ಅರಮನೆ ಮೈದಾನದಲ್ಲಿ ಮತ್ಸ್ಯಲೋಕ ಅನಾವರಣ

By Kannadaprabha NewsFirst Published Oct 17, 2022, 9:31 AM IST
Highlights
  • ಅರಮನೆ ಮೈದಾನದಲ್ಲಿ ಮತ್ಸ್ಯಲೋಕ ಅನಾವರಣ
  • ಸಣ್ಣ ತೊಟ್ಟಿಯಿಂದ ಹಿಡಿದು ವಿಶಾಲ ಪ್ರದೇಶದಲ್ಲಿ ಮೀನು ಸಾಕುವ ವಿಧಾನದ ಮಾಹಿತಿ
  • ಅಕ್ವೇರಿಯಂ ಖರೀದಿಸಿದ ಜನರು

ಬೆಂಗಳೂರು (ಅ.17) : ಅರಮನೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಒಳನಾಡು ಮೀನು ಉತ್ಪಾದಕರು ಸಮಾವೇಶದಲ್ಲಿ ಮತ್ಸ್ಯಲೋಕ ಅನಾವರಣಗೊಂಡಿತು. ಮೀನು ಸಾಕುವ ವಿವಿಧ ನಮೂನೆ, ನಾನಾ ಆಕಾರ, ವೈವಿಧ್ಯಮಯ ಬಣ್ಣದ ಮೀನು ಮತ್ತು ಆಕ್ವೇರಿಯಂಗಳ ಪ್ರದರ್ಶನ ವೀಕ್ಷಿಸಿ ಸಂತಸ ಪಟ್ಟರು.

ಮೈಸೂರು: ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ ಮತ್ಸ್ಯಲೋಕ..!

Latest Videos

ಆಕ್ವೇರಿಯಂನಲ್ಲಿ ಇಡುವ ವಿವಿಧ ಬಣ್ಣ, ಆಕಾರದ ಅಲಂಕಾರಿಕ ಮೀನುಗಳ ಜೊತೆಗೆ ಹಲವು ವಿನ್ಯಾಸದ ಆಕ್ವೇರಿಯಂಗಳನ್ನೂ ಜನರು ಖರೀದಿಸಿದರು. ಅಕ್ವಾಪೋನಿಕ್ಸ್‌, ಬಯೋಪ್ಲಾಕ್‌, ಪುನರಾವರ್ತಿತ ವಿಧಾನ ಸೇರಿದಂತೆ ಯಾವ್ಯಾವ ರೀತಿ ಮೀನು ಸಾಗಾಣಿಕೆ ಮಾಡಬಹುದು ಎಂಬ ವಿವರಣೆಯನ್ನೂ ನೀಡಲಾಯಿತು. ಸಣ್ಣ ತೊಟ್ಟಿಯಿಂದ ಹಿಡಿದು ವಿಶಾಲವಾದ ಪ್ರದೇಶಗಳಲ್ಲೂ ಯಾವ ರೀತಿ ಮೀನು ಸಾಕಣೆ ಮಾಡಿ ಆದಾಯ ಗಳಿಸಬಹುದು ಎಂಬ ಹಲವು ವಿಧಾನಗಳನ್ನು ಜನರು ಆಸಕ್ತಿಯಿಂದ ವೀಕ್ಷಿಸಿದರು.

ಮೀನುಗಳಿಗೆ ಎಷ್ಟೊಂದು ಬಣ್ಣ, ಆಕಾರ

ಪ್ಲಾಟಿ ಮೀನು, ಗಪ್ಪಿ, ಟೈಗರ್‌ ಬಾರ್ಬ್‌, ಸಯಮೀಸ್‌ ಫೈಟರ್‌, ಕಪ್ಪು ಮೋಳಿ, ಗೋಲ್ಡ್‌ ಸೇರಿದಂತೆ ವಿವಿಧ ಆಕಾರ, ಬಣ್ಣದ ಅಲಂಕಾರಿಕ ಮೀನುಗಳ ಉತ್ಪಾದನೆ, ಮೀನಿನ ಸ್ವಚ್ಛ ನಿರ್ವಹಣೆ, ಆಹಾರ, ಮೀನುಗಾರರು ಅನುಸರಿಸಬೇಕಾದ ಕ್ರಮಗಳು, ಕೆಡದಂತೆ ಮೀನು ಸಂರಕ್ಷಣೆ, ಜಲಾಶಯ, ಕೆರೆ-ಕಟ್ಟೆ, ನದಿ, ಜಮೀನುಗಳ ಹೊಂಡ, ಮನೆಯಲ್ಲೇ ಮೀನು ಸಾಗಾಣಿಕೆ ಬಗ್ಗೆ ಆಸಕ್ತರಿಗೆ ಮಾಹಿತಿ ನೀಡಲಾಯಿತು.

