ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು ರಾಷ್ಟ್ರಭಕ್ತರು. ಆದರೆ, ಅಧಿಕಾರಕ್ಕೋಸ್ಕರ ಭಾರತ, ಪಾಕಿಸ್ತಾನ ಎಂದು ಮಾಡಿದವರು ಕಾಂಗ್ರೆಸ್ಸಿಗರು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಶಿವಮೊಗ್ಗ (ಆ.15) : ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು ರಾಷ್ಟ್ರಭಕ್ತರು. ಆದರೆ, ಅಧಿಕಾರಕ್ಕೋಸ್ಕರ ಭಾರತ, ಪಾಕಿಸ್ತಾನ ಎಂದು ಮಾಡಿದವರು ಕಾಂಗ್ರೆಸ್ಸಿಗರು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ವಿಭಿಜಿನ್ ವಿಭಿಷಿಕ ಸ್ಮುತಿ ದಿವಸ್ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೋಸ್ಕರ ಕಾಂಗ್ರೆಸ್(Congress) ಭಾರತವನ್ನು ಒಡೆದಿರಬಹುದು. ಆದರೆ, ಈ ದೇಶವನ್ನು ಒಂದು ಮಾಡಬೇಕಂತ ಈಗಿನ ರಾಷ್ಟ್ರಭಕ್ತರಿಂದ ನರೇಂದ್ರ ಮೋದಿ(Narendra Modi) ನೇತೃತ್ವದಲ್ಲಿ ಪೂರ್ಣ ಪ್ರಯತ್ನ ನಡೀತಾ ಇದೆ. ಕಾಶ್ಮೀರ ಈ ದೇಶದ ಅವಿಭಾಜ್ಯ ಅಂಗ ಅಂದಾಗ ತಮಾಷೆ ಮಾಡ್ತಿದ್ರು, ಒಂದಿಂಚು ಕಾಶ್ಮೀರ ಭೂಭಾಗ ಮುಟ್ಟಲು ಬಿಡಲ್ಲ ಅಂತಿದ್ರು, ಈಗ ಕಾಶ್ಮೀರದ ಭೂ ಭಾಗ ಇಂದು ಹಿಂದೂಸ್ತಾನಕ್ಕೆ ಬರ್ತಾ ಇದೆ. ಆರ್ಟಿಕಲ… 370 ಈಗಾಗಲೇ ರದ್ದು ಆಗಿದೆ. ದೇಶದ ಪ್ರತಿಯೊಬ್ಬರಿಗೂ ನಾವು ಭಾರತೀಯರು ಅನ್ನುವ ಭಾವನೆ ಬರ್ತಾ ಇದೆ ಎಂದರು.
ಅಖಂಡ ಭಾರತವನ್ನು ಮತ್ತೆ ಒಗ್ಗೂಡಿಸುವುದೇ ನಮ್ಮ ಗುರಿ: ವಿಹೆಚ್‌ಪಿ, ಬಜರಂಗದಳ ಸಂಕಲ್ಪ
ಭಾರತದ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ಪ್ರಧಾನಿ ಆಗಲಿ ಅಂತ ಪಾಕಿಸ್ತಾನಿಗರು ಹೇಳ್ತಾ ಇದ್ದಾರೆ. ಇವತ್ತಲ್ಲ ನಾಳೆ ಹಿಂದುಸ್ಥಾನದಿಂದ ದೂರವಾಗಿರುವ ಪಾಕಿಸ್ತಾನ ಹಿಂದುಸ್ತಾನದ ಜೊತೆ ಸೇರಿಕೊಳ್ಳುತ್ತೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಸ್ವಾತಂತ್ರ್ಯ ಯೋಧರ ಆತ್ಮಕ್ಕೆ ಶಾಂತಿ ಸಿಗುತ್ತೆ. ಅಖಂಡ ಭಾರತ ಆಗಿಯೇ ಆಗುತ್ತೆ. ಇದರಲ್ಲಿ ಯಾವ ಅನುಮಾನವೂ ಇಲ್ಲ ಎಂದರು.
