ಮಹಿಳಾ ಸುರಕ್ಷತೆ, ನಗರದ ಕ್ಯಾಬ್, ಟ್ಯಾಕ್ಸಿಗಳಿಗೆ ಹೊಸ ರೂಲ್| ಈ ಸಂಬಂಧ ಸಾರಿಗೆ ಇಲಾಖೆ ಹಾಗೂ ಖಾಸಗಿ ಸಾರಿಗೆ ಸಂಸ್ಥೆಗಳ ಜತೆ ಸಭೆ|
ಬೆಂಗಳೂರು[ಡಿ.05]: ಖಾಸಗಿ ವಾಹನಗಳಲ್ಲಿ ಮಹಿಳೆಯರ ಸುರಕ್ಷತೆಗೆ ಗಮನಹರಿಸಿರುವ ಪೊಲೀಸರು, ಈಗ ನಗರದ ಕ್ಯಾಬ್‌ಗಳಿಗೆ ಮಿರರ್ ಬಳಿ ಕಡ್ಡಾಯವಾಗಿ ಕ್ಯಾಮೆರಾ ಮತ್ತು ಡಿಸ್‌ಪ್ಲೇ ಬೋರ್ಡ್ ಅಳವಡಿಸುವಂತೆ ಸೂಚಿಸಿದ್ದಾರೆ.
ಓಲಾ, ಉಬರ್ ಸೇರಿದಂತೆ ನಗರದಲ್ಲಿ ಸಂಚರಿಸುವ ಕ್ಯಾಬ್‌ಗಳಲ್ಲಿ ಮಿರರ್ ಬಳಿ ಕ್ಯಾಮರಾಗಳನ್ನು ಅಳವಡಿಸುವಂತೆ ಚಾಲಕರಿಗೆ ಹೇಳಲಾಗಿದೆ. ಈ ಸಂಬಂಧ ಸಾರಿಗೆ ಇಲಾಖೆ ಹಾಗೂ ಖಾಸಗಿ ಸಾರಿಗೆ ಸಂಸ್ಥೆಗಳ ಜತೆ ಸಹ ಸಭೆ ನಡೆಸಲಾಗುತ್ತದೆ ಎಂದು ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.
undefined
ಸುರಕ್ಷಾ ಆ್ಯಪ್: 9 ನಿಮಿಷದಲ್ಲಿ ನೆರವು ನೀಡದ ಪೊಲೀಸರ ವಿರುದ್ಧ ಕ್ರಮ
ಕ್ಯಾಬ್‌ಗಳಲ್ಲಿ ಕ್ಯಾಮರಾ ಮಾತ್ರವಲ್ಲದೆ ಡಿಸ್‌ಪ್ಲೇ ಬೋರ್ಡ್‌ಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಚಾಲಕರಿಗೆ ಸೂಚಿಸಲಾಗಿದೆ. ಇದಕ್ಕೆ ಕೆಲವು ಚಾಲಕರು, ಕಾಲಾವಕಾಶ ಕೇಳಿದ್ದಾರೆ. ಕೆಲ ದಿನಗಳ ಬಳಿಕ ಸೂಚನೆ ಪಾಲನೆ ಮಾಡದ ಚಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಡಿಸೆಂಬರ್ 5ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: