ಸಿಲಿಕಾನ್ ಸಿಟಿಯಲ್ಲಿ ಮತ್ತೆ ಬೆಂಕಿ ಹೊತ್ತಿಕೊಂಡಿದೆ. ನಗರದಲ್ಲಿ ಸಾಲು ಸಾಲು ಅಗ್ನಿ ಅವಘಡಗಳು ಸಂಭವಿಸುತ್ತಿವೆ. ಇದೀಗ ಬಟ್ಟೆ ಹಾಗೂ ಶೂ ಮಳಿಗೆಗೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಬೆಂಗಳೂರು ನಗರದ ಚಿಕ್ಕಜಾಲದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಬೆಂಗಳೂರು (ನ.28): ಸಿಲಿಕಾನ್ ಸಿಟಿಯಲ್ಲಿ ಮತ್ತೆ ಬೆಂಕಿ ಹೊತ್ತಿಕೊಂಡಿದೆ. ನಗರದಲ್ಲಿ ಸಾಲು ಸಾಲು ಅಗ್ನಿ ಅವಘಡಗಳು ಸಂಭವಿಸುತ್ತಿವೆ. ಇದೀಗ ಬಟ್ಟೆ ಹಾಗೂ ಶೂ ಮಳಿಗೆಗೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಬೆಂಗಳೂರು ನಗರದ ಚಿಕ್ಕಜಾಲದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ರಾತ್ರಿ ಸುಮಾರು 10ಗಂಟೆ ಸುಮಾರಿಗೆ ನಡೆದಿರೋ ಘಟನೆ ಶಾರ್ಟ್ ಸೆರ್ಕ್ಯೂಟ್‌ನಿಂದ ಬೆಂಕಿಹೊತ್ತಿಕೊಂಡಿರುವ ಶಂಕೆ. ಬೆಂಕಿ ಕಾಣಿಸಿಕೊಳ್ಳತಿದ್ದಂತೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿದೆ. ಅಗ್ನಿ ಶಾಮಕದಳ ಸಿಬ್ಬಂದಿ ಮಳಿಗೆಗೆ ಹೊತ್ತಿಕೊಂಡಿದ್ದ ಬೆಂಕಿ ನಂದಿಸಿದ್ದಾರೆ. ಕೆಲವು ಸುಟ್ಟು ಕರಕಲಾಗಿವೆ. ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಸಾಲು ಸಾಲು ಅಗ್ನಿ ಅವಘಡ; ಈ ಬಾರಿ ದೀಪಾವಳಿ ಪಟಾಕಿ ಮಾರಾಟ, ಸಿಡಿಸಲು ಬಿಬಿಎಂಪಿ ಕಠಿಣ ಕ್ರಮ
ಆಕಸ್ಮಿಕ ಬೆಂಕಿ: ಮೇಲ್ಚಾವಣಿ, ರಬ್ಬರ್ ಶೀಟು ಆಹುತಿ
ನರಸಿಂಹರಾಜಪುರ: ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿಯ ಹಾಳು ಕರುಗುಂದದ ಜೋಸೆಫ್ ಎಂಬುವರ ಮನೆಗೆ ಭಾನುವಾರ ರಾತ್ರಿ 11 ಗಂಟೆಗೆ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಅಡಿಗೆ ಮನೆಯ ಪಕ್ಕದಲ್ಲಿಟ್ಟದ್ದ 2 ಕ್ವಿಂಟಾಲ್ ರಬ್ಬರ್, ಮನೆಯ ಮೇಲ್ಚಾವಣಿ, ಮಂಚ, ಪ್ಯಾನ್, ಮೇಲ್ಚಾವಣಿಯ ಸಿಮೆಂಟು ಸೀಟು ಸೇರಿದಂತೆ ಇತರೆ ವಸ್ತುಗಳು ಸುಟ್ಟು ಹೋಗಿವೆ.
ಬೆಂಗ್ಳೂರಲ್ಲಿ ಮತ್ತೊಂದು ಅಗ್ನಿ ಅವಘಡ: ಪ್ಲಾಸ್ಟಿಕ್ ಗೋದಾಮಿಗೆ ಬೆಂಕಿ
ಅಡುಗೆ ಮನೆ ಒಲೆಯ ಬೆಂಕಿಯ ಕಿಡಿ ಸಮೀಪದಲ್ಲಿ ಕೂಡಿಟ್ಟಿದ್ದ ರಬ್ಬರ್ ಸೀಟುಗಳಿಗೆ ಆಕಸ್ಮಿಕವಾಗಿ ತಗುಲಿ ಈ ದುರಂತ ಸಂಭವಿಸಿದೆ. ಬೆಂಕಿ ಕಂಡ ಕೂಡಲೇ ಅಕ್ಕ ಪಕ್ಕದ ಮನೆಯವರು ಆಗಮಿಸಿ ಬೆಂಕಿ ನಂದಿಸಿದ್ದಾರೆ. 1.50 ಲಕ್ಷ ರುಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಕಡಹಿನಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಾ ಮಹೇಶ್, ಉಪಾಧ್ಯಕ್ಷ ಸುನೀಲ್, ಸದಸ್ಯೆ ವಾಣಿ ನರೇಂದ್ರ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಂ.ಮಹೇಶ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಅಬ್ದುಲ್ ರೆಹಮಾನ್, ಬೆಸಿಲ್ ಬೇಟಿ ನೀಡಿದರು.