ಬಿಜೆಪಿಯ ಸುನಿಲ್ ಕುಮಾರ್, ಸಚಿವರಿಗೆ ಜನರ ಮೇಲೆ ಪ್ರೀತಿಯೋ, ಪ್ರಾಣಿಗಳ ಪ್ರೀತಿಯೋ ಎಂದರು. ಮತ್ತೊಬ್ಬ ಸದಸ್ಯ ಆರಗ ಜ್ಞಾನೇಂದ್ರ, ವನ್ಯ ಜೀವಿ ಸಂಘರ್ಷ ರಾಜ್ಯದ ಎಲ್ಲ ಕಡೆ ಹೆಚ್ಚುತ್ತಿದೆ. ಹಿಂದೆ ರಾಜಾಳ್ವಿಕೆಯಲ್ಲಿ ವನ್ಯಪ್ರಾಣಿಗಳು ಹೆಚ್ಚಾದಾಗ ಬೇಟೆಯಾಡಲು ಅವಕಾಶವಿತ್ತು.
ವಿಧಾನಸಭೆ (ಡಿ.08): ಬಿಜೆಪಿಯ ಸುನಿಲ್ ಕುಮಾರ್, ಸಚಿವರಿಗೆ ಜನರ ಮೇಲೆ ಪ್ರೀತಿಯೋ, ಪ್ರಾಣಿಗಳ ಪ್ರೀತಿಯೋ ಎಂದರು. ಮತ್ತೊಬ್ಬ ಸದಸ್ಯ ಆರಗ ಜ್ಞಾನೇಂದ್ರ, ವನ್ಯ ಜೀವಿ ಸಂಘರ್ಷ ರಾಜ್ಯದ ಎಲ್ಲ ಕಡೆ ಹೆಚ್ಚುತ್ತಿದೆ. ಹಿಂದೆ ರಾಜಾಳ್ವಿಕೆಯಲ್ಲಿ ವನ್ಯಪ್ರಾಣಿಗಳು ಹೆಚ್ಚಾದಾಗ ಬೇಟೆಯಾಡಲು ಅವಕಾಶವಿತ್ತು. ಆ ಮಾದರಿಯಲ್ಲಿ ವನ್ಯಜೀವಿಗಳ ದಾಳಿ ತಡೆಗೆ ಸರ್ಕಾರ ಕೊಂಚ ನಿಯಮ ಸಡಿಲ ಮಾಡಬೇಕು ಎಂದು ವಾದಿಸಿದರು.
ಇದಕ್ಕೆ ಸಚಿವರು, ಬೆಂಗಳೂರಿಗೆ ಬಂದ ಚಿರತೆ ಸೆರೆ ಹಿಡಿಯುವಾಗ 4 ಜನರ ಮೇಲೆ ದಾಳಿ ಮಾಡಿತು. ಹಾಗಾಗಿ ಅದಕ್ಕೆ ಗುಂಡು ಹಾರಿಸಬೇಕಾಯಿತು. ಆದರೆ, ಜವಾಬ್ದಾರಿಯುತ ಸರ್ಕಾರವಾಗಿ ಮನುಷ್ಯರ ಜೀವ, ಜೀವನೋಪಾಯಕ್ಕೂ ತೊಂದರೆ ಆಗದಂತೆ ಜೊತೆಗೆ ವನ್ಯಪ್ರಾಣಿಗಳನ್ನೂ ಸಂರಕ್ಷಿಸುವ ಕೆಲಸ ಮಾಡಬೇಕಾಗುತ್ತದೆ. ಅದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸೈಕಲ್ ವಿತರಿಸಿ: ಶಾಸಕ ಪ್ರದೀಪ್ ಈಶ್ವರ್ ಮನವಿ
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾದರಿ: ತಾಲೂಕಿಗೆ ಮಂಜೂರಾಗಿರುವ 344 ಕೋಟಿ ರು. ಅನುದಾನದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಸ್ಥಳೀಯವಾಗಿ ಎದುರಾಗಿರುವ ನೀರಿನ ಅಡಚಣೆಗೆ ಪರಿಹಾರವನ್ನು ಕಂಡುಕೊಳ್ಳಲು ಸಹಕಾರಿಯಾಗಿದೆ. ನರಗುಂದ ತಾಲೂಕಿನಲ್ಲಿ ಕಳೆದ ಐದು ವರ್ಷದಿಂದ 3 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾದರಿಯಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಬೆಳಗಾವಿ ಅಧಿವೇಶನಕ್ಕೆ ಹೋಗುವ ಮಾರ್ಗದಲ್ಲಿ ತಾಲೂಕಿಗೆ ಮಂಜೂರಾಗಿರುವ 344 ಕೋಟಿ ರು. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಹಿಡಿದಿರುವ ಗುತ್ತಿಗೆದಾರರು ಮತ್ತು ಅಧಿಕಾರಿಗಳೊಂದಿಗೆ ನರಗುಂದ, ರೋಣ ಮತ್ತು ಗಜೇಂದ್ರಗಡ ತಾಲೂಕುಗಳಿಗೆ ಶುದ್ಧೀಕೃತ ಕುಡಿಯುವ ನೀರನ್ನು ಒದಗಿಸುವ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳೊಂದಿಗೆ ಮಾಹಿತಿಯನ್ನು ಪಡೆದರು.
