ಸ್ಮಾರ್ಟ್‌ಸಿಟಿ ಯೋಜನೆಗೆ ರಾಜ್ಯದ ಇನ್ನೂ 4 ನಗರ

By Kannadaprabha News  |  First Published Aug 30, 2021, 7:23 AM IST
  • ಕಲಬುರಗಿ ಸೇರಿದಂತೆ ರಾಜ್ಯದ ನಾಲ್ಕು ಪ್ರಮುಖ ನಗರಗಳನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಪರಿಗಣಿಸುವಂತೆ ಕೇಂದ್ರಕ್ಕೆ ಮನವಿ
  • ಸ್ಮಾರ್ಟ್‌ಸಿಟಿ ಯೋಜನೆ ಬಗ್ಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿಕೆ

ಕಲಬುರಗಿ (ಆ.30): ಕಲಬುರಗಿ ಸೇರಿದಂತೆ ರಾಜ್ಯದ ನಾಲ್ಕು ಪ್ರಮುಖ ನಗರಗಳನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಪರಿಗಣಿಸುವಂತೆ ಕೇಂದ್ರಕ್ಕೆ ಕೋರಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ತಿಳಿಸಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ರಾಜ್ಯದ 7 ನಗರಗಳನ್ನು ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಕೇಂದ್ರ ಪರಿಗಣಿಸಿದೆ. ಇದೀಗ ಮತ್ತೆ ಕಲಬುರಗಿ, ವಿಜಯಪುರ, ಬಳ್ಳಾರಿ ಹಾಗೂ ಮೈಸೂರು ನಗರಗಳನ್ನೂ ಯೋಜನೆಯಲ್ಲಿ ಪರಿಗಣಿಸುವಂತೆ ಕೋರಿದ್ದೇವೆ ಎಂದು ಹೇಳಿದರು. ಇತ್ತೀಚೆಗೆ ಕೇಂದ್ರ ನಗರಾಭಿವೃದ್ಧಿ ಸಚಿವರನ್ನು ತಾವೇ ಭೇಟಿ ಮಾಡಿ ಈ ಪ್ರಸ್ತಾವನೆ ಸಲ್ಲಿಸಿದ್ದಾಗಿ ಹೇಳಿದ ಸಚಿವರು, ಇದನ್ನು ಪರಿಗಣಿಸುವ ಭರವಸೆಯನ್ನು ಕೇಂದ್ರ ನೀಡಿದೆ ಎಂದರು.

Tap to resize

Latest Videos

ಮೈಸೂರು : ಪಾರಂಪರಿಕ ಶೈಲಿಯಲ್ಲೇ ಹೊಸದಾಗಿ ಈ ಕಟ್ಟಡಗಳ ಪುನರ್ ನಿರ್ಮಾಣ

ಕಲಬುರಗಿಯನ್ನು ಯಾವ ಕಾರಣಕ್ಕೂ ನಿರ್ಲಕ್ಷ್ಯ ಮಾಡುವುದಿಲ್ಲ ಎಂದ ಸಚಿವರು, ಇಷ್ಟುದಿನ ಪಾಲಿಕೆಯಲ್ಲಿ ಕೇವಲ ಕಾಂಗ್ರೆಸ್ಸಿಗೆ ಅಧಿಕಾರ ನೀಡಿರುವ ಕಲಬುರಗಿ ಮಂದಿ ಈ ಬಾರಿ ಬದಲಾವಣೆ ಬಯಸಿ ಬಿಜೆಪಿಗೆ ಮತ ನೀಡಿ ಬಹುಮತದಿಂದ ಆರಿಸಿ ತರಲಿ, ಆಗ ಕಲಬುರಗಿಯ ದಿಕ್ಕು ದೆಸೆಯನ್ನೇ ಬಿಜೆಪಿ ಬದಲಿಸುತ್ತದೆ ಎಂದರು.

click me!