ಗಡಿಭಾಗದ ಕನ್ನಡ ಧ್ವನಿಯಾಗಿದ್ದ 'ಕನ್ನಡ ಮಠ'ದ ಅಲ್ಲಮಪ್ರಭು ಸ್ವಾಮೀಜಿ ಲಿಂಗೈಕ್ಯ

By Ravi Janekal  |  First Published Nov 12, 2023, 6:41 PM IST

ಅವರು ಸರ್ವಸಂಘ ಪರಿತ್ಯಾಗಿಗಳಾಗಿದ್ದರೂ ಸಹ ಕನ್ನಡಕ್ಕಾಗಿ ಅವರ ಮನ ಮಿಡಿಯುತ್ತಿತ್ತು. ಅವರು ಕನ್ನಡ ತೇರು ಎಳೆಯುತ್ತಿದ್ದರೆ ಗಡಿಯಲ್ಲಿ ಕನ್ನಡ ಡಿಂಡಿಮ ಮೊಳಗುತ್ತಿತ್ತು. ಅವರ ಕನ್ನಡ ಪ್ರೇಮಕ್ಕೆ ತಲೆಬಾಗದವರೇ ಇಲ್ಲ. ಅಂತಹ ಗಡಿಭಾಗದ ಆ ಕನ್ನಡ ಧ್ವನಿ ಇಂದು ಮೌನವಾಗಿದೆ.


ವರದಿ: ಮುಷ್ತಾಕ್ ಪೀರ್ಜಾದೆ:

ಚಿಕ್ಕೋಡಿ (ನ.12): ಅವರು ಸರ್ವಸಂಘ ಪರಿತ್ಯಾಗಿಗಳಾಗಿದ್ದರೂ ಸಹ ಕನ್ನಡಕ್ಕಾಗಿ ಅವರ ಮನ ಮಿಡಿಯುತ್ತಿತ್ತು. ಅವರು ಕನ್ನಡ ತೇರು ಎಳೆಯುತ್ತಿದ್ದರೆ ಗಡಿಯಲ್ಲಿ ಕನ್ನಡ ಡಿಂಡಿಮ ಮೊಳಗುತ್ತಿತ್ತು. ಅವರ ಕನ್ನಡ ಪ್ರೇಮಕ್ಕೆ ತಲೆಬಾಗದವರೇ ಇಲ್ಲ. ಅಂತಹ ಗಡಿಭಾಗದ ಆ ಕನ್ನಡ ಧ್ವನಿ ಇಂದು ಮೌನವಾಗಿದೆ.

Latest Videos

undefined

ಗಡಿಭಾಗದ ಕನ್ನಡ ಧ್ವನಿಯಾಗಿದ್ದ ಅಲ್ಲಮ ಪ್ರಭು ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. ಸ್ವಾಮೀಜಿ ಲಿಂಗೈಕ್ಯರಾದ ಸುದ್ದಿ ತಿಳಿದು ಶೋಕ ಸಾಗರದಲ್ಲಿ ಮುಳುಗಿರುವ ಭಕ್ತ ವೃಂದ. ಬಿಕೋ ಎನ್ನುತ್ತಿರುವ ಗ್ರಾಮದ ಬೀದಿಗಳು. 

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮ‌ದ 'ಕನ್ನಡದ ಮಠ' ಎಂದೇ ಪ್ರಖ್ಯಾತಿ ಹೊಂದಿದ್ದ ಚಿಂಚಣಿಯ ಅಲ್ಲಮಪ್ರಭು ಸಿದ್ಧಸಂಸ್ಥಾನ ಮಠದ ಶ್ರೀ ಅಲ್ಲಮಪ್ರಭು ಮಹಾಸ್ವಾಮೀಜಿಗಳ ಆರೋಗ್ಯ ಇತ್ತೀಚೆಗೆ ಹದಗೆಟ್ಟಿತ್ತು. ಮಧುಮೇಹ ಹಾಗೂ ಕಿಡ್ನಿ ಸಮಸ್ಯೆಯಿಂದ ಅಲ್ಲಮಪ್ರಭು ಸ್ವಾಮೀಜಿಗಳು ಬಳಲುತ್ತಿದ್ದರು. ಹೀಗಾಗಿ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಬೆಳಗಿನ ಜಾವ  ಆಸ್ಪತ್ರೆಯಲ್ಲಿ ಲಿಂಗೈಕ್ಯರಾಗಿದ್ದಾರೆ.