ನರಗುಂದಕ್ಕೆ ಸುಮಾರು 30 ಕಿ.ಮೀ. ದೂರದ ಮಲಪ್ರಭಾ ನದಿಯಿಂದ ಶುದ್ಧೀಕರಣ ಘಟಕಕ್ಕೆ ನೀರನ್ನು ತಂದು ಪ್ರತಿದಿನ ₹3.60 ಲಕ್ಷ ಜನರಿಗೆ ತಲಾ 75 ಲೀಟರ್ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ತಾಲೂಕಿಗೆ ಮಂಜೂರಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸ್ಥಳೀಯವಾಗಿ ಎದುರಾಗಿರುವ ಅಡಚಣೆಗೆ ನರಗುಂದದ ಈ ಯೋಜನೆಯಿಂದ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಮಾದರಿಯಾಗಿದೆ.
ಸ್ಯಾಂಡಲ್‌ವುಡ್‌ಗೂ ಬಂತು ನಂದಿ ಅವಾರ್ಡ್: ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ-ನಿರ್ದೇಶಕ ಪ್ರಶಸ್ತಿ!
5 ಎಕರೆ ಪ್ರದೇಶದಲ್ಲಿ ಟ್ರೀಟ್‍ಮೆಂಟ್ ಪ್ಲಾಂಟ್ ನಿರ್ಮಿಸಿ ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸಲಾದ ಈ ಯೋಜನೆಯಲ್ಲಿ ಪ್ರತಿ ಗ್ರಾ.ಪಂ. ಮಟ್ಟದಲ್ಲಿ ನೀರಿನ ಟ್ಯಾಂಕ್‍ಗೆ ಪೈಪ್ ಮೂಲಕ ನೀರನ್ನು ಒದಗಿಸುವ ಮೂಲಕ ಶುದ್ಧ ನೀರನ್ನು ಒದಗಿಸಲಾಗುತ್ತಿದೆ. ತೀರ್ಥಹಳ್ಳಿ ತಾಲೂಕಿನ 36 ಗ್ರಾ.ಪಂ. ವ್ಯಾಪ್ತಿಯ 1.30 ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶಿತ ಕುಡಿಯುವ ನೀರಿನ ಯೋಜನೆಗೂ ಮಾದರಿಯಾಗಿದೆ ಎಂದಿದ್ದಾರೆ. ಶುದ್ಧ ಕುಡಿಯುವ ನೀರಿನಿಂದ ಜನರ ಆರೋಗ್ಯ ಮಾತ್ರವಲ್ಲದೇ ಆಯಸ್ಸು ಕೂಡಾ ವೃದ್ಧಿಯಾಗುತ್ತದೆ ಎಂದರು. ಶಾಸಕರೊಂದಿಗೆ ತಾಲೂಕಿನ ಯೋಜನೆಯ ಗುತ್ತಿಗೆದಾರರಾಗಿರುವ ಇಬ್ರಾಹಿಂ ಷರೀಫ್ ಹಾಗೂ ಡಿ.ಎಸ್. ಅಬ್ದುಲ್ ರಹಮಾನ್ ಇತರರು ಇದ್ದರು.