ಡಿಸಿಎಂ ಡಿ.ಕೆ.ಶಿವಕುಮಾರ್ ಕ್ಷೇತ್ರದಲ್ಲಿ ನಿಲ್ಲದ ಕಾಡಾನೆ ಅಟ್ಟಹಾಸ: ಕಾಡಾನೆ ತುಳಿತಕ್ಕೆ ಮತ್ತೊಬ್ಬ ರೈತ ಬಲಿ!

By Govindaraj S  |  First Published Jan 25, 2024, 8:18 PM IST

ದೇಶದ ಬೆನ್ನೆಲುಬು ಅಂತ ಕರೆಯುವ ರೈತನ ಗೋಳು ಕೇಳೋರೆ ಇಲ್ಲ ತಾನು ಬೆಳೆದ ಬೆಳೆ ಎಲ್ಲಿ ನಾಶವಗುತ್ತೋ ಅಂತ ಆತಂಕದಲ್ಲಿ ರಾತ್ರಿ ಕಣ ಕಾಯಲು ಮಲಗಿದ್ದ ಆದರೆ ಬೆಳಗಾಗೀದ್ರೊಳಗೆ ಹೆಣವಾಗಿಬಿಟ್ಟ.


ವರದಿ: ಜಗದೀಶ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ

ರಾಮನಗರ (ಜ.25): ದೇಶದ ಬೆನ್ನೆಲುಬು ಅಂತ ಕರೆಯುವ ರೈತನ ಗೋಳು ಕೇಳೋರೆ ಇಲ್ಲ ತಾನು ಬೆಳೆದ ಬೆಳೆ ಎಲ್ಲಿ ನಾಶವಗುತ್ತೋ ಅಂತ ಆತಂಕದಲ್ಲಿ ರಾತ್ರಿ ಕಣ ಕಾಯಲು ಮಲಗಿದ್ದ ಆದರೆ ಬೆಳಗಾಗೀದ್ರೊಳಗೆ ಹೆಣವಾಗಿಬಿಟ್ಟ. ರಾಮನಗರ ಹೊರವಲಯ ಹಾಗೂ ಕನಕಪುರ ತಾಲೂಕು ಈಗ ರೈತರಿಗೆ ಡೇಂಜರ್ ಸ್ಪಾಟ್ ಆಗಿ ಪರಣಿಮಿಸಿದೆ ಯಾಕಂದ್ರೆ ಕೇವಲ ಮೂರು ತಿಂಗಳ ಅಂತರದಲ್ಲಿ ಎಂಟಕ್ಕೂ ಹೆಚ್ಚು ಬಾರಿ ಕಾಡಾನೆ ರೈತರ ಮೇಲೆ ಅಟ್ಯಾಕ್ ಮಾಡಿದ್ದು, ಒಬ್ಬ ಮಹಿಳೆ ಸೇರಿದಂತೆ ಮೂರು ಜನ ರೈತರು ತಮ್ಮ ಪ್ರಾಣ ಕಳೆದುಕೊಂಡು ಇನ್ನೊಬ್ಬ ಕಾರ್ಮಿಕ ಜೀವನ್ಮರಣದ ನಡುವೆ ಹೋರಾಡ್ತಾ ಇದ್ದಾನೆ.  

