ಮುರುಘಾ ಶ್ರೀ ವಿರುದ್ಧದ ಲೈಂಗಿಕ ಕಿರುಕುಳ ಕೇಸ್‌ಗೆ ಟ್ವಿಸ್ಟ್‌..!

By Kannadaprabha News  |  First Published May 29, 2024, 12:02 PM IST

ಇದಕ್ಕೂ ಮೊದಲು ಮೇ 24 ರಂದು ಮಹಿಳಾ ಠಾಣೆಗೆ ಸಂತ್ರಸ್ತೆ ಚಿಕ್ಕಪ್ಪ ದೂರು ನೀಡಿ ಬಾಲಕಿ ಮನೆಯಿಂದ ನಾಪತ್ತೆಯಾಗಿದ್ದಳೆಂಬ ಸಂಗತಿ ಪೊಲೀಸರ ಗಮನಕ್ಕೆ ತಂದಿದ್ದರು. ಮಂಗಳವಾರ ಸಂಜೆ ಸಂತ್ರಸ್ತ ಬಾಲಕಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾಗುವ ಮೂಲಕ ಪ್ರಕರಣಕ್ಕೆ ತಿರುವು ನೀಡಿದ್ದಾಳೆ.
 


ಚಿತ್ರದುರ್ಗ(ಮೇ.29):  ಅಪ್ರಾಪ್ತರ ಮೇಲಿನ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿ ಮುರುಘಾಶ್ರೀ ಮೇಲೆ ದಾಖಲಾಗಿರುವ ಫೋಕ್ಸೋ ಮೊದಲ ಪ್ರಕರಣ ಮಂಗಳವಾರ ಮತ್ತೊಂದು ತಿರುವು ಪಡೆದಿದೆ. ನನ್ನ ಚಿಕ್ಕಪ್ಪ ನನಗೆ ಹಾಗೂ ನನ್ನ ತಮ್ಮನಿಗೆ ಕಿರುಕುಳ ನೀಡುತ್ತಿದ್ದಾರೆಂದು ಪ್ರಕರಣದ ಸಂತ್ರಸ್ತೆ ಮಕ್ಕಳ ಕಲ್ಯಾಣ ಸಮಿತಿ(ಸಿಡಬ್ಯ್ಸೂಸಿ) ಮೊರೆ ಹೋಗಿದ್ದಾರೆ.

ಇದಕ್ಕೂ ಮೊದಲು ಮೇ 24 ರಂದು ಮಹಿಳಾ ಠಾಣೆಗೆ ಸಂತ್ರಸ್ತೆ ಚಿಕ್ಕಪ್ಪ ದೂರು ನೀಡಿ ಬಾಲಕಿ ಮನೆಯಿಂದ ನಾಪತ್ತೆಯಾಗಿದ್ದಳೆಂಬ ಸಂಗತಿ ಪೊಲೀಸರ ಗಮನಕ್ಕೆ ತಂದಿದ್ದರು. ಮಂಗಳವಾರ ಸಂಜೆ ಸಂತ್ರಸ್ತ ಬಾಲಕಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾಗುವ ಮೂಲಕ ಪ್ರಕರಣಕ್ಕೆ ತಿರುವು ನೀಡಿದ್ದಾಳೆ.

Tap to resize

Latest Videos

undefined

ಅಪ್ರಾಪ್ತ ಬಾಲಕಿ ಲೈಂಗಿಕ ದೌರ್ಜನ್ಯ ಪ್ರಕರಣ; ಮುರುಘಾ ಶ್ರೀ ವಿರುದ್ಧದ ಅತ್ಯಾಚಾರ ಆರೋಪ ರದ್ದುಗೊಳಿಸಲು ಹೈಕೋರ್ಟ್ ನಕಾರ

ಮೇ 24 ರಂದು ಚಿತ್ರದುರ್ಗದ ನಿವಾಸದಿಂದ ನಾಪತ್ತೆಯಾದ ಸಂತ್ರಸ್ತೆ ನೇರವಾಗಿ ಮೈಸೂರಿನ ಒಡನಾಡಿ ಸಂಸ್ಥೆಗೆ ಹೋಗಿ ಚಿಕ್ಕಪ್ಪನ ಕಿರುಕುಳದ ವಿಚಾರ ತಿಳಿಸಿದ್ದಾಳೆ. ನಂತರ ಒಡನಾಡಿ ಸಂಸ್ಥೆಯವರು ಅಲ್ಲಿನ ಮಕ್ಕಳ ಕಲ್ಯಾಣ ಸಮಿತಿಗೆ ಸಂತ್ರಸ್ತೆಯನ್ನು ಕರೆದೊಯ್ದು ದೂರು ದಾಖಲಿಸಿದ್ದಾರೆ. ಸಿಡಬ್ಲ್ಯುಸಿ ಸೂಚನೆ ಅನ್ವಯ ಎರಡ್ಮೂರು ದಿನ ತಮ್ಮ ಬಳಿಯೇ ಇಟ್ಟುಕೊಂಡು ನಂತರ ಮಂಗಳವಾರ ನೇರವಾಗಿ ಚಿತ್ರದುರ್ಗಕ್ಕೆ ಕರೆತಂದು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಸಂತ್ರಸ್ತೆ ತನ್ನ ಚಿಕ್ಕಪ್ಪನ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾಳೆ. ಆರೋಪಿ ಮುರುಘಾಶ್ರೀ ಬೆಂಬಲಿಗರು ನಮ್ಮ ಚಿಕ್ಕಪ್ಪಗೆ ಆಮಿಷವೊಡ್ಡಿ ಒತ್ತಡ ಹಾಕುತ್ತಿದ್ದಾರೆ. ಹಾಗಾಗಿ ಚಿಕ್ಕಪ್ಪ ಕಿರುಕುಳ ನೀಡುತ್ತಿದ್ದಾನೆ. ನನ್ನ ಸಹೋದರ ಕೂಡಾ ಕಿರುಕುಳ ಅನುಭವಿಸುತ್ತಿದ್ದಾನೆಂದು ದೂರಿದ್ದಾಳೆ ಎಂದರು.

