
ಬೀದರ್(ಫೆ.18): ವನ್ಯ ಜೀವಿಗಳ ಅಂಗಾಂಗಗಳಾದ ಹಲ್ಲು, ಕೊಂಬು, ಕೂದಲು ಸೇರಿದಂತೆ ಮತ್ತಿತರವುಗಳನ್ನು ಬರುವ ಏ.10ರ ಒಳಗಾಗಿ ಅರಣ್ಯ ಇಲಾಖೆ ಸುಪರ್ದಿಗೆ ನೀಡಬೇಕು ಇಲ್ಲವಾದಲ್ಲಿ ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಲಾಗುವದು ಎಂದು ಅರಣ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಎಚ್ಚರಿಸಿದರು.
ವನ್ಯಜೀವಿಗಳ ಅಂಗಾಂಗಳ ಸಂಗ್ರಹದ ಕುರಿತಾಗಿ ಇತ್ತೀಚಿಗೆ ಅರಣ್ಯ ಇಲಾಖೆಯ ಕಾರ್ಯಾಚರಣೆ ಹಲವರ ನಿದ್ದೆಗೆಡಿಸಿತ್ತಲ್ಲದೆ ಖ್ಯಾತನಾಮರೂ ಸೇರಿದಂತೆ ಅನೇಕರ ಮೇಲೆ ದೂರು ದಾಖಲಾಗುವಂತೆ ಆಗಿ ಕೊನೆಗೆ ಕಾನೂನಿನ ಅರಿವಿಲ್ಲದೆ ಸಂಗ್ರಹ ಮಾಡಿದ್ದವರ ಮೇಲೆ ಸರ್ಕಾರ ಅನುಕಂಪ ತೋರಿ ವಾಪಸ್ ನೀಡುವಿಕೆಗೆ ಗಡುವು ನಿರ್ಧರಿಸುವ ಮಾತನಾಡಿದ್ದು, ಇದೀಗ ಗಡುವು ನಿರ್ಧರಿತವಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯಗೆ ಸರ್ಕಾರ 5 ವರ್ಷ ನಡೆಯುತ್ತೆ ಅನ್ನೋದೆ ಖಾತ್ರಿಯಿಲ್ಲ: ಭಗವಂತ ಖೂಬಾ
ಬೀದರ್‌ನಲ್ಲಿ ಭೇಟಿಯಾದ ಸುದ್ದಿಗಾರರಿಗೆ ಮಾತನಾಡಿ, ಕಾನೂನು ಗೊತ್ತಿಲ್ಲದೆ ವನ್ಯಜೀವಿಗಳ ಅಂಗಾಂಗಗಳನ್ನಿಟ್ಟುಕೊಂಡಿರುವ, ಅವುಗಳನ್ನು ಅರಣ್ಯ ಇಲಾಖೆ ಸುಪರ್ದಿಗೆ ನೀಡಿದ್ರೆ ಯಾವುದೇ ಪ್ರಕರಣ ದಾಖಲಾಗಲ್ಲ ಆದರೆ ನಿರ್ಲಕ್ಷಿಸಿದ್ದೆಯಾದಲ್ಲಿ ಅಂಥವರ ಮೇಲೆ ದೂರು ದಾಖಲಾಗುವದು ಪಕ್ಕಾ ಎಂದರು.
ವನ್ಯ ಜೀವಿಗಳ ಅಂಗಾಂಗಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ, ಒಂದು ವೇಳೆ ಇಟ್ಟುಕೊಂಡ್ರೆ ಶಿಕ್ಷಾರ್ಹ ಅಪರಾಧವಾಗುತ್ತದೆ. ಹೀಗಾಗಿ ಪ್ರಮಾಣ ಪತ್ರ ಇದ್ರೆ ಮಾತ್ರ ವನ್ಯಜೀವಿಗಳ ಅಂಗಾಂಗಗಳನ್ನಿಟ್ಟುಕೊಳ್ಳಬಹುದು ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