ತ್ರಿವಿಧ ದಾಸೋಹಿ ಮಠವೆಂದೇ ಪ್ರಸಿದ್ಧಿ ಪಡೆದಿರುವ ತುಮಕೂರಿನ ಶ್ರೀ ಸಿದ್ದಗಂಗಾ ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಅವರ ಶಿಷ್ಯನನ್ನು ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಗಿದೆ.
ತುಮಕೂರು (ಏ.19): ತುಮಕೂರಿನ ಐತಿಹಾಸಿಕ ಸಿದ್ದಗಂಗಾ ಮಠದ ನಡೆದಾಡುವ ದೇವರು ಲಿಂಗೈಕ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಶ್ರೀಗಳ ಶಿಷ್ಯ ಮನೋಜ್ ಕುಮಾರ್ ಅವರನ್ನು ಸಿದ್ದಗಂಗಾ ಮಠದ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಇವರನ್ನು ಅಕ್ಷಯ ತೃತೀಯ ದಿನ ಏ.23ರ ಭಾನುವಾರ ನಿರಂಜನ ಪಟ್ಟಾಧಿಕಾರ ಮತ್ತು ಉತ್ತರಾಧಿಕಾರಿ ನೇಮಕ ಮಾಡಲಾಗುವುದು ಎಂದು ಮಠದ ಕಾರ್ಯದರ್ಶಿ ತಿಳಿಸಿದ್ದಾರೆ.
ವಿಶ್ವವ್ಯಾಪಿ ತ್ರಿವಿಧ ದಾಸೋಹಿ ಮಠವೆಂದೇ ಪ್ರಸಿದ್ಧಿ ಪಡೆದಿರುವ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾದ ನಂತರ ಉತ್ತರಾಧಿಕಾರಿಯಾಗಿ ಸಿದ್ದಲಿಂಗ ಸ್ವಾಮೀಜಿ ಆಡಳಿತ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದ್ದು, ನಡೆದಾಡುವ ದೇವರು ಶಿವಕುಮಾರ ಶ್ರೀಗಳ ಶಿಷ್ಯ ಮನೋಜ್ ಕುಮಾರ್ ಅವರನ್ನು ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಇವರನ್ನು ಅಕ್ಷಯ ತೃತೀಯ ದಿನ ಏ.23ರ ಭಾನುವಾರ ನಿರಂಜನ ಪಟ್ಟಾಧಿಕಾರ ಮತ್ತು ಉತ್ತರಾಧಿಕಾರಿ ನೇಮಕ ಮಾಡಲಾಗುವುದು ಎಂದು ಮಠದ ಕಾರ್ಯದರ್ಶಿ ತಿಳಿಸಿದ್ದಾರೆ.
ತುಮಕೂರು ಅಭ್ಯರ್ಥಿಗಳ ಆಸ್ತಿ ವಿವರ : ಯಾರು ಎಷ್ಟು ಶ್ರೀಮಂತರು
ಬಸವ ಜಯಂತಿಯಂದೇ ನೇಮಕ ಕಾರ್ಯಕ್ರಮ: ಇದೇ ತಿಂಗಳು ಭಾನುವಾರ ಪವಿತ್ರವಾದ 'ಅಕ್ಷಯ ತೃತೀಯ' ಎಂದು ಪ್ರಸಿದ್ಧವಾಗಿದೆ. ಈ ದಿನವು ಮಹಾತ್ಮ ಬಸವೇಶ್ವರರ ಜನ್ಮದಿನ ಎಂದು ಪರಿಗಣಿಸಲ್ಪಟ್ಟಿದ್ದು, ಇಡೀ ದೇಶವೇ ಬಸವೇಶ್ವರರ ಜಯಂತಿಯನ್ನು ಆಚರಿಸುತ್ತದೆ. ಶ್ರೀ ಸಿದ್ಧಗಂಗಾ ಮಠದಲ್ಲಿಯೂ ಸಹ ಬಸವ ಜಯಂತ್ಯುತ್ಸವನ್ನು ಭಕ್ತಿ, ಶ್ರದ್ಧೆಗಳಿಂದ ಆಚರಿಸಲ್ಪಡುತ್ತದೆ. ಜೊತೆಗೆ, ಶ್ರೀ ಸಿದ್ಧಗಂಗಾ ಮಠದ ಪರಂಪರೆಯಲ್ಲಿ ಇರುವ ಕೆಲವು ಮಠಗಳಲ್ಲಿ ಉತ್ತರಾಧಿಕಾರಿಗಳು ಇಲ್ಲದೇ ಇರುವುದನ್ನು ಪರಮಪೂಜ್ಯ ಸ್ವಾಮೀಜಿಯವರು ಗಮನಿಸಿ, ಈ ಸಾಲಿನ ಬಸವ ಜಯಂತಿಯಂದು ನಿರಂಜನ ಪಟ್ಟಾಧಿಕಾರ ಮತ್ತು ಉತ್ತರಾಧಿಕಾರಿ ನೇಮಕ ಕಾರ್ಯಕ್ರಮವನ್ನು ಏ.23 ರಂದು ಶ್ರೀ ಸಿದ್ಧಗಂಗಾ ಮಠದಲ್ಲಿ ನೆರವೇರಿಸಲಾಗುತ್ತದೆ.