ಪಾಕ್‌ಗೆ ತಿನ್ನಲು ಅನ್ನವಿಲ್ಲದ ಪರಿಸ್ಥಿತಿ:
ಕಾಂಗ್ರೆಸ್ ಅವತ್ತು ಪಾಕಿಸ್ತಾನ, ಹಿಂದುಸ್ತಾನ ಅಂತ ಒಡೆದ ಪರಿಣಾಮ ಇಂದು ದೇಶದ ಮೂಲೆ ಮೂಲೆಗಳಲ್ಲಿ ಪಿಎಫ್‌ಐ ಸಂಘಟನೆಯಂಥ ಭಯೋತ್ಪಾದಕರು ಹುಟ್ಟಿಕೊಳ್ತಿದ್ದಾರೆ. ಇವತ್ತು ಭಯೋತ್ಪಾದಕ ಸಂಘಟನೆಗಳು ಹುಟ್ಟಿಕೊಳ್ಳಲು ಕಾರಣ ಕಾಂಗ್ರೆಸ್ಸಿಗರು ಅವತ್ತು ಸೊಕ್ಕಿನ ಮಾತು ಆಡಿದ್ದರು. ಮಹಮ್ಮದ್ ಅಲಿ ಜಿನ್ನಾ ‘ಹಸ್ತೆ ದೇಂಗೆ ಪಾಕಿಸ್ತಾನ ಲಡ್ತೆ ಲೇ ಹಿಂದುಸ್ತಾನ’ ಅಂದಿದ್ರು, ಈಗ ತಿನ್ನಲು ಅನ್ನ ಇಲ್ಲದ ಪರಿಸ್ಥಿತಿ ಪಾಕಿಸ್ತಾನಕ್ಕೆ ಬಂದಿದೆ ಎಂದು ಲೇವಡಿ ಮಾಡಿದರು.
ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಬೇಕು ಅಂದಾಗ ಒಂದಿಂಚು ಭೂಮಿ ಬಿಡಲ್ಲ ಅಂದಿದ್ದರು. ಇದೇ ಬರುವ ಜನವರಿಯಲ್ಲಿ ಅಯೋಧ್ಯೆಯ ಭವ್ಯ ಮಂದಿರ ಪೂರ್ಣಗೊಳ್ತಾ ಇದೆ. ಇಡೀ ಪ್ರಪಂಚದ ಜನ ಅಯೋಧ್ಯೆಗೆ ಬಂದು ಶ್ರೀರಾಮನಿಗೆ ಕೈಮುಗಿಯುವ ದಿನ ಬಹಳ ಹತ್ತಿರ ಬರ್ತಾ ಇದೆ. ಅದೇ ರೀತಿ ಕಾಶಿಯ ವಿಶ್ವನಾಥ ದೇವಸ್ಥಾನದಲ್ಲಿ ಈಶ್ವರ ಲಿಂಗ ಇದೆ. ಅಲ್ಲಿರುವ ಮಸೀದಿ ಕಿತ್ತುಹಾಕಿ ಪೂರ್ಣ ಕಾಶಿ ವಿಶ್ವೇಶ್ವರ ದೇಗುಲ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ವಿಜಯಪುರ: ಸ್ವಾತಂತ್ರ್ಯ ಹೋರಾಟಗಾರನಿಗೆ ಗೋಲ್ಡನ್ ಟೆಂಪಲ್!
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದು ಒಂದೆರಡು ವರ್ಷವಲ್ಲ. ಬ್ರಿಟಿಷರ, ಮೊಘಲರ ವಿರುದ್ಧ ಹೋರಾಟ ಮಾಡಿ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಕಾಂಗ್ರೆಸ್ ದೇಶ ವಿಭಜನೆ ಮಾಡಿದ್ದರಿಂದ ಯುವಕರಲ್ಲಿ ಕ್ಷಮೆ ಕೇಳಬೇಕು
- ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