Airtel Server Down: ರಾಜ್ಯದಾದ್ಯಂತ ಆರು ಗಂಟೆಗಳ ಕಾಲ ಸೇವೆ ವ್ಯತ್ಯಯ, ಬಳಕೆದಾರರಿಂದ ಹಿಡಿಶಾಪ!

Kannadaprabha News, Ravi Janekal |   | Kannada Prabha
Published : Aug 26, 2025, 07:03 AM IST
Airtel Recharge with Free OTT

ಸಾರಾಂಶ

ಭಾನುವಾರ ಏರ್‌ಟೆಲ್ ಸೇವೆಯಲ್ಲಿ ಆರು ಗಂಟೆಗಳ ಕಾಲ ವ್ಯತ್ಯಯ ಉಂಟಾಗಿ, ಬೆಂಗಳೂರಿನ ಸಾವಿರಾರು ಗ್ರಾಹಕರು ಸಂಪರ್ಕ ಕಳೆದುಕೊಂಡರು. ಡೌನ್‌ಡೆಕ್ಟರ್ ವರದಿಯ ಪ್ರಕಾರ, ಬಳಕೆದಾರರು ಕರೆ ಮಾಡಲು ಮತ್ತು ಇಂಟರ್ನೆಟ್ ಬಳಸಲು ಸಾಧ್ಯವಾಗಲಿಲ್ಲ. 

ಬೆಂಗಳೂರು ಆ.26: ಟೆಲಿಕಾಂ ದಿಗ್ಗಜ ಏರ್‌ಟೆಲ್ ಭಾನುವಾರ ತನ್ನ ಸೇವೆಯಲ್ಲಿ ಅಡಚಣೆಯನ್ನು ಎದುರಿಸಿತು. ಇದರಿಂದಾಗಿ ರಾಜ್ಯದಾದ್ಯಂತ, ವಿಶೇಷವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾವಿರಾರು ಗ್ರಾಹಕರು ಆರು ಗಂಟೆಗಳ ಕಾಲ ಕರೆಗಳನ್ನು ಮಾಡಲು ಅಥವಾ ಇಂಟರ್ನೆಟ್ ಬಳಸಲು ಸಾಧ್ಯವಾಗಲಿಲ್ಲ. ಈ ಕುರಿತು ಪ್ರಿಪೇಯ್ಡ್, ಪೋಸ್ಟ್‌ಪೇಯ್ಡ್ ಮತ್ತು ಬ್ರಾಡ್‌ಬ್ಯಾಂಡ್ ಬಳಕೆದಾರರು ದೂರು ಸಲ್ಲಿಸಿದರು ಮತ್ತು ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ವಿಚಾರ ತಿಳಿಸಿದರು.

ಔಟೇಜ್ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ ಡೌನ್‌ಡೆಕ್ಟರ್‌ನಲ್ಲಿ ಬೆಳಿಗ್ಗೆ 10.44ರ ಸುಮಾರಿಗೆ ಪ್ರಾರಂಭವಾಗಿ ಮಧ್ಯಾಹ್ನ 12.15 ರ ಹೊತ್ತಿಗೆ ಅನೇಕ ದೂರುಗಳು ದಾಖಲಾಗಿವೆ. 7,100ಕ್ಕೂ ಹೆಚ್ಚು ಬಳಕೆದಾರರು ಕನೆಕ್ಟಿವಿಟಿ ಸಮಸ್ಯೆಗಳನ್ನು ಎದುರಿಸಿದ್ದಾರೆ. ದುರ್ಬಲ ಸಿಗ್ನಲ್‌ ಮತ್ತು ಕೆಲವು ಸ್ಥಳಗಳಲ್ಲಿ ಸಂಪೂರ್ಣ ಬ್ಲಾಕೌಟ್ ಆಗಿರುವ ಕುರಿತು ಬಳಕೆದಾರರು ವರದಿ ಮಾಡಿದ್ದಾರೆ. ಇದು ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಕಂಪನಿಯ ಎರಡನೇ ಪ್ರಮುಖ ಸೇವಾ ವೈಫಲ್ಯವಾಗಿದೆ. ಆಗಸ್ಟ್ 19 ರಂದು, ದೆಹಲಿ NCR ನಲ್ಲಿ 3,500ಕ್ಕೂ ಹೆಚ್ಚು ಬಳಕೆದಾರರು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸಿದ್ದರು.

