ಅಂಬರೀಶ್ ಅಂತ್ಯಕ್ರಿಯೆಗೆ ತಕರಾರು: ವಿವಾದ ಹೈಕೋರ್ಟ್ ಅಂಗಳಕ್ಕೆ

By Web DeskFirst Published Nov 25, 2018, 7:26 PM IST
Highlights

ಅಂಬರೀಶ್‌ ಅವರ ಅಂತಿಮಸಂಸ್ಕಾರವನ್ನು ಕಂಠೀರವ ಸ್ಟುಡಿಯೋದಲ್ಲಿ ಮಾಡುವುದಾಗಿ ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಮಾಡಬಾರದು ಎಂದು ವಕೀಲರೊಬ್ಬರು ತಕರಾರು ತೆಗೆದಿದ್ದಾರೆ.

ಬೆಂಗಳೂರು, (ನ.25): ಮಂಡ್ಯದ ಗಂಡು ಅಂಬರೀಶ್ ಅಗಲಿಕೆಯ ನೋವಲ್ಲಿ ಇಡೀ ಕರ್ನಾಟಕ ಕಣ್ಣೀರಿಡುತ್ತಿದೆ. ಈ ಮಧ್ಯೆ ಅಂಬರೀಶ್ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದಂತೆ ಹೊಸದೊಂದು ವಿವಾದ ಸೃಷ್ಟಿಯಾಗಿರುವುದು ವಿಪರ್ಯಾಸ. 

ಅಂಬಿ ಅಂತ್ಯಸಂಸ್ಕಾರ ಕಂಠೀರವದಲ್ಲಿ ಬೇಡ್ವಂತೆ: ಕೇಳಿ ಈ ವಕೀಲಪ್ಪನ ಅಂತೆ ಕಂತೆ!

ನಾಳೆ ಅಂದರೆ ಸೋಮವಾರ ಕಂಠೀರವ ಸ್ಟುಡಿಯೋನಲ್ಲಿ ಡಾ. ರಾಜ್ ಕುಮಾರ್ ಅವರ ಸಮಾಧಿ ಪಕ್ಕದಲ್ಲಿ ಅಂಬರೀಶ್ ಅವರ ಅಂತ್ಯಕ್ರಿಯೆಗೆ ಈಗಾಗಲೇ ನಿರ್ಧರಿಸಲಾಗಿದ್ದು,ಇದಕ್ಕೆ ಬೇಕಾದ ಎಲ್ಲ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ.

ಆದ್ರೆ ಇದಕ್ಕೆ ವಕೀಲ ಆರ್‌.ಎಲ್‌.ಎನ್. ಮೂರ್ತಿ ಎನ್ನುವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಕಲೆಗೆ ಬೆಲೆ ಕೊಡಬೇಕಾದ ಜಾಗದಲ್ಲಿ ಅಂತ್ಯ ಸಂಸ್ಕಾರ ನಡೆಸುವುದು ಸರಿಯಲ್ಲ. ಇದು ಕಾನೂನು ಉಲ್ಲಂಘನೆ ಎಂದು ಮೂರ್ತಿ ಅವರ ತಕರಾರು.

ಇದೀಗ ಈ ವಿವಾದ ಹೈಕೋರ್ಟ್ ಅಂಗಳಕ್ಕೆ ಹೋಗಿದ್ದು, ನಾಳೆ [ಸೋಮವಾರ] ಕನಕ ಜಯಂತಿ ಸರ್ಕಾರಿ ರಜೆ ಇದ್ದರೂ ಕೂಡ ಅಂಬಿ ಅಂತ್ಯಕ್ರಿಯೆ ಬಗ್ಗೆ ವಿಚಾರಣೆ ನಡೆಸಲಿದೆ.

ಸೋಮವಾರ ಅಂಬಿ ಅಂತ್ಯಕ್ರಿಯೆ ಇರುವುದರಿಂದ ರಜೆ ದಿನವೇ ಕೋರ್ಟ್ ವಿಚಾರಣೆ ನಡೆಸುವುದಕ್ಕೆ ಓಕೆ ಎಂದಿರುವುದು ವಿಶೇಷ.

click me!