Tap to resize

Latest Videos

undefined

ತಾನು ಬೆಳೆದ ರಾಗಿ ಬೆಳೆ ಕಣವನ್ನು ಉಳಿಸಿಕೊಳ್ಳಲು ರಾತ್ರಿ ಕಣದ ಬಳಿ ಮಲಗಿದ್ದ ಗೇರೆಹಳ್ಳಿಯ ಪುಟ್ನಂಜ‌ ಕೂಡ ಕಾಡಾನೆ ದಾಳಿಗೆ ತುತ್ತಾಗಿ  ಬೆಳಗಾಗೋದ್ರಳಗೆ ಹೆಣವಾಗಿ ಪತ್ತೆಯಾಗಿದ್ದಾನೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಗೇರಹಳ್ಳಿಯ  ರೈತ ಅರವತ್ತೈದು ವರ್ಷದ ಪುಟ್ನಂಜ,ತನ್ನ ಹೊಲದಲ್ಲಿ ರಾಗಿ ಬೆಳೆದಿದ್ದ, ಬರಗಾಲ ನಡುವೆಯೂ ಅಷ್ಟೋ ಇಷ್ಟೋ ಬೆಳೆ ಆದ್ರೂ ಬರಲಿ ಅಂತ ಕಷ್ಟ ಪಟ್ಟು ಒಂಚೂರು ಇಳುವರಿ ತೆಗೆದಿದ್ದ, ರಾಗಿ ಕಣವನ್ನು ಕಾಯಲು ಹೊಲಕ್ಕೆ ತೆರಳಿದ್ದ, ರಾತ್ರಿ ಛಳಿ ಇರುವ ಹಿನ್ನೆಲೆ ಪ್ಲಾಸ್ಟಿಕ್ ನ ಹೊದ್ದುಕೊಂಡು ಮಲಗಿದ್ದ, ಬೆಳಗಿನ‌ ಜಾವ ಆಹಾರ ಹುಡುಕಿಕೊಂಡು ಬಂದ ಕಾಡಾನೆ ಕಣದ  ಬಳಿ ಮಲಗಿದ್ದ ಪುಟ್ನಂಜನನ್ನು ಸಾಯಿಸಿದೆ.

ಸತ್ತ ಮೇಲು ಹೂಳಕ್ಕೂ ಜಾತಿ ಬೇಕಾ?: ಸಚಿವ ಕೃಷ್ಣ ಭೈರೇಗೌಡ

ಕಳೆದ ಹಲವು ದಿನಗಳಿಂದ ಮೂವತ್ತಕ್ಕು ಹೆಚ್ಚು ಕಾಡಾನೆಗಳು ತಮಿಳುನಾಡು ಕಡೆಯಿಂದ ಬಂದು ಕನಕಪುರ ಸುತ್ತಮುತ್ತಲಿನ ಗ್ರಾಮಗಳ ಸಮೀಒ ಬೀಡು ಬಿಟ್ಟಿದ್ದು ಸಂಜೆ ಆದ್ರು ಸಾಕು ಜನ ಹೊರಬರಲಾರದಂಥ ಭಯ ಶುರುವಾಗಿದೆ. ಕಳೆದ ಮೂರು ತಿಂಗಳಿನಲ್ಲೊಯೇ‌ ಮೂರು ಜನ ರೈತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆನೆಗಳ ದಾಳಿ ನಿಗ್ರಹಿಸುವ ನಿಟ್ಟಿನಲ್ಲಿ ಟಾಸ್ಕ್ ಫೋರ್ಸ್ ಮಾಡಿದ್ರೂ ಕೂಡ, ಆನೆಗಳ ದಾಳಿ ದಿನಗಳೆದಂತೆ ಹೆಚ್ಚಾಗ್ತಿದೆ. ಹೀಗಾಗಿ ಶಾಶ್ವತ ಪರಿಹಾರ ಮಾಡಿಕೊಡಲು ರಾಜ್ಯ ಸರ್ಕಾರಕ್ಕೆ ರೈತರು ಆಗ್ರಹ ಮಾಡಿದ್ದಾರೆ. ಅದ್ರಲ್ಲೂ ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಸಂಸದ ಡಿ ಕೆ ಸುರೇಶ್ ಹೆಚ್ಚು ಆಸಕ್ತಿ ವಹಿಸಿ ರೈತರ ಪ್ರಾಣ ಕಾಪಾಡಬೇಕು ಅಂತ ಮನವಿ ಮಾಡಿದ್ದಾರೆ.

click me!