ಡೌನ್‌ಡಿಟೆಕ್ಟರ್ ಡೇಟಾ ಪ್ರಕಾರ, ಶೇ 52 ರಷ್ಟು ದೂರುದಾರರು 'ಸಿಗ್ನಲ್ ಇಲ್ಲ' ಎಂಬ ಸಂದೇಶವನ್ನು ಸ್ವೀಕರಿಸಿದ್ದಾರೆ. ಶೇ 31ರಷ್ಟು ಜನರು ಮೊಬೈಲ್ ಡೇಟಾ ಬಳಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ. ಕರ್ನಾಟಕವನ್ನು ಹೊರತುಪಡಿಸಿ, ಚೆನ್ನೈ, ಹೈದರಾಬಾದ್ ಮತ್ತು ಕೋಲ್ಕತ್ತಾದ ಬಳಕೆದಾರರು ಸಹ ಇಂಟರ್ನೆಟ್ ಬಳಸುವಾಗ ಮತ್ತು ಕರೆಗಳನ್ನು ಮಾಡುವಾಗ ಅಡಚಣೆಗಳನ್ನು ಎದುರಿಸಿರುವ ಕುರಿತು ದೂರು ಸಲ್ಲಿಸಿರುವುದಾಗಿ ಡೌನ್‌ಡಿಟೆಕ್ಟರ್ ವರದಿ ಮಾಡಿದೆ.

X ನಲ್ಲಿ ಬಳಕೆದಾರರಿಗೆ ಪ್ರತಿಕ್ರಿಯಿಸಿದ ಏರ್‌ಟೆಲ್, 'ತಾತ್ಕಾಲಿಕ ಸಂಪರ್ಕ ಸಮಸ್ಯೆಗಳಿಂದ' ಈ ಅಡಚಣೆ ಉಂಟಾಗಿದೆ ಮತ್ತು ಒಂದು ಗಂಟೆಯೊಳಗೆ ಸೇವೆಗಳನ್ನು ಪುನಃಸ್ಥಾಪಿಸಲಾಗುವುದು ಎಂದು ಭರವಸೆ ನೀಡಿತು. ಮಧ್ಯಾಹ್ನ 1 ಗಂಟೆಯ ನಂತರ ಸಮಸ್ಯೆಯು ಪರಿಹಾರವಾಗಲು ಪ್ರಾರಂಭಿಸಿತು. ಆದಾಗ್ಯೂ, ಸಂಜೆ 4 ಗಂಟೆಯ ಹೊತ್ತಿಗೆ, 150ಕ್ಕೂ ಹೆಚ್ಚು ಬಳಕೆದಾರರು ಇನ್ನೂ ಅಡಚಣೆ ಎದುರಿಸಿದರು.

'ಈ ಸಮಸ್ಯೆ ಆರು ಗಂಟೆಗಳಿಗಿಂತ ಹೆಚ್ಚು ಕಾಲ ಇತ್ತು ಎಂದು ಅನೇಕ ಗ್ರಾಹಕರು ಹೇಳಿದ್ದಾರೆ. 'ಏರ್‌ಟೆಲ್ ಪೋಸ್ಟ್‌ಪೇಯ್ಡ್ ಆರು ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸುತ್ತಿಲ್ಲ- ಕರೆಗಳಿಲ್ಲ, ಇಂಟರ್ನೆಟ್ ಇಲ್ಲ. ಈ ಸಮಯದಲ್ಲಿ ನಾವು ಗ್ರಾಹಕ ಸೇವಾ ಕೇಂದ್ರವನ್ನು ಸಹ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಟ್ರಾಯ್ ಕ್ರಮ ಕೈಗೊಳ್ಳಬೇಕು. ಏರ್‌ಟೆಲ್ ಇಂಡಿಯಾ ನಾಗರಿಕರನ್ನು ಮೋಸಗೊಳಿಸಿದಂತೆ ಕಾಣುತ್ತಿದೆ' ಎಂದು ಬಳಕೆದಾರರು X ನಲ್ಲಿ ಪೋಸ್ಟ್ ಮಾಡಿದ್ದಾರೆ.

'ಯಾರಾದರೂ ಏರ್‌ಟೆಲ್ ವೈಫೈ ಅಥವಾ ಏರ್‌ಟೆಲ್ ಕರೆ ಮಾಡುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಯೇ? ಬೆಳಿಗ್ಗೆಯಿಂದ ನನಗೆ ಇಂಟರ್ನೆಟ್ ಸಿಗಲಿಲ್ಲ ಮತ್ತು ಅವರ ಗ್ರಾಹಕ ಸೇವಾ ವ್ಯಕ್ತಿಗಳು ಸಹ ಕರೆಗಳಿಗೆ ಉತ್ತರಿಸುತ್ತಿಲ್ಲ. @Airtel_Presence @airtelIndia' ಎಂದು ಮತ್ತೊಬ್ಬ ಬಳಕೆದಾರ ಬರೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೈಸೂರು ಅರಮನೆ ಮುಂಭಾಗ ಹೀಲಿಯಂ ಸಿಲಿಂಡರ್‌ ಸ್ಫೋಟ, ಹಲವು ಆಯಾಮದಲ್ಲಿ ಪೊಲೀಸರ ತನಿಖೆ!
ಬಸ್‌ ದುರಂತವಾದ್ರೂ ಎಚ್ಚೆತ್ತುಕೊಳ್ಳದ KSRTC, ಫೋನ್‌ ಕಿವಿಯಲ್ಲಿಟ್ಟುಕೊಂಡೇ ಡ್ರೈವಿಂಗ್‌!