ಬಳ್ಳಾರಿ: ಮಂತ್ರಾಲಯಕ್ಕೆ  ಪಾದಯಾತ್ರೆ ತೆರಳುತ್ತಿದ್ದ ಭಕ್ತರ ಮತಾಂತರಕ್ಕೆ ಯತ್ನ? ವಿಡಿಯೋ ವೈರಲ್!

By Ravi Janekal  |  First Published Jul 22, 2024, 8:01 AM IST

ಮಂತ್ರಾಲಯಕ್ಕೆ ಪಾದಯಾತ್ರೆಗೆ ಹೊರಟಿದ್ದ ಭಕ್ತರನ್ನ ಮತಾಂತರ ಮಾಡಲು ಯತ್ನಿಸಿದ್ದಾರೆನ್ನಲಾದ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಜು.18ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ವಿಡಿಯೋ ನೋಡಿಯೋ ಮತಾಂತರ ಯತ್ನಕ್ಕೆ ಸಾಕ್ಷಿ ಎನ್ನುವಂತಿದೆ.


ಬಳ್ಳಾರಿ (ಜು.22): ಮಂತ್ರಾಲಯಕ್ಕೆ ಪಾದಯಾತ್ರೆಗೆ ಹೊರಟಿದ್ದ ಭಕ್ತರನ್ನ ಮತಾಂತರ ಮಾಡಲು ಯತ್ನಿಸಿದ್ದಾರೆನ್ನಲಾದ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಜು.18ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ವಿಡಿಯೋ ನೋಡಿಯೋ ಮತಾಂತರ ಯತ್ನಕ್ಕೆ ಸಾಕ್ಷಿ ಎನ್ನುವಂತಿದೆ.

ಅನ್ಯ ಧರ್ಮದವರು ತಮ್ಮ ಗುರುಗಳ ಬಗ್ಗೆ ಭೋದನೆ ಮಾಡ್ತಿರೋ ದೃಶ್ಯ ಮೊಬೈಲ್‌ನಲ್ಲಿ ಸೆರೆಹಿಡಿದ ಗಾದಿಲಿಂಗಪ್ಪ ಎಂಬುವವರು ಮತಾಂತರ ಮಾಡಲು ಪ್ರಯತ್ನ ಮಾಡಿದ ಹಿನ್ನಲೆ ತೆಕ್ಕಲಕೋಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

Tap to resize

Latest Videos

undefined

ಹಿಂದೂಗಳನ್ನು ಇಸ್ಲಾಂಗೆ ಅಕ್ರಮ ಮತಾಂತರ ಯತ್ನ: 18 ಮಂದಿ ಅರೆಸ್ಟ್‌

ವಿಡಿಯೋದಲ್ಲಿ ಏನಿದೆ?

ಕೇಸರಿ ಧ್ವಜ ಹಿಡಿದುಕೊಂಡು ಜುಲೈ.18ರಂದು ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಿಂದ ಯಾತ್ರಾತ್ರಿಗಳಿಬ್ಬರು ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿ ಮೂಲಕ ಮಂತ್ರಾಲಯಕ್ಕೆ ತೆರಳುತ್ತಿದ್ರು. ಈ ವೇಳೆ ಸ್ಥಳಕ್ಕೆ ಬಂದಿರುವ ತೆಕ್ಕಲಕೋಟೆ ಪಟ್ಟಣದ ಹುಸೇನ್ ಭಾಷಾ (44) , ಸಾಯಿ ಬಾಬಾ (24) ಎಂದು ಗುರುತಿಸಲಾದ ಅನ್ಯಕೋಮಿನ ವ್ಯಕ್ತಿಗಳು ಮಂತ್ರಾಲಯ ಭಕ್ತರಿಗೆ ಮುಸ್ಲಿಂ ಧರ್ಮವನ್ನು ಬೋಧನೆ ಮಾಡಿದ್ದಾರೆ ಆ ಮೂಲಕ ಭಕ್ತರನ್ನು ಮತಾಂತರಕ್ಕೆ ಯತ್ನಿಸಿದ್ದಾರೆಂದು ಆರೋಪಿಸಲಾಗಿದೆ. ಇದೇ ವೇಳೆ ಅನ್ಯಧರ್ಮದವರ ಮಾತು ನಂಬಬೇಡಿ. ಅವರು ನಿಮ್ಮ ಮತಾಂತರ ಮಾಡಲು ಯತ್ನಿಸಿದ್ದಾರೆ ಎಂದು ಯಾತ್ರಾರ್ಥಿಗಳಿಗೆ ಬುದ್ಧಿ ಹೇಳಿದ್ದಾರೆ. ಆದರೆ ಮತಾಂತರಕ್ಕೆ ಯತ್ನಕ್ಕೊಳಗಾದ ಪಾದಯಾತ್ರಿಗಳು ಯಾರು? ಯಾವ ಊರಿನಿಂದ ಹೊರಟಿದ್ದರು ಎಂಬುದು ತಿಳಿದುಬಂದಿಲ್ಲ.

ಓರ್ವನ ಬಂಧನ

ವಿಡಿಯೋ ದಾಖಲೆ ಆಧಾರದ ಮೇಲೆ ಮತಾಂತರ ಯತ್ನ ದೂರು ದಾಖಲಿಸಿಕೊಂಡ ಪೊಲೀಸರು, ಪ್ರಕರಣ ಸಂಬಂಧ ಓರ್ವ ಆರೋಪಿಯನ್ನ ಬಂಧಿಸಿದ ಪೊಲೀಸರು. ಹುಸೇನ್ ಭಾಷ ಎಂಬಾತನನ್ನು ಬಂಧಿಸಿದ್ದಾರೆ, ಮತ್ತೋರ್ವ ಸಾಯಿ ಬಾಬಾ ನಾಪತ್ತೆಯಾಗಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ.

click me!