ರೈಲ್ವೆ ಎಂಜಿನಿಯರ್‌ ಬಳಿ 2 ಕೋಟಿ ರೂ. ಅಕ್ರಮ ಆಸ್ತಿ!

By Suvarna NewsFirst Published Jan 16, 2020, 8:21 AM IST
Highlights

ರೈಲ್ವೆ ಎಂಜಿನಿಯರ್‌ ಬಳಿ .2 ಕೋಟಿ ಅಕ್ರಮ ಆಸ್ತಿ| ಗುತ್ತಿಗೆದಾರರಿಂದ ಲಂಚ ಪಡೆದ ಆರೋಪ| ಸಿಬಿಐ ಅಧಿಕಾರಿಗಳಿಂಂದ ಪ್ರಕರಣ ದಾಖಲು

 ಬೆಂಗಳೂರು[ಜ.16]: ಅಕ್ರಮ ಆಸ್ತಿ ಗಳಿಕೆ ಆರೋಪದ ಮೇರೆಗೆ ನೈಋುತ್ಯ ರೈಲ್ವೆ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್‌(ಕಾಮಗಾರಿ) ಘನಶ್ಯಾಮ್‌ ಪ್ರಧಾನ್‌ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.

ಪ್ರಾಥಮಿಕ ತನಿಖೆಯಲ್ಲಿ ಘನಶ್ಯಾಮ್‌ ಅಂದಾಜು .2 ಕೋಟಿಗಿಂತ ಹೆಚ್ಚು ಅಕ್ರಮ ಆಸ್ತಿ ಹೊಂದಿರುವುದು ಬೆಳಕಿಗೆ ಬಂದಿದೆ. ತಮ್ಮ ಮತ್ತು ಕುಟುಂಬಸ್ಥರ ಹೆಸರಲ್ಲಿ 2010ರಿಂದ 2019ರ ಅವಧಿವರೆಗೆ ಕೋಟ್ಯಂತರ ರುಪಾಯಿ ಮೌಲ್ಯದ ಅಕ್ರಮ ಆಸ್ತಿ ಗಳಿಕೆ ಮಾಡಿದ್ದಾರೆ ಎಂಬ ಆರೋಪ ಇದೆ. ಈ ಕುರಿತು ತನಿಖೆ ಮುಂದುವರಿಸಲಾಗಿದ್ದು, ಆರೋಪ ಸಾಬೀತಾದರೆ ಸೂಕ್ತ ಕ್ರ ಜರುಗಿಸುವುದಾಗಿ ಸಿಬಿಐ ತಿಳಿಸಿದೆ.

ಮೈಸೂರು, ಹಾವೇರಿ, ದಾವಣಗೆರೆ, ಹಾವೇರಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿರುವ ಘನಶ್ಯಾಮ್‌ ಪ್ರಸ್ತುತ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೈಸೂರು ಮತ್ತು ಬೆಂಗಳೂರಿನಲ್ಲಿ ಅಪಾರ ಪ್ರಮಾಣದಲ್ಲಿ ಆಸ್ತಿಯನ್ನು ಮಾಡಿದ್ದು, ಅಪಾರ ಪ್ರಮಾಣದಲ್ಲಿ ನಗ-ನಾಣ್ಯ ಹೊಂದಿರುವುದು ಗೊತ್ತಾಗಿದೆ. ಚರಾಸ್ತಿ ಮತ್ತು ಸ್ಥಿರಾಸ್ತಿಯು .2 ಕೋಟಿಗಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ. ತನಿಖೆಯ ಬಳಿಕ ನಿಖರವಾದ ಅಕ್ರಮ ಆಸ್ತಿಯ ಮೌಲ್ಯ ತಿಳಿದು ಬರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

1988ರಲ್ಲಿ ರೈಲ್ವೆ ಇಲಾಖೆಗೆ ಸೇರಿದ್ದ ಘನಶ್ಯಾಮ್‌, ಒಡಿಶಾದ ಕೊರಪುತ್‌ನಲ್ಲಿ ಕರ್ತವ್ಯ ಪ್ರಾರಂಭಿಸಿದರು. ನಂತರ 1996ರಲ್ಲಿ ಮೈಸೂರಿಗೆ ವರ್ಗಾವಣೆಗೊಂಡು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇಲಾಖೆಯ ವಿವಿಧ ಕಾಮಗಾರಿ ಹೆಸರಲ್ಲಿ ಗುತ್ತಿಗೆದಾರರಿಂದ ಲಂಚ ಪಡೆದುಕೊಳ್ಳುತ್ತಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ ಎಂದು ತಿಳಿಸಿದ್ದಾರೆ

click me!