ಪತ್ರಕರ್ತರು ವೃತ್ತಿ ಘನತೆ ಎತ್ತಿ ಹಿಡಿಯಬೇಕು: ಸಚಿವ ಸತೀಶ್‌ ಜಾರಕಿಹೊಳಿ

 'ಕನ್ನಡದ ಸ್ವಾಮೀಜಿ' ಎಂದೇ ಖ್ಯಾತರಾಗಿದ್ದ ಚಿಕ್ಕೋಡಿ ತಾಲೂಕಿನ ಚಿಂಚಣಿಯ ಅಲ್ಲಮಪ್ರಭು ಸಿದ್ಧಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ(63) ಧಾರ್ಮಿಕ ಜಾಗೃತಿಯೊಂದಿಗೆ ಗಡಿನಾಡಿನಲ್ಲಿ ನಾಡು-ನುಡಿ ರಕ್ಷಣೆಗಾಗಿ ಹಲವು ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಜನರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಿದ್ದರು. ಶ್ರೀಮಠದ ವತಿಯಿಂದ ಪ್ರತಿವರ್ಷ ಕರ್ನಾಟಕ  ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದರು. ನಾಡಿನ ಹೆಸರಾಂತ ಸಾಹಿತಿಗಳು, ವಿದ್ವಾಂಸರು, ಕಲಾವಿದರನ್ನು ಮಠದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಹ್ವಾನಿಸಿ, ಗಡಿ ನೆಲದಲ್ಲಿ ಕನ್ನಡದ ಕಂಪು ಸೂಸಿದ್ದರು. 

ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡದ ಕೃತಿಗಳನ್ನು ಲೋಕಾರ್ಪಣೆಗೊಳಿಸುತ್ತಿದ್ದ ಸ್ವಾಮೀಜಿ ಈವರೆಗೆ 52 ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ್ಪಿಸಿದ ಕೀರ್ತಿ ಅವರದ್ದು. ಅಷ್ಟೇ ಅಲ್ಲದೇ ಕನ್ನಡ. ಮರಾಠಿ ಬಾಂಧವ್ಯ ಗಟ್ಟಿಗೊಳಿಸುವಲ್ಲಿಯೂ ಶ್ರೀಗಳ ಕಾರ್ಯ ಅನನ್ಯವಾಗಿತ್ತು‌. ಅಲ್ಲಮಪ್ರಭು ಸ್ವಾಮೀಜಿ ಅಂತಿಮ ದರ್ಶನಕ್ಕೆ ಗದಗ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ, ನಿಜಗುಣಾನಂದ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ,  ನಿಡಸೋಸಿ ಶ್ರೀಗಳು ಸೇರಿ ಹಲವು ಮಠಾಧೀಶರು ಸ್ವಾಮೀಜಿ ಅಂತಿಮ ದರ್ಶನ ಪಡೆದು ಶ್ರೀಗಳ ಕನ್ನಡ ಸೇವೆ ಬಗ್ಗೆ ಮೆಲಕು ಹಾಕಿದ್ರು. 

