ಉಳುಮೆ ಮಾಡಿಕೊಂಡಿರ್ತೀನಿ, ರೇಸಲ್ಲಿ ನಾನಿಲ್ಲ!: ಕಣದಿಂದ ಹಿಂದೆ ಸರಿದ್ರಾ ಡಿಕೆಶಿ?

By Suvarna NewsFirst Published Jan 16, 2020, 8:49 AM IST
Highlights

ಕನಕಪುರದಲ್ಲಿ ಉಳುಮೆ ಮಾಡಿಕೊಂಡಿರ್ತೀನಿ| ದಿಲ್ಲಿಯಲ್ಲಿ ರಾಜಕಾರಣ ಮಾಡೋವ್ರು ಮಾಡ್ಕೊಳ್ಳಲಿ| ಕೆಪಿಸಿಸಿ ರೇಸಲ್ಲಿ ನಾನಿಲ್ಲ: ಡಿಕೆಶಿ

ಬೆಂಗಳೂರು[ಜ.16]: ಸದ್ಯ ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಆಕಾಂಕ್ಷಿಗಳ ಪಟ್ಟಿಯಲ್ಲೂ ನನ್ನ ಹೆಸರಿಲ್ಲ. ದೆಹಲಿಯಲ್ಲಿ ರಾಜಕಾರಣ ಮಾಡುವವರು ಮಾಡಿಕೊಳ್ಳಲಿ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.

ಬುಧವಾರ ಬೆಂಗಳೂರು ಹಾಗೂ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ, ಆಕಾಂಕ್ಷಿಗಳ ಪಟ್ಟಿಯಲ್ಲಿ ನನ್ನ ಹೆಸರೂ ಇಲ್ಲ. ನಾನು ಯಾವುದೇ ಲಾಬಿಯನ್ನೂ ನಡೆಸುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಹೈಕಮಾಂಡ್‌ಗೆ ಬಿಟ್ಟವಿಚಾರ. ನಾನಂತೂ ಸದ್ಯ ರೇಸ್‌ನಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಅತ್ತ ದೆಹಲಿಯಲ್ಲಿ ಸಿದ್ದರಾಮಯ್ಯ ಆಟ: ಇತ್ತ ಸಿಡಿದೆದ್ದ ಡಿಕೆ ಶಿವಕುಮಾರ್

ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹಲವು ಬಾರಿ ಹೇಳಿದ್ದೇನೆ. ಆಕಾಂಕ್ಷಿಗಳ ಪಟ್ಟಿಯಲ್ಲೂ ಸಹ ನನ್ನ ಹೆಸರಿಲ್ಲ. ಹೀಗಾಗಿ ನಾನು ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿಯೇ ಇಲ್ಲ. ನಾನು ದನ ಕರು ಮೇಯಿಸಿಕೊಂಡು, ಕನಕಪುರದಲ್ಲಿ ಹೊಲ ಉಳುವ ಕೆಲಸ ಮಾಡಿಕೊಂಡಿರುತ್ತೇನೆ. ದೆಹಲಿಯಲ್ಲಿ ರಾಜಕಾರಣ ಮಾಡುವವರು ಮಾಡಲಿ ಎಂದು ಹೇಳಿದರು.

ನಾನು ರಾಜಕೀಯದಿಂದ ದೂರವಾಗಿ ಕನಕಪುರದಲ್ಲಿ ಹೊಲ ಉಳುವ ಕೆಲಸ ಮಾಡುತ್ತಿದ್ದೇನೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ನಾನು ಕನಕಪುರದಲ್ಲಿ ಹೊಲ ಉಳುವ ಕೆಲಸ ಮಾಡಿಕೊಂಡಿರುತ್ತೇನೆ. ಹೀಗಾಗಿ ನಾನು ಆಕಾಂಕ್ಷಿಯೂ ಅಲ್ಲ, ಪಟ್ಟಿಯಲ್ಲಿ ನನ್ನ ಹೆಸರೂ ಇಲ್ಲ ಎಂದರು.

ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ದು ಅಚ್ಚರಿ ಹೇಳಿಕೆ, ಡಿಕೆಶಿಗೆ ಮರ್ಮಾಘಾತ.!

ಅಧ್ಯಕ್ಷ ಸ್ಥಾನ ಈಗಲೂ ಖಾಲಿ ಇಲ್ಲ:

ಹೆಚ್ಚು ದಿನ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹೆಚ್ಚು ಕಾಲ ಖಾಲಿ ಇರಬಾರದು ಎಂಬ ದಿನೇಶ್‌ ಗುಂಡೂರಾವ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ದಿನೇಶ್‌ ಗುಂಡೂರಾವ್‌ ಅವರು ಪಕ್ಷದ ಅಧ್ಯಕ್ಷ ಸ್ಥಾನದ ಬಗ್ಗೆ ಹೈಕಮಾಂಡ್‌ ಬಳಿ ಮಾತನಾಡಲಿ. ನನ್ನ ಪ್ರಕಾರ ಅಧ್ಯಕ್ಷ ಸ್ಥಾನ ಇನ್ನೂ ಖಾಲಿ ಆಗಿಲ್ಲ. ಅವರ ರಾಜೀನಾಮೆ ವಿಚಾರವಾಗಿ ಪಕ್ಷದವರು ಏನು ತೀರ್ಮಾನ ಮಾಡುತ್ತಾರೆ ಎಂಬುದು ಗೊತ್ತಿಲ್ಲ. ಪಕ್ಷದಲ್ಲಿ ಅವರು ತಮ್ಮ ಕರ್ತವ್ಯವನ್ನು ಮಾಡಿದ್ದಾರೆ ಎಂದು ಹೇಳಿದರು.

click me!