ಹೊಸ ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ನೇಮಕ: ಅಧಿಕೃತ ಘೋಷಣೆಯೊಂದೇ ಬಾಕಿ

By Suvarna NewsFirst Published Jan 30, 2020, 6:17 PM IST
Highlights

ಕರ್ನಾಟಕದ ಹಾಲಿ ಡಿಜಿ & ಐಜಿಪಿ ನೀಲಮಣಿ ಎನ್.ರಾಜು ಅವರ ಅಧಿಕಾರವಧಿ ನಾಳೆ ಅಂದ್ರೆ ಜನವರಿ 31ಕ್ಕೆ ಕೊನೆಗೊಳ್ಳಲಿದೆ. ಇದರಿಂದ ಹೊಸ ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಹೆಸರು ಅಂತಿಮವಾಗಿದ್ದು, ಅಧಿಕೃತ ಆದೇಶವೊಂದೇ ಬಾಕಿ ಇದೆ. 

ಬೆಂಗಳೂರು, (ಜ.30): ನೂತನ ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಹುದ್ದೆಗೆ ಹಿರಿಯ ಐಪಿಎಸ್ ಅಧಿಕಾರಿ ಎ.ಎಂ.ಪ್ರಸಾದ್ ನೇಮಕ ಖಚಿತ ಎನ್ನಲಾಗುತ್ತಿದೆ.

"

 ಕರ್ನಾಟಕದ ಹಾಲಿ ಡಿಜಿ & ಐಜಿಪಿ ನೀಲಮಣಿ ಎನ್.ರಾಜು ಅವರ ಅಧಿಕಾರವಧಿ ನಾಳೆ ಅಂದ್ರೆ ಜನವರಿ 31ಕ್ಕೆ ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇವರ ಸ್ಥಾನಕ್ಕೆ ಪ್ರವೀಣ್ ಸೂದ್ ಹಾಗೂ  ಎ.ಎಂ.ಪ್ರಸಾದ್ ನಡುವೆ ಪೈಟೋಟಿ ನಡೆದಿದೆ.

ಎರಡು ದಿನದಲ್ಲಿ ಹಾಲಿ ಡಿಜಿಪಿ ನಿವೃತ್ತಿ: ಹೊಸಬರ ಆಯ್ಕೆ ಇನ್ನೂ ಇಲ್ಲ!

ಸೇವಾ ಹಿರಿತನಕ್ಕೆ ಮಣೆ ಹಾಕಲು ರಾಜ್ಯ ಸರ್ಕಾರ ಮುಂದಾಗಿದ್ದು, ಇವರಿಬರ ಪೈಕಿ ಎ.ಎಂ.ಪ್ರಸಾದ್ ನೇಮಕ ಬಹುತೇಕ ಖಚಿತವೆಂದು ಸರ್ಕಾರ ಮೂಲಗಳು ಹೇಳುತ್ತಿವೆ.

ಅಂತಿಮವಾಗಿ ಯಾರು ಆಗುತ್ತಾರೆ ಎನ್ನುವುದು ಇಂದು ರಾತ್ರಿ ಅಥವಾ ನಾಳೆ (ಶುಕ್ರವಾರ) ಬೆಳಗ್ಗೆ ಅಧಿಕೃತ ಆದೇಶ ಹೊರಬೀಳಲಿದೆ. 1985 ರ ಬ್ಯಾಚ್ ನ ಬಿಹಾರ ಮೂಲದವರಾಗಿರುವ ಪ್ರವೀಣ್‌ ಸೂದ್‌ ಪ್ರಸ್ತುತ  ಸಿಐಡಿ ಡಿಜಿಪಿ ಆಗಿದ್ದಾರೆ.

click me!