ಅಲ್ಲಮ ಪ್ರಭು ಸ್ವಾಮೀಜಿಗಳು ಗಡಿಯಲ್ಲಿ ಕನ್ನಡದ ಧ್ವನಿಯಾಗಿದ್ದರು. ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಮಠದ ವತಿಯಿಂದ ಆಚರಿಸಿ ಮಠದಲ್ಲಿ ಕನ್ನಡ ತೇರು ಎಳೆಯುತ್ತಿದ್ದರು. ಕಳೆದ ೩೦ ವರ್ಷಗಳಿಂದ ಸ್ವಾಮೀಜಿ ಕನ್ನಡಕ್ಕೆ ಕನ್ನಡತನಕ್ಕೆ ಗಡಿಯಲ್ಲಿ ಹೆಸರಾಗಿದ್ದರು. ಶ್ರೀಮಠದಿಂದ 50ಕ್ಕೂ ಹೆಚ್ಚು ಮೌಲಿಕ ಗ್ರಂಥಗಳನ್ನು ಸ್ವಾಮೀಜಿಗಳು ಲೋಕಾರ್ಪಣೆ ಮಾಡಿದ್ದರು. ಶ್ರೀಮಠದ ವತಿಯಿಂದ ಸಿದ್ಧಪಡಿಸಿದ ಸಿರಿಗನ್ನಡ ತೇರಿನ ಮೇಲೆ ವಿವಿಧ ಕನ್ನಡ ಸಾಹಿತಿಗಳು, ಕನ್ನಡದ ಘೋಷವಾಖ್ಯಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಫೋಟೊಗಳ ಕೆತ್ತನೆ ಮಾಡಿಸಿದ್ದರು. ಆ ಮೂಲಕ ಮಠಗಳು ಸಹ ಕನ್ನಡ ಪ್ರೇಮವನ್ನು ಮೆರೆಯಬಹುದು ಎಂದು ಸ್ವಾಮೀಜಿಗಳು ಮೆರೆದಿದ್ದರು. ಇಂದು ಅವರ ಅಗಲಿಕೆಯಿಂದ ಆಧ್ಯಾತ್ಮ ಕ್ಷೇತ್ರ ಹಾಗೂ ಕನ್ನಡಪರ ಕೆಲಸಗಳಿಗೆ ದೊಡ್ಡ ನಷ್ಟವಾಗಿದೆ. 

ಬೆಳಗಾವಿ: ಸೀರೆ ಕದಿಯುತ್ತಿದ್ದ ಖತರ್ನಾಕ್ ಲೇಡಿ ಕಳ್ಳಿಯರ ಗ್ಯಾಂಗ್‌ ಅರೆಸ್ಟ್‌

ಅಲ್ಲಮಪ್ರಭು ಸ್ವಾಮೀಜಿ ಅಂತಿಮ ದರ್ಶನಕ್ಕೆ ರಾಜಕೀಯ ನಾಯಕರು ಸಹ ಆಗಮಿಸಿದ್ದರು. ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ್ ಕೋರೆ, ಸ್ಥಳೀಯ ಚಿಕ್ಕೋಡಿ ಶಾಸಕ ಗಣೇಶ್ ಹುಕ್ಕೇರಿ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ ಸೇರಿ ಹಲವು ರಾಜಕೀಯ ನಾಯಕರು ಶ್ರೀಗಳ ಅಂತಿಮ ದರ್ಶನ ಪಡೆದರು.

ಚಿಂಚಣಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ಮಾಡಿದ ಬಳಿಕ ಗದಗ ಜಿಲ್ಲೆ ನರಗುಂದ ತಾಲೂಕಿನ ಶಿರೋಳ ಗ್ರಾಮಕ್ಕೆ ಶ್ರೀಗಳ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲಾಯಿತು. 

ಒಟ್ಟಿನಲ್ಲಿ ಆಧ್ಯಾತ್ಮದೊಂದಿಗೆ ಬೆಳಗಾವಿಯ ಗಡಿಯಲ್ಲಿ ಮಠದ ಮೂಲಕವೇ ಕನ್ನಡ ತನವನ್ನು ಹಬ್ಬಿದ್ದ ಶ್ರೀಗಳ ಅಗಲಿಕೆ ಕನ್ನಡದ ಮನಸುಗಳು ಮತ್ತು ಅವರ ಅಪಾರ ಭಕ್ತ ಸಮೂಹಕ್ಕೆ ನೋವು ತಂದಿದೆ.

click me!