ಸಿದ್ದಗಂಗಾ ಮಠ ಮತ್ತು ಶಾಖಾ ಮಠಗಳ ಉತ್ತರಾಧಿಕಾರಿಗಳು:
ಸಿದ್ದಗಂಗಾ ಮಠದ ಉತ್ತರಾಧಿಕಾರಿ ವಿವರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮೈಲನಹಳ್ಳಿ ಗ್ರಾಮದ ಎಂ.ಬಿ. ಷಡಕ್ಷರಯ್ಯ- ವಿರುಪಾಕ್ಷಮ್ಮ ದಂಪತಿಯ ಪುತ್ರರಾದ ಮನೋಜ್ ಕುಮಾರ್ ಅವರು ಈಗ ಸಿದ್ದಗಂಗಾ ಮಠದ ಉತ್ತರಾಧಿಕಾರಿ ಆಗಿ ಆಯ್ಕೆ ಆಗಿದ್ದಾರೆ. ಇವರು 1987ರ ಜೂ.2ರಂದು ಜನಿಸಿದ್ದು, ಬಿಎಸ್‌ಸಿ, ಬಿಎಡ್ ಹಾಗೂ ಎಂಎ ಪದವಿಯನ್ನು ಪಡೆದಿದ್ದಾರೆ. ಸಿದ್ದಗಂಗಾ ಮಠದ ಶ್ರೀ ಸಿದ್ದಗಂಗಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Tumakuru: ಐತಿಹಾಸಿಕ ಸಿದ್ದಗಂಗಾ ಮಠದ ದನಗಳ ಪರಿಷೆ ರದ್ದು: ಸಿದ್ದಲಿಂಗಶ್ರೀಗಳ ಪ್ರಕಟಣೆ
ಮಠದ ಇತಿಹಾಸ ಶ್ರೀಗಳ ಕೊಡುಗೆ: ಶ್ರೀ ಸಿದ್ದಗಂಗಾ ಮಠವು "ಶಿವಯೋಗಿ ಸಿದ್ದಪುರುಷರ" ನಿರಂತರ ಸಾಲನ್ನು ಪೋಷಿಸುವ ಪುರಾತನ ಆಶ್ರಮವಾಗಿದೆ. ಈ ಮಠವನ್ನು 15 ನೇ ಶತಮಾನದಲ್ಲಿ ಶ್ರೀ ಗೋಸಲ ಸಿದ್ದೇಶ್ವರ ಸ್ವಾಮೀಜಿ ಸ್ಥಾಪಿಸಿದರು. ಪ್ರಖ್ಯಾತ ಶಿವಯೋಗಿಗಳ ಈ ಪರಂಪರೆಯಲ್ಲಿ ಶ್ರೀ ಶ್ರೀ ಅಟವೀಶ್ವರ ಸ್ವಾಮಿಗಳು, ಶ್ರೀ ಶ್ರೀ ಶ್ರೀ ಉದ್ದಾನ ಶಿವಯೋಗಿಗಳು ಮತ್ತು ಪರಮಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ಅವರ ಅನನ್ಯ ಕೊಡುಗೆಗಳೊಂದಿಗೆ ಪ್ರಗತಿ ಸಾಧಿಸಿದೆ.
10 ಸಾವಿರ ವಿದ್ಯಾರ್ಥಿಗಳಿಗೆ ಊಟ ವಸತಿಯೊಂದಿಗೆ ಶಿಕ್ಷಣ ಪ್ರಸಾರ: ಈಗ ಸಿದ್ದಗಂಗಾ ಮಠವು 10,000 ಕ್ಕೂ ಹೆಚ್ಚು ಬಡ ಮಕ್ಕಳಿಗೆ ಉಚಿತ ಊಟ ಮತ್ತು ವಸತಿಯೊಂದಿಗೆ ಯಾವುದೇ ಜಾತಿ, ಧರ್ಮದ ಭೇದಭಾವವಿಲ್ಲದೆ ಶಿಕ್ಷಣವನ್ನು ನೀಡುತ್ತಿರುವ ವಿಶಿಷ್ಟ ಗುರುಕುಲವಾಗಿದೆ. ಮಠವು ವಿವಿಧ ಸ್ಥಳಗಳಲ್ಲಿ ಅಂಧ ಶಾಲೆಗಳನ್ನು ನಡೆಸುತ್ತಿದೆ ಮತ್ತು 100 ಕ್ಕೂ ಹೆಚ್ಚು ಅಂಧ ಮಕ್ಕಳಿಗೆ ಸ್ವತಂತ್ರ ಹಾಸ್ಟೆಲ್ ಸೌಲಭ್ಯಗಳೊಂದಿಗೆ ಉಚಿತ ಶಿಕ್ಷಣ ಮತ್ತು ಆಹಾರವನ್ನು ನೀಡಲಾಗುತ್ತದೆ.