ನಾನಾ ಖಾದ್ಯ

ಮೀನಿನಿಂದ ತಯಾರಿಸಿದ ಕಬಾಬ್‌, ಲಾಲಿಪಪ್‌, ಫಿಂಗರ್ಸ್‌, ಸಮೋಸ, ಸೂಪ್‌, ಮಂಚೂರಿ ಸೇರಿದಂತೆ ಹಲವು ಖಾದ್ಯಗಳನ್ನು ಆಸಕ್ತಿಯಿಂದ ವೀಕ್ಷಿಸಿ, ಮೀನಿನಿಂದ ಇಷ್ಟೆಲ್ಲಾ ಪದಾರ್ಥ ತಯಾರಿಸಬಹುದೇ ಎಂದು ಜನರು ಆಶ್ಚರ್ಯ ವ್ಯಕ್ತಪಡಿಸಿದರು. ತಮಗಿಷ್ಟವಾದ ಆಹಾರ ಖರೀದಿಸಿ ಸೇವಿಸಿ ರುಚಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಥಳದಲ್ಲೇ ಆಹಾರ ತಯಾರಿಸಿಕೊಡುತ್ತಿದ್ದು ಜನರು ಮುಗಿಬಿದ್ದು ಸೇವಿಸಿದ್ದು ಕಂಡುಬಂತು.

ಸಮಾವೇಶ ಉದ್ಘಾಟಿಸುವುದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಳಿಗೆಗಳ ಕಡೆ ತೆರಳಿ ಮೀನು ಸಾಕಾಣಿಕೆಯ ವಿಧಗಳನ್ನು ವೀಕ್ಷಿಸಿ ಮಾಹಿತಿ ಪಡೆದರು. 40ಕ್ಕೂ ಅಧಿಕ ಮಳಿಗೆಗಳಿದ್ದವು.

ವಿಮಾನದ ಮೂಲಕ ಮನೆ ಬಾಗಿಲಿಗೆ ಫಿಶ್‌

ಶೀಘ್ರ ಸೀಫುಡ್‌್ಸ ಲಾಜಿಸ್ಟಿಕ್ಸ್‌ ಸಂಸ್ಥೆಯು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಾರ್ವಜನಿಕ ಸಹಭಾಗಿತ್ವ ಯೋಜನೆಯಡಿ ಜನಸಾಮಾನ್ಯರ ಮನೆ ಬಾಗಿಲಿಗೆ ತಾಜಾ ಮೀನು ಮತ್ತು ಮೀನಿನ ಉತ್ಪನ್ನಗಳನ್ನು ಶೀಘ್ರವಾಗಿ ತಲುಪಿಸುವ ಯೋಜನೆ ಹಮ್ಮಿಕೊಂಡಿದೆ.

Feng Shui: ಈ ಅಕ್ವೇರಿಯಂ ರೂಲ್ಸ್ ಫಾಲೋ ಮಾಡಿದ್ರೆ ಲಕ್ ನಿಮ್ಮದೇ!

ಮಂಗಳೂರು ಮತ್ತು ಮಲ್ಪೆ ಮೀನುಗಾರಿಕಾ ಬಂದರುಗಳಿಂದ ತಾಜಾ ಮೀನನ್ನು ವಿಮಾನದ ಮೂಲಕ ಬೆಂಗಳೂರಿಗೆ ತಲುಪಿಸಿ, 243 ಚಿಲ್ಲರೆ ಮಳಿಗೆಗಳ ಮೂಲಕ ಮತ್ತು ಶೀಘ್ರ ಆ್ಯಪ್‌ ಮೂಲಕ ಜನರ ಮನೆ ಬಾಗಿಲಿಗೆ ಮೀನು ಮತ್ತು ಮೀನಿನ ಉತ್ಪನ್ನಗಳನ್ನು ತಲುಪಿಸುವ ಯೋಜನೆ ಇದಾಗಿದೆ ಎಂದು ಸಂಸ್ಥೆಯ ಪಾಲುದಾರರಾದ ಸುಭೀಷ್‌ ವಾಸುದೇವ್‌ ಮತ್ತು ಪ್ರಿಯೇಶ್‌ ನಾಯ್‌್ಕ ತಿಳಿಸಿದ್ದಾರೆ.

click me!