* 100 ಯೂನಿಟ್ ಬಳಸುತ್ತಿದ್ದ ಗ್ರಾಹಕರಿಗೆ ಸಣ್ಣ ಪ್ರಮಾಣದ ದರಯೇರಿಕೆ ಬಿಸಿ
* 100 ಯೂನಿಟ್ ಬಳಕೆಗೆ ಬರ್ತಿದ್ದ ಹಾಲಿ ಬಿಲ್‌ಗಿಂತ 19 ರಿಂದ 31 ರೂಪಾಯಿವರೆಗೂ ಹೆಚ್ಚಾಗಲಿದೆ
* 2021 - 2022ರ ಕೊನೆಯ 2 ತ್ರೈಮಾಸಿಕದಲ್ಲಿ ಕಲ್ಲಿದ್ದಲು ಬೆಲೆ ಏರಿಕೆಯಾಗಿತ್ತು
ಬೆಂಗಳೂರು(ಜು.28): ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ ವಿದ್ಯುತ್ ಬರೆಯೂ ತಗುಲಲಿದೆ. ವಿದ್ಯುತ್ ದರ 19 ರೂಪಾಯಿಯಿಂದ 31 ರವರೆಗೆ ಏರಿಕೆಯಾಗಲಿದ್ದು, ಜುಲೈ 1ರಿಂದಲೇ ಇದು ಜಾರಿಯಾಗಲಿದೆ.
ಹೌದು ಪ್ರತಿ ತಿಂಗಳು 100 ಯೂನಿಟ್ ಹಾಗೂ ಅದಕ್ಕೂ ಹೆಚ್ಚು ಬಳಸುವ ಗ್ರಾಹಕರು ಹೆಚ್ಚುವರಿಯಾಗಿ 19ರಿಂದ 31ರವರೆಗೆ ಪಾವತಿಸಬೇಕಾಗುತ್ತದೆ. ಈ ದರ ಆಯಾ ವಿದ್ಯುತ್ ವಿತರಣಾ ಕಂಪನಿಗಳ ಮೇಲೆ ಅವಲಂಬನೆಯಾಗಿದೆ. ಕಳೆದ 2 ವರ್ಷಗಳಲ್ಲಿ ಕಲ್ಲಿದ್ದಲು ದರ ಹೆಚ್ಚಳವಾಗಿರುವ ಹಿನ್ನೆಲೆ , ಕಲ್ಲಿದ್ದಲು ಖರೀದಿಗೆ ಮಾಡಿರುವ ವೆಚ್ಚವನ್ನು ಗ್ರಾಹಕರಿಂದ ಪಡೆಯಲು ಅವಕಾಶ ಕಲ್ಪಿಸುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋ (ಕೆಇಆರ್‌ಸಿ)ಕ್ಕೆ ಎಸ್ಕಾಂಗಳು (ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಗೆಸ್ಕಾಂ, ಸೆಸ್ಕ್) ಪ್ರಸ್ತಾವ ಸಲ್ಲಿಸಿದ್ದವು. ತಮ್ಮ ಈ ಪ್ರಸ್ತಾನವನೆಯಲ್ಲಿ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕವನ್ನು ಪ್ರತಿ ಯೂನಿಟ್‌ಗೆ 38ರಿಂದ 55 ರೂಪಾಯಿವರೆಗೆ ವಸೂಲಿ ಮಾಡಲು ಎಸ್ಕಾಂಗಳು ಕೋರಿದ್ದವು.
ಎಸ್ಕಾಂಗಳು ಎಷ್ಟು ದರ ಹೆಚ್ಚಳ ಮಾಡಲು ಕೋರಿದ್ದವು?
ಬೆಸ್ಕಾಂ- ರೂ. 55.28
ಮೆಸ್ಕಾಂ- ರೂ. 38.98
ಸೆಸ್ಕ್- ರೂ. 40.47
ಹೆಸ್ಕಾಂ- ರೂ. 49.54
ಗೆಸ್ಕಾಂ- ರೂ. 39.36
ಇನಸನು ಎಸ್ಕಾಂಗಳು ಸಲ್ಲಿಸಿದ್ದ ಪ್ರಸ್ತಾವನೆಗೆ ಕೆಇಆರ್‌ಸಿ ಅನುಮೋದನೆ ನೀಡಿದೆಯಾದರೂ, ಅವುಗಳು ಕೋರಿದಷ್ಟು ದರಗಳನ್ನು ನಿಗದಿಪಡಿಸಿಲ್ಲ. ಇದರಲ್ಲಿ ಕಡಿತಗೊಳಿಸಿದ್ದು ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಗ್ರಾಹಕರಿಗೆ ಎಸ್ಕಾಂ ನಿಗದಿಪಡಿಸಿರುವ ನೂತನ ದರದಿಂದ ಹೊರೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.
ವಿದ್ಯುತ್ ದರ ಹೆಚ್ಚಿಸಲು ಎಸ್ಕಾಂಗಳು ಕೊಟ್ಟ ಕಾರಣ ಹೀಗಿದೆ
ಒಂದೆಡೆ ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ಉತ್ಪಾದನೆಯ ವೆಚ್ಚ ಹೆಚ್ಚಾಗಿದ್ದರೆ, ಕಲ್ಲಿದ್ದಲು, ಅಭಾವ ಹಾಗೂ ದರ ಹೆಚ್ಚಳವಾಗಿದೆ. ಅಲ್ಲದೇ ಆರ್ಥಿಕವಾಗಿ ಎಸ್ಕಾಂಗಳು ನಷ್ಟದಲ್ಲಿರುವ ಕಾರಣ ತಾತ್ಕಾಲಿಕ ಮಟ್ಟಕ್ಕೆ ದರ ಹೆಚ್ಚು ಮಾಡಲಾಗಿದೆ. ಹೊರೆ ಕಡಿಮೆಯಾದ ಕೂಡಲೇ ಬೆಲೆಗಳು ವಾಪಸ್ ಯಥಾಸ್ಥಿತಿಗೆ ಬರುವುದಾಗಿಯೂ ಅವು ತಿಳಿಸಿವೆ.