ಮೈಸೂರು ಸಿಡಬ್ಲ್ಯುಸಿ ಬಳಿ ಸಂತ್ರಸ್ತೆ ಸವಿವರವಾಗಿ ಎಲ್ಲವನ್ನೂ ಹೇಳಿದ್ದಾಳೆ. ಇದೊಂದು ಅಕ್ಷಮ್ಯ ಅಪರಾಧವಾಗಿದ್ದು ಒಂದು ಸಿಂಡಿಕೇಟ್ ಕೆಲಸ ಮಾಡಿದೆ. ಹಣಕಾಸು ವಹಿವಾಟು ನಡೆದಿದೆ. ಸಂತ್ರಸ್ತೆಯನ್ನು ದೈಹಿಕ ಮತ್ತು ಮಾನಸಿಕ ಕ್ಷೋಭೆಗೆ ಒಳಪಡಿಸಲಾಗಿದೆ. ಅವರ ಚಿಕ್ಕಪ್ಪ ಹೊಡೆಯೋದು, ಬಡೆಯೋದು ಮಾಡಿದ್ದಾರೆ, ನೇಣು ಹಾಕುತ್ತೇನೆ ಎಂದಿದ್ದಾರೆ‌. ಊಟದಲ್ಲಿ ವಿಷ ಕೊಟ್ಟು ಸಾಯಿಸುತ್ತೇನೆ ಎಂದು ಬೆದರಿಸಿದ್ದಾರೆ. ಹಾಗಾಗಿ ಸಂತ್ರಸ್ತೆ ನಮ್ಮ ಬಳಿಗೆ ಓಡಿ ಬಂದಿದ್ದಾಳೆ ಎಂದು ಸ್ಟ್ಯಾನ್ಲಿ ಹೇಳಿದರು.

ಮುರುಘಾಶ್ರೀಗಳಿಗೆ ಸುಪ್ರೀಂ ಮತ್ತೆ ಶಾಕ್, ಮಠಕ್ಕೆ ಸಮಿತಿ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ನೊಟೀಸ್‌

ಇದರ ಹಿಂದೆ ಫೋಕ್ಸೋ ಅಪರಾಧ ಮುಚ್ಚಿ ಹಾಕಲು ಸಂಘಟಿತ ಪ್ರಯತ್ನ ನಡೆದಿದೆ. ಸಾಕ್ಷಿ ಹೇಳಬಾರದು, ವಿಮುಖ ಆಗಬೇಕು ಎಂದು ಸಂತ್ರಸ್ತೆ ಮೇಲೆ ಒತ್ತಡ ಹಾಕಿದ್ದಾರೆ. ತಮ್ಮನ ಮೇಲೆ ಆಣೆ ಮಾಡಿಸಿ ವಿಡಿಯೋ ಮಾಡಿದ್ದಾರೆ. ಸಿಡಬ್ಲ್ಯುಸಿ ಮುಂದೆ ಎಲ್ಲವನ್ನು ಆಕೆ ಹೇಳಿದ್ದಾಳೆ ಎಂದು ಸ್ಟಾನ್ಲಿ ಹೇಳಿದರು. ಸಂತ್ರಸ್ತ ಬಾಲಕಿಗೆ ಶಿಕ್ಷಣದಿಂದ ವಂಚನೆ ಮಾಡಲಾಗಿದ್ದು, ಪರೀಕ್ಷೆಗೂ ಕಳುಹಿಸದೆ ಬದುಕಿಗೆ ಕೊಳ್ಳಿ ಇಡಲಾಗಿದೆ ಎಂದೂ ದೂರಿದರು.

ಚಿತ್ರದುರ್ಗದ ಸಿಡಬ್ಲ್ಯುಸಿಗೆ ಈ ಬಗ್ಗೆ ಬಾಲಕಿ ದೂರು ದಾಖಲಿಸಲಿದ್ದಾಳೆ. ಸಂತ್ರಸ್ತೆ ತಮ್ಮ ಬಳಿಗೆ ಆಗಮಿಸಿರುವುದರ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ, ಚಿತ್ರದುರ್ಗದ ಬಾಲಕಿಯರ ಬಾಲ ಭವನದಲ್ಲಿ ಆಕೆಯ ಆಪ್ತ ಸಮಾಲೋಚನೆ ನಡೆಸಲಾಗುತ್ತಿದೆ ಎಂದರು.

click me!