ನಾವು ಕರ್ನಾಟಕದಲ್ಲಿದ್ದೇವಾ? ಅಮೆರಿಕದಲ್ಲಿದ್ದೇವಾ?; ಸಿಸಿಬಿ ಮುಖ್ಯಸ್ಥರಿಗೆ ಕನ್ನಡಿಗರ ಕ್ಲಾಸ್

By Ravi NayakFirst Published Sep 18, 2022, 11:43 AM IST
Highlights

ನಾವು ಕರ್ನಾಟಕದಲ್ಲಿದ್ದೇವಾ? ಅಮೆರಿಕದಲ್ಲಿದ್ದೇವಾ? ಹೀಗೆ ಪ್ರಶ್ನಿಸುತ್ತಿರುವುದು ಬೇರಾರೂ ಅಲ್ಲ; ಕನ್ನಡಿಗರು. ಸಿಸಿಬಿ ಪೊಲೀಸರು ಸೈಬರ್ ಅಪರಾಧ ಜಾಗೃತಿ ಕುರಿತು ಟ್ವಿಟರ್‌ನಲ್ಲಿ ಅಪ್ಲೋಡ್ ಮಾಡಿರುವ ಇಂಗ್ಲಿಷ್ ಭಾಷೆಯಲ್ಲಿ ಮಾತಾಡಿರುವ ವಿಡಿಯೋಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು (ಸೆ.18) :  ನಾವು ಕರ್ನಾಟಕದಲ್ಲಿದ್ದೀವಾ? ಅಥವಾ ಅಮೆರಿಕಾದಲ್ಲಿದ್ದೀವಾ..? ಹೀಗೆ ಪ್ರಶ್ನಿಸುತ್ತಿರುವುದು ಬೇರಾರೂ ಅಲ್ಲ; ಕನ್ನಡಿಗರು. ಸಿಸಿಬಿ ಪೊಲೀಸರು ಸೈಬರ್ ಅಪರಾಧ ಜಾಗೃತಿ ಕುರಿತು ಮಾಹಿತಿ ನೀಡಿದ್ರು. ಸಿಸಿಬಿ ಮುಖ್ಯಸ್ಥರಾದ ರಮಣ್ ಗುಪ್ತಾ ಅವರಿಗೆ ಜನತೆ ಪ್ರಶ್ನಿಸಿದ್ದಾರೆ.

Bengaluru Crime ಹಫ್ತಾಕ್ಕಾಗಿ ಅವಾಜ್ ಹಾಕಿ ಸಿಸಿಬಿ ಬಲೆಗೆ ಬಿದ್ದ ಕುಳ್ಳ ಪಳನಿ

ರಮಣ್ ಗುಪ್ತಾ(Raman Gupta) ಅವರು ಸೈಬರ್ ಅಪರಾಧ(Cyber Crime)ದ ಬಗ್ಗೆ ಜಾಗೃತಿ ವಿಡಿಯೋ ಅಪ್ಲೋಡ್(Video upload) ಮಾಡಿದ್ದರು. ಈ ವಿಡಿಯೋದಲ್ಲಿ ಕನ್ನಡದ ಬದಲು ಇಂಗ್ಲಿಷ್(English) ನಲ್ಲಿ ಮಾಹಿತಿ ನೀಡಿ ಇದನ್ನ ಟ್ಚೀಟರ್(Twitter) ನಲ್ಲಿ ಅಪ್ಲೋಡ್ ಮಾಡಿದ್ರು. ಇದನ್ನ ನೋಡಿದ ಸಾರ್ವಜನಿಕರು ಖಾರವಾಗಿ ಪ್ರತಿಕ್ರಿಯಿಸಿದ್ದು, ನಾವು ಕರ್ನಾಟಕದಲ್ಲಿದ್ದೀವಾ? ಅಮೆರಿಕಾದಲ್ಲಿದ್ದೀವಾ ಎಂದು ಟ್ವೀಟರ್‌ನಲ್ಲಿ ಪ್ರಶ್ನಿಸಿದ್ದಾರೆ.. "ಏನ್ ಹೇಳ್ತಿಯೋ ಹೇಳು ಅದನ್ನ ಕನ್ನಡದಲ್ಲಿ ಹೇಳು. ನೀವು ಕೆಲಸ ಮಾಡ್ತಿರೋದು ಕರ್ನಾಟಕದಲ್ಲಿ ಎಂದು ಸಾರ್ವಜನಿಕರೊಬ್ಬರು ಟ್ಚೀಟ್ ಮಾಡಿದ್ದಾರೆ.

Crime News: ಸೆಕ್ಯುರಿಟಿ ಗಾರ್ಡ್‌ ಕಟ್ಟಿಹಾಕಿ ಮಳಗಿ ಸಹಕಾರಿ ಸಂಘ ದರೋಡೆಗೆ ಯತ್ನ

ಜನರಿಗೆ ಪೊಲೀಸರಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. 112 ಗೆ ಕರೆ ಮಾಡಿದ್ರೆ, ಅಲ್ಲಿ ಹೋಗಿ ಇಲ್ಲಿ ಹೋಗಿ ಅಂತಾರೆ. ನೀವು ಕೊಟ್ಟ ನಂಬರ್ ಗೆ ಕರೆ ಮಾಡಿದ್ರೆ ಜ್ಞಾನ ಭಾರತಿ ಸ್ಟೇಷನ್(Jnana bharati police station) ಗೆ ಹೋಗಿ ಅಂತಾರೆ. ಅಲ್ಲಿ ಹೋದರೆ ಬಸವೇಶ್ವರ ನಗರ ಸೈಬರ್ ಪೊಲೀಸ್ ಠಾಣೆಗೆ ಹೋಗಿ ಅಂತಾರೆ. ಅಲ್ಲಿಗೆ ಹೋಗೋ ವೇಳೆಗೆ ಗೋಲ್ಡನ್ ಅವರೇ ಮುಗಿದು ಹೋಗಿರುತ್ತೆ ಎಂದು ಸುನೀಲ್ ಕುಮಾರ್ ಎಂಬುವ ವ್ಯಕ್ತಿ ಟ್ವೀಟ್ ಮಾಡಿ ನೋವನ್ನು ತೊಡಿಕೊಂಡಿದ್ದಾರೆ. ಸೈಬರ್ ಅಪರಾಧ ಕುರಿತು ಪ್ರಾದೇಶಿಕ ಭಾಷೆ ಕನ್ನಡದಲ್ಲಿ ಅರಿವು ಮೂಡಿಸಲುಕನ್ನಡಿಗರು ಆಗ್ರಹಿಸಿದ್ದಾರೆ‌..

An appeal from the Joint CP Crime, Bengaluru City on Cyber Crime Awareness.

Do not share your OTP/Bank Details/Credit Card information with anyone.

Call immediately if you are a victim of any cyber fraud. pic.twitter.com/HLLbTxYSKT

— ಬೆಂಗಳೂರು ನಗರ ಪೊಲೀಸ್‌ BengaluruCityPolice (@BlrCityPolice)
click me!