Emergency service: ಇಂದು ರಾತ್ರಿ 9 ವರೆಗೆ ಆ್ಯಂಬುಲೆನ್ಸ್‌ ಕಮಾಂಡ್‌, ಕಂಟ್ರೋಲ್‌ ರೂಂ ಸ್ಥಗಿತ

Kannadaprabha News   | Kannada Prabha
Published : Jun 26, 2026, 06:05 AM IST
Ambulance command and control room shut down until 9pm tonight

ಸಾರಾಂಶ

ರಾಜ್ಯದ 108 ಮತ್ತು 104 ತುರ್ತು ಸೇವಾ ಕಮಾಂಡ್ ಕೇಂದ್ರವು ಕೆಎಸ್‌ಡಿಸಿ ಕೇಂದ್ರದಲ್ಲಿನ ವಿದ್ಯುತ್ ನಿರ್ವಹಣಾ ಕಾರ್ಯಕ್ಕಾಗಿ ಜೂ. 25 ರಿಂದ 26ರ ರಾತ್ರಿ 9 ಗಂಟೆಯವರೆಗೆ ಸ್ಥಗಿತಗೊಳ್ಳಲಿದೆ. ಈ ಸಮಯದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಆರೋಗ್ಯ ಇಲಾಖೆಯು ಪರ್ಯಾಯ ವ್ಯವಸ್ಥೆ ಮಾಡಿದೆ.

ಬೆಂಗಳೂರು (ಜೂ.26): ರಾಜ್ಯದಲ್ಲಿ 108 ಹಾಗೂ 104 ತುರ್ತು ಪ್ರತಿಕ್ರಿಯೆ ಸೇವೆಗೆ ಸ್ಥಾಪಿಸಿರುವ ಸರ್ಕಾರಿ ಸ್ವಾಮ್ಯದ ಕಮಾಂಡ್‌ ಮತ್ತು ಕಂಟ್ರೋಲ್‌ ಕೇಂದ್ರವು ಜೂ.25 ರಂದು ರಾತ್ರಿ 9 ಗಂಟೆಯಿಂದ ಜೂ.26 ರಂದು ರಾತ್ರಿ 9 ಗಂಟೆವರೆಗೆ ಸ್ಥಗಿತಗೊಳ್ಳಲಿದ್ದು, 108 ಆ್ಯಂಬುಲೆನ್ಸ್‌ಗಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ. 

ಆ್ಯಂಬುಲೆನ್ಸ್‌ ಕಮಾಂಡ್‌, ಕಂಟ್ರೋಲ್‌ ರೂಂ ಸ್ಥಗಿತಕ್ಕೆ ಕಾರಣವೇನು?

ಸರ್ಕಾರಿ ಸ್ವಾಮ್ಯದ ಕಮಾಂಡ್‌ ಮತ್ತು ಕಂಟ್ರೋಲ್‌ ಕೇಂದ್ರವನ್ನು ತಿರುವನಂತಪುರಂನ ಸಿಡ್ಯಾಕ್‌ ಅಭಿವೃದ್ಧಿಪಡಿಸಿರುವ 112 ಎನ್‌ಜಿ-ಇಆರ್‌ಎಸ್‌ಎಸ್‌ ತಂತ್ರಜ್ಞಾನ ಬಳಸಿ ಸ್ಥಾಪಿಸಲಾಗಿದೆ. ಇದರ ಸರ್ವರ್‌ಗಳನ್ನು ಕರ್ನಾಟಕ ರಾಜ್ಯ ಡೇಟಾ ಸೆಂಟರ್‌ನಲ್ಲಿ (ಕೆಎಸ್‌ಡಿಸಿ) ಹೋಸ್ಟ್‌ ಮಾಡಲಾಗಿದೆ. ಈ ಕೆಎಸ್‌ಡಿಸಿ ಕೇಂದ್ರದಲ್ಲಿ ವಿದ್ಯುತ್ ನಿರ್ವಹಣಾ ಕಾರ್ಯಕ್ಕಾಗಿ ಡೇಟಾ ಸೆಂಟರ್‌ನ ಸಂಪೂರ್ಣ ವಿದ್ಯುತ್‌ನ್ನು ಜೂ.26ರ ರಾತ್ರಿ 9 ಗಂಟೆವರೆಗೆ ಸ್ಥಗಿತಗೊಳಿಸಲಾಗುತ್ತಿದೆ.

ಈ ಅವಧಿಯಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಂಡಿದ್ದು, ಎಂದಿನಂತೆ 108 ಸಂಖ್ಯೆಗೆ ಕರೆ ಮಾಡಿ ತುರ್ತು ಆ್ಯಂಬುಲೆನ್ಸ್‌ ಸೇವೆ ಪಡೆಯಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

- 108 ತುರ್ತು ಆ್ಯಂಬುಲೆನ್ಸ್‌ ಸೇವೆ ಅಬಾಧಿತ

- ಪರ್‍ಯಾಯ ವ್ಯವಸ್ಥೆ ಮಾಡಿದ್ದೇವೆ: ಆರೋಗ್ಯ ಇಲಾಖೆ

108 ಉಚಿತ ತುರ್ತು ಆ್ಯಂಬುಲೆನ್ಸ್‌ ಸೇವೆಗೆ ಬರುವ ಎಲ್ಲ ಕರೆಗಳನ್ನೂ 108 ಕಮಾಂಡ್‌ ಮತ್ತು ಕಂಟ್ರೋಲ್‌ ರೂಂ ಮೂಲಕ ಸ್ವೀಕರಿಸಿ ನಿರ್ವಹಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನಟ ದರ್ಶನ್‌ಗೆ ಸಾಲು ಸಾಲು ಸಂಕಷ್ಟ:ಪುತ್ರ ವಿನೀಶ್‌ ಇದ್ದ ಎನ್ನಲಾದ ಕಾರು ಅಪಘಾತ!
ಕ್ಷಮೆ ಕೇಳಿದ್ರೂ ಆ ಮಾತು ಅಳಿಸಿ ಹೋಗಲ್ಲ!; ನಟಿ ರನ್ಯಾ ರಾವ್ ಕುರಿತ ಯತ್ನಾಳ್ ಅಶ್ಲೀಲ ಹೇಳಿಕೆಗೆ ಹೈಕೋರ್ಟ್ ತೀವ್ರ ತರಾಟೆ!