳಗಾವಿ ರೈತರ ವಿರುದ್ಧ ಆಕ್ಸಿಸ್ ಬ್ಯಾಂಕ್ ಅರೆಸ್ಟ್ ವಾರೆಂಟ್ ಕ್ಯಾನ್ಸಲ್

By Web DeskFirst Published Nov 5, 2018, 1:22 PM IST
Highlights

ಬೆಳಗಾವಿಯ 180 ಮಂದಿ ರೈತರಿಗೆ ಕೋಲ್ಕತಾ ನ್ಯಾಯಾಲಯದಿಂದ ಚೆಕ್ ಬೌನ್ಸ್ ಪ್ರಕರಣ ಹಿನ್ನೆಲೆಯಲ್ಲಿ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದ್ದು ಇದೀಗ ಇವರಿಗೆ ರಿಲೀಫ್ ದೊರಕಿದೆ. ಎಲ್ಲಾ  ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು ಎಂದು ಆಕ್ಸಿ್ ಬ್ಯಾಂಕ್ ಮ್ಯಾನೆಜರ್ ಹೇಳಿದ್ದಾರೆ.

ಬೆಳಗಾವಿ : ಚೆಕ್ ಬೌನ್ಸ್ ಪ್ರಕರಣದಲ್ಲಿ ರೈತರಿಗೆ ಬಂಧನದ ವಾರೆಂಟ್ ಜಾರಿ ಮಾಡಿಸಿ, ಬಲವಂತದ ಸಾಲ ವಸೂಲಾತಿಗೆ ಮುಂದಾಗಿದ್ದ ಎಕ್ಸಿಸ್ ಬ್ಯಾಂಕ್ ವಿರುದ್ಧ  ರಾಜ್ಯ ವ್ಯಾಪ್ತಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಬೆಳಗಾವಿ ಬ್ಯಾಂಕ್ ಮ್ಯಾನೇಜರ್ ರಾಜ್ ಕುಮಾರ್ ರೈತರ ಮೇಲಿನ ಕೇಸುಗಳನ್ನು ಹಿಂಪಡೆಯಲಾಗುವುದು ಎಂದು ಹೇಳಿದ್ದಾರೆ. 

ಮೇಲಾಧಿಕಾರಿಗಳ ಸೂಚನೆ ಮೇರೆಗೆ ಎಲ್ಲಾ ಕೇಸುಗಳನ್ನು ವಾಪಸ್ ಪಡೆಯಲಾಗುವುದು. ದೀಪಾವಳಿ ಹಬ್ಬದ ಬಳಿಕ ಕೋರ್ಟಿನಲ್ಲಿರುವ ಕೇಸುಗಳನ್ನು ಹಿಂಪಡೆಯಲಾಗುವುದು ಎಂದು ಬ್ಯಾಂಕ್ ಮ್ಯಾನೇಜರ್ ಸುವರ್ಣನ್ಯೂಸ್. ಕಾಂ ಗೆ ತಿಳಿಸಿದ್ದಾರೆ. 

ಚೆಕ್‌ಬೌನ್ಸ್‌ ಪ್ರಕರಣಗಳಲ್ಲಿ ಬೆಳಗಾವಿಯ 180ಕ್ಕೂ ಹೆಚ್ಚು ರೈತರಿಗೆ ಬಂಧನ ವಾರಂಟ್‌ ಜಾರಿಯಾಗಿತ್ತು. ಇದರಿಂದಾಗಿ ಕಂಗೆಟ್ಟ ರೈತರು ತಲೆಮರೆಸಿಕೊಂಡು ಓಡಾಡುವ ಪರಿಸ್ಥಿತಿಗೆ ಸಿಲುಕಿದ್ದರು 

ಈ ವಿಚಾರ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ನೆರವಿಗೆ ನಿಂತು ಕೇಸ್ ವಾಪಸ್ ಪಡೆಯದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. ಇದೀಗ ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ರೈತರಿಗೆ ರಿಲೀಫ್ ದೊರಕಿದೆ. 

"

click me!